1.30.2012

"ಉತ್ತಿಷ್ಠ ಕೌಂತೇಯ" ಕಥಾಕೀರ್ತನ

"ಉತ್ತಿಷ್ಠ ಕೌಂತೇಯ" ಕಥಾಕೀರ್ತನ


ಕಥಾಕೀರ್ತನಗಾರ್ತಿ:
ವರ್ಷಿಣಿ ವಿಜಯ್
ಸಂಗೀತ ಸಂಯೋಜನೆ:
ಪ್ರವೀಣ್ ಡಿ.ರಾವ್

ದಿನಾಂಕ: 31ನೇ ಜನವರಿ, 2012 (ಮಂಗಳವಾರ)
ಸಮಯ: ಸಂಜೆ 6.30ಕ್ಕೆ

ಸ್ಥಳ: ಬೆಂಗಳೂರು ಇಂಟರ್ ನ್ಯಾಷನಲ್ ಅಕಾಡೆಮಿ
ಹಳೆ ಎನ್.ಎಸ್.ವಿ.ಕೆ. ಶಾಲೆ ಆವರಣ,
7 ನೇ ಹಂತ, ಜಯನಗರ, ಬೆಂಗಳೂರು

ಮುಖ್ಯ ಅತಿಥಿ:
ಶತಾವಧಾನಿ ಗಣೇಶ

ವರ್ಷಿಣಿ ವಿಜಯ್ ಪರಿಚಯ:

ಹರಿಕಥಾ ಸಂಪ್ರದಾಯಕ್ಕೆ ಸೇರಿದ ಕುಟುಂಬದ ಹೊಸ ತಲೆಮಾರಿನ ಹರಿಕಥಾಗಾರ್ತಿ ವರ್ಷಿಣಿ ಅವರು ಖ್ಯಾತ ಹರಿಕಥಾಕಾರ ನಾದಗಂಧರ್ವ ಡಾ. ಟಿ.ವಿ. ಕರಿಗಿರಿಯಾಚಾರ್ ಅವರ ಮರಿಮಗಳು. ತನ್ನ ಅಜ್ಜ ಪ್ರೋ. ಟಿ.ಕೆ. ರಾಮಚಂದ್ರ ಅವರಿಂದ ಹರಿಕಾಥಾ ಕೀರ್ತನ ವಿದ್ಯೆಯಲ್ಲಿ ಪಾರಂಗತಿ ಪಡೆದಿದ್ದಾರೆ. ಅಷ್ಟೇ ಅಲ್ಲ ಗೋಪಿನಾಥದಾಸ ನ್ಯಾಸ ಮೂಲಕ ಹತ್ತಾರು ಹರಿಕಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಈಗ ಹೊಸ ತಲೆಮಾರಿನ ಯುವಕ-ಯುವತಿಯರಿಗೂ ಇಷ್ಟವಾಗುವ ರೀತಿಯಲ್ಲಿ ವಿಭಿನ್ನವಾದ ರೀತಿಯ ಕಥಾ ವಿವರಣೆಯ ಮೂಲಕ "ಉತ್ತಿಷ್ಠ ಕೌಂತೇಯ" ಕೀರ್ತನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಆಧುನಿಕ ಮಾಧ್ಯಮಗಳ ಸ್ಪರ್ಧೆಯ ನಡುವೆಯೂ ಕೀರ್ತನ ಕಲೆಯನ್ನು ಉಳಿಸಿ ಬೆಳೆಸುವ ಸಂಕಲ್ಪವನ್ನು ವರ್ಷಿಣಿ ಮಾಡಿದ್ದಾರೆ. ಆ ನಿಟ್ಟಿನಲ್ಲಿ ವರ್ಷಿಣಿ ಅವರ "ಧನುರ್ಭಂಜನ" ಮೊದಲ ಹೆಜ್ಜೆಯಾಗಿತ್ತು. ಈಗ "ಉತ್ತಿಷ್ಠ ಕೌಂತೇಯ" ಹರಿಕಥಾ ಕೀರ್ತನೆಯ ಮೂಲಕ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.

1.22.2012

"ಆಲ್ವಿನ್" ವಿತರಣಾ ಜಾಲ ವಿಸ್ತರಣೆ

"ಆಲ್ವಿನ್" ವಿತರಣಾ ಜಾಲ ವಿಸ್ತರಣೆ



"ಆಲ್ವಿನ್" ಐಸ್-ಕ್ರೀಮ್ ಬೆಂಗಳೂರು ದಕ್ಷಿಣ ವಿಭಾಗದ ವಿತರಣಾ ಜಾಲಕ್ಕೆ ಚಾಲನೆ ನೀಡಿದ ಕಿರುತೆರೆ ನಟಿ ಶೋಭಾ ಎಂ. ಲೋಲನಾಥ್ ಅವರೊಂದಿಗೆ ಮೋಹಿತ್ ಎಂಟರ್ ಪ್ರೈಸಿಸ್ ಸಂಸ್ಥೆಯ ಮುಖ್ಯಸ್ಥ ಕೆ.ಎಸ್. ವೆಂಕಟರಾಮನ್.


ಚಳಿಗಾಲ ಕಳೆಯುತ್ತಾ ಬಂತು. ಇನ್ನೇನು ಬಿಸಿಲಿನ ಬೇಗೆ ಶುರು. ತಣ್ಣನೆಯ ಪಾನೀಯ, ಹಣ್ಣಿನ ರಸ ಕುಡಿಯಬೇಕು, ಐಸ್-ಕ್ರೀಮ್ ತಿನ್ನಬೇಕು ಎಂದೆನೆಸುವುದೂ ಸಹಜ. ಐಸ್-ಕ್ರೀಮ್ ಎಂದ ತಕ್ಷಣ ಹಲವಾರು ಬ್ರಾಂಡ್ ಗಳು ನೆನಪಾಗುತ್ತವೆ. ಆದರೆ ಹೆಚ್ಚಿನವು ಕೃತಕ ಬಣ್ಣಗಳ ಅಲಂಕಾರದೊಂದಿಗೆ ಕಣ್ಣು ಸೆಳೆಯುತ್ತವೆ. ರುಚಿಯ ವಿಷಯ ಬಂದಾಗ ಮಾತ್ರ ಹೆಚ್ಚಿನವರ ಆಯ್ಕೆ "ಆಲ್ವಿನ್" ಐಸ್-ಕ್ರೀಮ್.

ಕೃತಕ ಬಣ್ಣಗಳ ಸೋಗಿಲ್ಲದ ಪ್ರಕೃತಿ ಸಹಜವಾದ ಅಂಶಗಳನ್ನು ಭಾಗಶಃ ಅಳವಡಿಸಿಕೊಂಡ "ಆಲ್ವಿನ್" ಐಸ್-ಕ್ರೀಮ್ ಮಾತ್ರ ರುಚಿ ಹಾಗೂ ಶುಚಿ. ಬಹುಮಟ್ಟಿಗೆ ಪರಿಶುದ್ಧತೆಯನ್ನು ಕಾಯ್ದುಕೊಂಡಿರುವ "ಆಲ್ವಿನ್" ಈಗ ಉದ್ಯಾನನಗರಿಯ ಜನರ ಇಷ್ಟವಾದ ಐಸ್-ಕ್ರೀಮ್. ಆದ್ದರಿಂದಲೇ ಆಲ್ವಿನ್ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದೆ. ನಗರದ ದಕ್ಷಿಣ ಭಾಗಕ್ಕೂ ತನ್ನ ವಿತರಣೆಯ ಜಾಲವನ್ನು ವಿಶಾಲಗೊಳಿಸಿದೆ.

ಬೆಂಗಳೂರು ದಕ್ಷಿಣದ ವಿತರಣಾ ಜಾಲವನ್ನು ಕಿರುತೆರೆಯ ಜನಪ್ರಿಯ ನಟಿ ಶೋಭಾ ಎಂ.ಲೋಲನಾಥ್ ಅವರು ಇತ್ತೀಚೆಗೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಬಾಲ ಕಲಾವಿದೆ ಸಾನ್ಯಾ ಅಯ್ಯರ್ ಅವರೂ ಉಪಸ್ಥಿತರಿದ್ದರು. ಪುಟಾಣಿ ಮಕ್ಕಳು ಇವರಿಂದ ಐಸ್-ಕ್ರೀಮ್ ಸ್ವೀಕರಿಸಿ "ಆಲ್ವಿನ್" ಸವಿಯನ್ನು ಆಸ್ವಾಧಿಸಿದರು.

9.12.2011

ವರ್ಷಿಣಿಯ ಕಥಾಕೀರ್ತನ


ವರ್ಷಿಣಿಯ ಕಥಾಕೀರ್ತನ

"ಧನುರ್ಭಂಜನ" ಕಥಾಕೀರ್ತನ

ಕಥಾಕೀರ್ತನಗಾರ್ತಿ: ವರ್ಷಿಣಿ ವಿಜಯ್

ದಿನಾಂಕ: 13ನೇ ಸೆಪ್ಟೆಂಬರ್, 2011 (ಮಂಗಳವಾರ)

ಸಮಯ: ಸಂಜೆ 6.00ಕ್ಕೆ

ಸ್ಥಳ: ಬೆಂಗಳೂರು ಇಂಟರ್ ನ್ಯಾಷನಲ್ ಅಕಾಡೆಮಿ
(ಹಳೆ ಎನ್.ಎಸ್.ವಿ.ಕೆ. ಶಾಲೆ ಆವರಣ)
7 ನೇ ಹಂತ, ಜಯನಗರ, ಬೆಂಗಳೂರು


ವರ್ಷಿಣಿ ವಿಜಯ್ ಪರಿಚಯ:

ಹರಿಕಥಾ ಸಂಪ್ರದಾಯಕ್ಕೆ ಸೇರಿದ ಕುಟುಂಬದ ಹೊಸ ತಲೆಮಾರಿನ ಹರಿಕಥಾಗಾರ್ತಿ ವರ್ಷಿಣಿ ಅವರು ಖ್ಯಾತ ಹರಿಕಥಾಕಾರ ನಾದಗಂಧರ್ವ ಡಾ. ಟಿ.ವಿ. ಕರಿಗಿರಿಯಾಚಾರ್ ಅವರ ಮರಿಮಗಳು. ತನ್ನ ಅಜ್ಜ ಪ್ರೋ. ಟಿ.ಕೆ. ರಾಮಚಂದ್ರ ಅವರಿಂದ ಹರಿಕಾಥಾ ಕೀರ್ತನ ವಿದ್ಯೆಯಲ್ಲಿ ಪಾರಂಗತಿ ಪಡೆದಿದ್ದಾರೆ. ಅಷ್ಟೇ ಅಲ್ಲ ಗೋಪಿನಾಥದಾಸ ನ್ಯಾಸ ಮೂಲಕ ಹತ್ತಾರು ಹರಿಕಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಈಗ ಹೊಸ ತಲೆಮಾರಿನ ಯುವಕ-ಯುವತಿಯರಿಗೂ ಇಷ್ಟವಾಗುವ ರೀತಿಯಲ್ಲಿ ವಿಭಿನ್ನವಾದ ರೀತಿಯ ಕಥಾ ವಿವರಣೆಯ ಮೂಲಕ "ಧನುರ್ಭಂಜನ" ಕೀರ್ತನಾ ಕಾರ್ಯಕ್ರಮ ನೀಡಲು ಆರಂಭಿಸಿದ್ದಾರೆ. ಆಧುನಿಕ ಮಾಧ್ಯಮಗಳ ಸ್ಪರ್ಧೆಯ ನಡುವೆಯೂ ಕೀರ್ತನ ಕಲೆಯನ್ನು ಉಳಿಸಿ ಬೆಳೆಸುವ ಸಂಕಲ್ಪವನ್ನು ವರ್ಷಿಣಿ ಮಾಡಿದ್ದಾರೆ. ಆ ನಿಟ್ಟಿನಲ್ಲಿ "ಧನುರ್ಭಂಜನ" ಮೊದಲ ಹೆಜ್ಜೆಯಾಗಿದೆ.


ಧನ್ಯವಾದಗಳು
ಶೋಭಾ ಎಂ. ಲೋಲನಾಥ್
ಮೊಬೈಲ್: 9845339262

7.29.2011

ಸರ್ಕಾರಿ ಶಾಲಾ ಮಕ್ಕಳಿಗೆ ಶೂ ಮತ್ತು ಡೆಸ್ಕ್ ವಿತರಣೆ

ಬೆಂಗಳೂರಿನಲ್ಲಿ ನಡೆದ ರೋಟರಿ ರಾಮಮೂರ್ತಿನಗರ ಘಟಕದ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭವನ್ನು ಅಂತರರಾಷ್ಟೀಯ ರೂಪದರ್ಶಿ ಬಿಯಾ ಬೋರ್ಕರ್ ಅವರು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು. ಅಧ್ಯಕ್ಷ ಡಾ. ರಾಜಕುಮಾರ್ ಶೇಠ್ (ಎಡತುದಿ), ಹಿರಿಯ ಪತ್ರಕರ್ತ ಗೋಪಾಲಕೃಷ್ಣ ಹೆಗಡೆ (ನಡುವೆ) ಹಾಗೂ ರೋಟರಿ ಜಿಲ್ಲಾ ಗವರ್ನರ್ ಆರ್. ಬದರಿ ಪ್ರಸಾದ್ ಉಪಸ್ಥಿತರಿದ್ದರು.


ರೋಟರಿ ರಾಮಮೂರ್ತಿನಗರ ಘಟಕದ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ

ಸರ್ಕಾರಿ ಶಾಲಾ ಮಕ್ಕಳಿಗೆ
ಶೂ ಮತ್ತು ಡೆಸ್ಕ್ ವಿತರಣೆ


ಬೆಂಗಳೂರು: ಅಧಿಕಾರ ಸ್ವೀಕಾರ ಸಮಾರಂಭದಿಂದಲೇ ಸಮಾಜಮುಖಿಯಾಗುವ ಕಾರ್ಯವನ್ನು ಮಾಡಲು ಮುಂದಾದ ರೋಟರಿ ರಾಮಮೂರ್ತಿನಗರ ಘಟಕದ ನೂತನ ಪದಾಧಿಕಾರಿಗಳು ಸರ್ಕಾರಿ ಶಾಲಾ ಮಕ್ಕಳಿಗೆ ಶೂ ಹಾಗೂ ಡೆಸ್ಕ್ ವಿತರಣೆ ಮಾಡಿದರು.

ಸಿ.ಎಂ.ಆರ್. ಹೆಲ್ತ್ ಕ್ಯಾಂಪಸ್ ಭವನದಲ್ಲಿ ನಡೆದ ಸಮಾರಂಭದಲ್ಲಿ 500 ಶಾಲಾ ಮಕ್ಕಳಿಗೆ ಶೂಗಳನ್ನು ಅಧ್ಯಕ್ಷ ಡಾ. ರಾಜಕುಮಾರ್ ಶೇಠ್ ಅವರು ವಿತರಣೆ ಮಾಡಿದರು. ಅಷ್ಟೇ ಅಲ್ಲ ರಾಮಮೂರ್ತಿ ನಗರ ಭಾಗದಲ್ಲಿನ ಸರ್ಕಾರಿ ಶಾಲೆಗಳಿಗೆ 300 ಡೆಸ್ಕ್ ಕೂಡ ನೀಡಲಾಯಿತು.

ಇನ್ನೊಂದು ವಿಶೇಷವೆಂದರೆ ಪರಿಸರ ಪ್ರೇಮದ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಎಲ್ಲ ಅತಿಥಿಗಳಿಗೆ ಹಾಗೂ ಪ್ರೇಕ್ಷಕರಿಗೆ ಸಸಿಗಳನ್ನು ನೀಡಲಾಯಿತು. ಜೊತೆಗೆ ನಗರದಲ್ಲಿ ಶಬ್ಧ ಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರೋಟರಿ ರಾಮಮೂರ್ತಿ ನಗರದ ಸದಸ್ಯರೆಲ್ಲರೂ ಸಾಧ್ಯವಾದ ಮಟ್ಟಿಗೆ ತಮ್ಮ ವಾಹನಗಳ ಹಾರ್ನ್ ಅನ್ನು ಕಡಿಮೆ ಬಳಸುವ ಪ್ರಮಾಣವನ್ನೂ ಮಾಡಿದರು.

ಸಮಾರಂಭದಲ್ಲಿ ಜಿಲ್ಲಾ ಗವರ್ನರ್ ಆರ್. ಬದರಿ ಪ್ರಸಾದ್, ಹಿರಿಯ ಪತ್ರಕರ್ತ ಗೋಪಾಲಕೃಷ್ಣ ಹೆಗಡೆ, ಅಂತರರಾಷ್ಟ್ರೀಯ ರೂಪದರ್ಶಿ ಬಿಯಾ ಬೋರ್ಕರ್ ಉಪಸ್ಥಿತರಿದ್ದರು.

ರೋಟರಿ ರಾಮಮೂರ್ತಿನಗರ ಘಟಕದ ನೂತನ ಪದಾಧಿಕಾರಿಗಳು: ಡಾ. ರಾಜಕುಮಾರ್ ಶೇಠ್ (ಅಧ್ಯಕ್ಷ), ರಾಜ್ ಎ. ಬಾಲನ್ (ಕಾರ್ಯದರ್ಶಿ), ಡಾ. ಸಿ. ಗಿರೀಶ್ (ಉಪಾಧ್ಯಕ್ಷ), ಎನ್. ಕಿಶೋರ್ (ಕಾರ್ಯನಿರ್ವಾಹಕ ಕಾರ್ಯದರ್ಶಿ), ಜಿ. ಶ್ರೀನಿವಾಸ್ (ಖಜಾಂಚಿ); ಸಮಿತಿ ಸದಸ್ಯರು: ಮಂಜುನಾಥ್, ಆರ್. ಸುರೇಶ್, ಕೆ. ನಾರಾಯಣ್, ಕೆ. ಶ್ರೀನಿವಾಸನ್, ಎ. ರಾಮಚಂದ್ರ ರೆಡ್ಡಿ, ಪಿ. ನಾರಾಯಣಸ್ವಾಮಿ, ಡಾ. ವಿ.ಎಂ. ನಾರಾಯಣ್, ಎಚ್. ಮೋಹನಾಂಬ, ಆರ್. ಕೊದಂಡ ರೆಡ್ಡಿ, ಕೆ. ಮುರಳೀಧರ್, ಡಾ. ಸಿ.ಎಂ. ಬಾಸ್ಕರ್ ರೆಡ್ಡಿ, ಕೆ.ಸಿ. ಜಗನ್ನಾಥ್ ರೆಡ್ಡಿ.


3.17.2011

ಆಹ್ವಾನ ಪತ್ರಿಕೆ..."ಕ್ರಿಕೆಟ್ ಪ್ರೇಮ"ವನ್ನು ಅನಾವರಣಗೊಳಿಸುವ ವಿಶಿಷ್ಟ ವಿನ್ಯಾಸದ "ಸೀರೆ" ಪ್ರದರ್ಶನ



ಆಹ್ವಾನ ಪತ್ರಿಕೆ

ಪತ್ರಕರ್ತರು, ಟೆಲಿವಿಷನ್ ಮಾಧ್ಯಮ ಪ್ರತಿನಿಧಿಗಳು ಹಾಗೂ ಛಾಯಾಗ್ರಾಹಕರಿಗೆ

ಹವ್ಯಾಸಿ ವಸ್ತ್ರ ವಿನ್ಯಾಸಕಿ ಸವಿತಾ ನಿರಂಜನ್ ಅವರು ರೂಪಿಸಿರುವ "ಕ್ರಿಕೆಟ್ ಪ್ರೇಮ"ವನ್ನು ಅನಾವರಣಗೊಳಿಸುವ ವಿಶಿಷ್ಟ ವಿನ್ಯಾಸದ "ಸೀರೆ" ಪ್ರದರ್ಶನ

ಸವಿತಾ ನಿರಂಜನ್ ಅವರು ವಿಶ್ವಕಪ್ ಕ್ರಿಕೆಟ್ ಸಂದರ್ಭದಲ್ಲಿ ರೂಪಿಸಿರುವ ಕ್ರಿಕೆಟ್ ಪ್ರೀತಿಯನ್ನು ವ್ಯಕ್ತಪಡಿಸುವ ಆಕರ್ಷಕವಾದ ಸೀರೆಯನ್ನು ರೂಪದರ್ಶಿಗಳು ಧರಿಸಿಕೊಂಡು ಪತ್ರಕರ್ತರು, ಟೆಲಿವಿಷನ್ ಮಾಧ್ಯಮ ಪ್ರತಿನಿಧಿಗಳು ಹಾಗೂ ಛಾಯಾಗ್ರಾಹಕರ ಎದುರು ಪ್ರದರ್ಶನ ಮಾಡಲಿದ್ದಾರೆ. ಛಾಯಾಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಹಾಗೂ ಬ್ಯಾಕ್ ಡ್ರಾಪ್ ಮುಂದೆ ರೂಪದರ್ಶಿಗಳ ಪ್ರದರ್ಶನಕ್ಕೆ ವ್ಯವಸ್ಥೆನ್ನು ಡಿಸೈನರ್ ಸವಿತಾ ಅವರ ನಿವಾಸದಲ್ಲಿಯೇ ಮಾಡಲಾಗಿದೆ.

ದಿನಾಂಕ: 19ನೇ ಮಾರ್ಚ್ 2011 (ಶನಿವಾರ)

ಸಮಯ: ಬೆಳಿಗ್ಗೆ 10.00ರಿಂದ ಮಧ್ಯಾಹ್ನ 12.30ರವರೆಗೆ

ಸ್ಥಳ: "ರಂಗನಾಥ ನಿಲಯ"
ಸೇಂಟ್ ಫಿಲೋಮಿನಾ ಶಾಲೆ ಹತ್ತಿರ,
(ಮಣೀಶ್ ಕಾರ್ತಿಕೇಯ ಅಪಾರ್ಟ್ ಮೆಂಟ್ ಹಿಂದೆ)
2ನೇ ಹಂತ, ಕುಮಾರಸ್ವಾಮಿ ಲೇಔಟ್,
ಬೆಂಗಳೂರು-560 078

ಹೆಚ್ಚಿನ ಮಾಹಿತಿಗಾಗಿ ಹಾಗೂ ವಿಳಾಸ ಪತ್ತೆ ಮಾಡುವುದು ಕಷ್ಟವಾದಲ್ಲಿ ಸಂಪರ್ಕಿಸಿ:
ಶೋಭಾ ಎಂ. ಲೋಲನಾಥ್
ಕಾರ್ಯದರ್ಶಿ, "ಜಿಎನ್ಎಸ್" ಯಾಮಿನಿ ಫೌಂಡೇಷನ್
ಮೊಬೈಲ್ ಸಂಖ್ಯೆ: 9845339262

* * * * * * * * * * * * * * * * * *

ಪತ್ರಿಕಾ ಪ್ರಕಟಣೆ

ಕ್ರಿಕೆಟ್ ಪ್ರೀತಿ ಅನಾವರಣಗೊಳಿಸುವ ಸೀರೆ

ಹವ್ಯಾಸಿ ಡಿಸೈನರ್ ಸವಿತಾ ನಿರಂಜನ್ ವಿನ್ಯಾಸಗೊಳಿಸಿರುವ ವಿಶಿಷ್ಟ ಸೀರೆಯ ಸೊಬಗು

ಕ್ರಿಕೆಟ್ ಪ್ರೇಮಿಯೂ ಆಗಿರುವ ಬೆಂಗಳೂರಿನ ಹವ್ಯಾಸಿ ವಸ್ತ್ರವಿನ್ಯಾಸಕಿ ಸವಿತಾ ನಿರಂಜನ್ ಅವರು ಕ್ರಿಕೆಟ್ ಮೇಲಿನ ತಮ್ಮ ಪ್ರೀತಿಯನ್ನು ವಿಶಿಷ್ಟವಾಗಿ ವ್ಯಕ್ತಪಡಿಸುವ ಉದ್ದೇಶದಿಂದ ಅತ್ಯಾಕರ್ಷಕವಾದ ಹಾಗೂ ಅಮೂಲ್ಯವಾದ ಸೀರೆಯನ್ನು ವಿನ್ಯಾಸಗೊಳಿಸಿದ್ದಾರೆ.

ವಿಶ್ವಕಪ್ ಕ್ರಿಕೆಟ್ ಉತ್ಸಾಹದ ಪ್ರವಾಹದಲ್ಲಿ ತಾವೂ ಇದ್ದೇವೆ, ತಮ್ಮ ಕ್ರಿಕೆಟ್ ಪ್ರೀತಿಯೂ ಅಪಾರವಾದದ್ದು ಎನ್ನುವುದನ್ನು ಬಿಂಬಿಸುವ ಆಶಯವೇ ಈ ಸುಂದರವಾದ ಅಂದದ ಸೀರೆಯ ವಿನ್ಯಾಸ ರೂಪುಗೊಳ್ಳಲು ಕಾರಣ. ಸುಮಾರು ಇಪ್ಪತ್ತು ದಿನಗಳವರೆಗೆ ಶ್ರಮವಹಿಸಿ ಸವಿತಾ ನಿರಂಜನ್ ಅವರು ಈ ಸೀರೆಯನ್ನು ಸಜ್ಜುಗೊಳಿಸಿದ್ದಾರೆ. ನೋಡಲು ಆಕರ್ಷಕವಾಗಿರುವ ಜೊತೆಗೆಯೇ ಅಮೂಲ್ಯವಾದದ್ದು ಎನ್ನುವುದನ್ನು ಸ್ಪಷ್ಟವಾಗಿಸುವಂಥ ವಿನ್ಯಾಸ ಈ ಸೀರೆಯದ್ದು.

ಬೆಳ್ಳಿಯ ಎಳೆಗಳ ಕುಸುರಿ ಝರಿ ಹಾಗೂ ಬೆಲೆಯುಳ್ಳ ಹರಳುಗಳಿಂದ ಸೀರೆಯನ್ನು ಅಲಂಕರಿಸಲಾಗಿದೆ. ಭಾರತದ ವಿಶಿಷ್ಟವಾದ ಹಾಗೂ ಸೂಕ್ಷ್ಮವಾದ ಕುಸುರಿ ಕಲೆಯಿಂದ ಸೀರೆಯ ಸೊಗಸು ಹೆಚ್ಚಿಸಲಾಗಿದೆ. ಯಾವುದೇ ದೇಶದವರು ವಿಶ್ವಕಪ್ ಗೆಲ್ಲಲಿ; ಆ ತಂಡದ ನಾಯಕನ ಪತ್ನಿ ಇಲ್ಲವೆ ಆತ್ಮೀಯ ಗೆಳತಿಗೆ ಈ ಸೀರೆಯು ಉಡುಗೊರೆಯಾಗಿ ಭಾರತದ ಕಡೆಯಿಂದ ಸೇರಬೇಕು ಎನ್ನುವುದು ಸವಿತಾ ನಿರಂಜನ್ ಅವರ ಆಶಯ.

ಹವ್ಯಾಸಿ ವಿನ್ಯಾಸಕಿ ಸವಿತಾ ನಿರಂಜನ್:

ವಸ್ತ್ರವಿನ್ಯಾಸ ಹಾಗೂ ಒಳಾಂಗಣ ವಿನ್ಯಾಸದಲ್ಲಿ ಆಸಕ್ತಿ ಹೊಂದಿರುವ ಸವಿತಾ ನಿರಂಜನ್ ಅವರು ಭಾರತೀಯ ಸಾಂಪ್ರದಾಯಿಕ ಕಲೆಗಳನ್ನು ಹೊಸ ತಲೆಮಾರಿನವರಿಗೆ ಇಷ್ಟವಾಗುವಂತೆ ತಮ್ಮ ವಿನ್ಯಾಸಗಳಲ್ಲಿ ಅಳವಡಿಸಿಕೊಂಡು ಬಂದಿದ್ದಾರೆ. "ಡಿಸೈನಿಂಗ್" ಎನ್ನುವುದು ಇವರಿಗೆ ಹವ್ಯಾಸ. ತಮ್ಮ ಕೌಟುಂಬಿಕ ಜೀವನದ ಜೊತೆಗೆ ಹವ್ಯಾಸವನ್ನು ಸರಿದೂಗಿಸಿಕೊಂಡು ಕೂಡ ಹೋಗುತ್ತಿದ್ದಾರೆ. ಕ್ರಿಕೆಟ್ ಆಟದ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿರುವ ಕಾರಣ ವಿಶ್ವಕಪ್ ಕ್ರಿಕೆಟ್ ಸಂದರ್ಭದಲ್ಲಿ ತಮ್ಮದೇ ಆದ ರೀತಿಯಲ್ಲಿ ಕ್ರಿಕೆಟ್ ಪ್ರೀತಿಯನ್ನು ವ್ಯಕ್ತಪಡಿಸಲು ಮುಂದಾಗಿ ವಿಶಿಷ್ಟವಾದ ಸೀರೆಯನ್ನು ವಿನ್ಯಾಸಗೊಳಿಸಿದ್ದಾರೆ.

ಸೀರೆಯನ್ನು ಪ್ರದರ್ಶಿಸುವ ರೂಪದರ್ಶಿಗಳು:

ಶೋಭಾ ಎಂ. ಲೋಲನಾಥ್: ಕಿರುತೆರೆ ನಟಿ ಹಾಗೂ ಭರತನ್ಯಾಟ್ಯ ಕಲಾವಿದೆ ಶೋಭಾ ಎಂ. ಲೋಲನಾಥ್ ಅವರು ಟೆಲಿವಿಷನ್ ವೀಕ್ಷಕರಿಗೆ ಚಿರಪರಿಚಿತರು. ಕಾಪರ್ೊರೇಟ್, ಮುದ್ರಣ ಹಾಗೂ ಪ್ರೊಡಕ್ಟ್ ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ತಮ್ಮ ಕಲಾ ಜೀವನ ಮುಂದುವರಿಸಿದ್ದು ಈಗ "ಚಕ್ರವಾಕ", "ಹೃದಯ ಸಾಕ್ಷಿ" ಹಾಗೂ "ಗೆಜ್ಜೆ ಪೂಜೆ" ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದಾರೆ. ಇವರು "ಜಿಎನ್ಎಸ್" ಯಾಮಿನಿ ಫೌಂಡೇಷನ್ ಕಾರ್ಯದರ್ಶಿಯೂ ಆಗಿದ್ದಾರೆ.

ಬೀನಾ ಬೋರ್ಕರ್ (ಬಿಯಾ): "ಯುನಿನಾರ್" ಜಾಹೀರಾತಿನಿಂದ ಸಾಕಷ್ಟು ಪ್ರಚಾರ ಪಡೆದ ಬೀನಾ ಬೋರ್ಕರ್ ಅವರು ಲಿಯೊನಾರ್ಡ್ ಏರೋನ್ಸ್ ಹಾಗೂ ರಿಯೊಲೋಫ್ ಫೆಂಟ್ ಜೋಸ್ ಅವರಂಥ ಖ್ಯಾತ ಛಾಯಾಗ್ರಾಹಕರಿಗೆ ರೂಪದರ್ಶಿಯಾಗಿದ್ದಾರೆ. ವಿವಿಧ ಗೃಹಬಳಕೆ ವಸ್ತುಗಳನ್ನು ಉತ್ಪಾದಿಸುವ ಅನೇಕ ಕಂಪೆನಿಗಳ ಜಾಹೀರಾತುಗಳಲ್ಲಿಯೂ ಇವರು ಕಾಣಿಸಿಕೊಂಡಿದ್ದಾರೆ.


ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಶೋಭಾ ಎಂ. ಲೋಲನಾಥ್
ಕಾರ್ಯದರ್ಶಿ, "ಜಿಎನ್ಎಸ್" ಯಾಮಿನಿ ಫೌಂಡೇಷನ್
ಮೊಬೈಲ್ ಸಂಖ್ಯೆ: 984533926

11.14.2010

ಮಧುಮೇಹ ಪೀಡಿತ ಮಕ್ಕಳಿಗೆ ಉಚಿತ ಗ್ಲುಕೋಮೀಟರ್ ವಿತರಣೆ


ಬೆಂಗಳೂರಿನಲ್ಲಿ ಭಾನುವಾರ "ವಿಶ್ವ ಮಧುಮೇಹ ದಿನಾಚರಣೆ" ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಮಧುಮೇಹಿಗಳಿಗಾಗಿನ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಬಿಬಿಎಂಪಿ ಉಪ ಆಯುಕ್ತ ಮುಜಿಬುಲ್ಲಾ ಜಫಾರಿ, ಮೈಕ್ರೋ ಲ್ಯಾಬ್ಸ್ ವ್ಯವಸ್ಥಾಪಕ ನಿರ್ದೇಶಕ ದಿಲೀಪ್ ಸುರಾನಾ, ಹಿರಿಯ ಮಧುಮೇಹ ತಜ್ಞ ಡಾ.ಸಿ.ಮುನಿಚೂಡಪ್ಪ ಹಾಗೂ "ಬಿಡಿಎಚ್"ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಕೆ.ಎಂ.ಪ್ರಸನ್ನಕುಮಾರ್ ಅವರು ಹಾಜರಿದ್ದರು.


"ವಿಶ್ವ ಮಧುಮೇಹ ದಿನಾಚರಣೆ" ಅಂಗವಾಗಿ ಬೆಂಗಳೂರು ಡಯಾಬಿಟಿಸ್ ಆಸ್ಪತ್ರೆ ಆಯೋಜಿಸಿದ್ದ ಉಚಿತ ಮಧುಮೇಹ ಪರೀಕ್ಷೆಯನ್ನು ಬೆಂಗಳೂರಿನಲ್ಲಿ ಭಾನುವಾರ ನಡೆಸಲಾಯಿತು. ಈ ಸಂದರ್ಭದಲ್ಲಿ (ಎಡದಿಂದ ಬಲಕ್ಕೆ) "ಬಿ.ಬ್ರಾನ್" ಚಾನಲ್ ಸೇಲ್ಸ್ ಎಕ್ಸಿಕಿಟ್ಯೂವ್ ನರೇಶ ವಿ., ಖ್ಯಾತ ಮಧುಮೇಹ ತಜ್ಞ ಡಾ. ಜಿ.ಬಾಲಚಂದ್ರ ಹಾಗೂ ಬೆನಕ ಸೈಂಟಿಫಿಕ್ಸ್ ಸಂಸ್ಥೆಯ ವಿ.ಬಿ.ಮುರಳೀಧರ್ ಅವರು ಉಪಸ್ಥಿತರಿದ್ದರು.

* * * * * * * * * * *

ಬೆಂಗಳೂರು: ಮಧುಮೇಹ ಪೀಡಿತರ ಸಂಕಷ್ಟಕ್ಕೆ ಸ್ಪಂದಿಸುತ್ತಾ ಬಂದಿರುವ ಬೆಂಗಳೂರು ಡಯಾಬಿಟಿಸ್ ಆಸ್ಪತ್ರೆ (ಬಿಡಿಎಚ್) ಮತ್ತೊಂದು ಮಹತ್ವದ ಹೆಜ್ಜೆಯಿಟ್ಟು "ವಿಶ್ವ ಮಧುಮೇಹ ದಿನಾಚರಣೆ" ಸಂದರ್ಭದಲ್ಲಿ ಮಧುಮೇಹ ಪೀಡಿತ ಬಡ ಮಕ್ಕಳಿಗೆ ಉಚಿತವಾಗಿ ಗ್ಲುಕೋಮೀಟರ್ ವಿತರಣೆ ಮಾಡಿತು.

ಭಾನುವಾರ ನಡೆದ ಸಮಾರಂಭದಲ್ಲಿ ಮಕ್ಕಳಿಗೆ ಗ್ಲುಕೋಮಿಟರ್ ಮಾತ್ರವಲ್ಲ ಇನ್ಸುಲೀನ್ ಹಾಗೂ ಸ್ಕೂಲ್ ಬ್ಯಾಗ್ ಗಳನ್ನು ಕೂಡ ನೀಡುವ ಮೂಲಕ ಮಕ್ಕಳ ದಿನಾಚರಣೆ ಹಾಗೂ ವಿಶ್ವ ಮಧುಮೇಹ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಮಕ್ಕಳಲ್ಲಿ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸಲು ಚಿತ್ರ ಬರೆಯುವ ಸ್ಪರ್ಧೆಯನ್ನು ಕೂಡ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಖ್ಯಾತ ಮಧುಮೇಹ ತಜ್ಞ ಡಾ. ಜಿ.ಬಾಲಚಂದ್ರ ಅವರು "ಇಂದು ಮಕ್ಕಳ ದಿನಾಚರಣೆ; ಪುಟಾಣಿಗಳಿಗೆ ಸಿಹಿ ಹಂಚಿ ಸಂಭ್ರಮಿಸಬೇಕು. ಆದರೆ ಕೆಲವು ಮಕ್ಕಳು ಮಧುಮೇಹದಿಂದ ಬಳಲುತ್ತಿದ್ದಾರೆ. ಅಂಥವರಿಗೆ ನಾವು ಸಿಹಿ ತಿನ್ನುವುದನ್ನು ನಿಯಂತ್ರಿಸಿ ಎಂದು ಹೇಳಬೇಕಾದ ಪರಿಸ್ಥಿತಿ. ವಿಶ್ವ ಮಧುಮೇಹ ದಿನಾಚರಣೆ ಸಂದರ್ಭದಲ್ಲಿ ಇಂಥದೊಂದು ಸಂದೇಶವನ್ನು ನೀಡುವುದು ಅನಿವಾರ್ಯವೂ ಆಗಿದೆ" ಎಂದು ಹೇಳಿದರು.

"ಮಕ್ಕಳಿಗೆ ಆರೋಗ್ಯಕಾರಿ ಹಾಗೂ ಪೋಷಕಾಂಶ ಇರುವ ಆಹಾರ ಅಗತ್ಯವಾಗಿದೆ. ಬೆಳೆಯುವ ವಯಸ್ಸಿನಲ್ಲಿ ಪುಟಾಣಿಗಳು ತಿನ್ನುವ ಪದಾರ್ಥಗಳಲ್ಲಿ ಪೋಷಕಾಂಶದ ಕೊರತೆಯಿದೆ. ಫಾಸ್ಟ್ ಫುಡ್ ಗಳಿಂದಾಗಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ" ಎಂದ ಅವರು "ತಂಪು ಪಾನೀಯಗಳು, ಮತ್ತೆ ಮತ್ತೆ ಬಳಸಿದ ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಅತಿಯಾಗಿ ಸಿಹಿ ತಿನ್ನುವುದರಿಂದ ಅನೇಕ ತೊಂದರೆಗಳು ಎದುರಾಗುತ್ತವೆ" ಎಂದರು.

"ಹೆಚ್ಚಿನ ದೈಹಿಕ ಚಟುವಟಿಕೆ ಇಲ್ಲದೆಯೇ, ಮಕ್ಕಳು ಕೂಡ ಅಧಿಕ ಸಮಯ ಟೆಲಿವಿಷನ್ ಮುಂದೆ ಕಾಲ ಕಳೆಯುವುದು ಕೂಡ ಅಪಾಯಕಾರಿ" ಎಂದು ಡಾ.ಜಿ.ಬಾಲಚಂದ್ರ ಹೇಳಿದರು.

ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಸ್.ವಿ.ರಂಗನಾಥ್, ಬಿ.ಬಿ.ಎಂ.ಪಿ. ಉಪ ಆಯುಕ್ತರಾದ ಮುಜಿಬುಲ್ಲಾ ಜಫಾರಿ, ಮೈಕ್ರೋ ಲ್ಯಾಬ್ಸ್ ವ್ಯವಸ್ಥಾಪಕ ನಿರ್ದೇಶಕ ದಿಲೀಪ್ ಸುರಾನಾ, ಹಿರಿಯ ಮಧುಮೇಹ ತಜ್ಞ ಡಾ.ಸಿ.ಮುನಿಚೂಡಪ್ಪ ಹಾಗೂ "ಬಿಡಿಎಚ್"ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಕೆ.ಎಂ.ಪ್ರಸನ್ನಕುಮಾರ್, ಡಾ.ಕಾಶಿನಾಥ್ ದೀಕ್ಷಿತ್, "ಬಿ.ಬ್ರಾನ್" ಚಾನಲ್ ಸೇಲ್ಸ್ ಎಕ್ಸಿಕಿಟ್ಯೂವ್ ನರೇಶ ವಿ., ಬೆನಕ ಸೈಂಟಿಫಿಕ್ಸ್ ಸಂಸ್ಥೆಯ ವಿ.ಬಿ.ಮುರಳೀಧರ್ ಅವರು ಪಾಲ್ಗೊಂಡಿದ್ದರು.

6.09.2010

ಇಮಿಗ್ರೇಷನ್ ಅಧಿಕಾರಿಗಳಿಂದ ಬುಡಕಟ್ಟು ಜನಾಂಗದ ಯುವತಿಗೆ ಅವಮಾನ

ಬೆಂಗಳೂರು: ಹಿಂದಿ ಭಾಷೆಯನ್ನು ಮಾತನಾಡುವ ಶೈಲಿಯು ವಿಭಿನ್ನವಾಗಿದೆ ಎನ್ನವ ಒಂದೇ ಕಾರಣಕ್ಕಾಗಿ ಛತ್ತೀಸ್ಗಡದ ಅಸ್ತರಾದ ಬುಡಕಟ್ಟು ಜನಾಂಗದ ಯುವತಿ ಸುಮನ್ ಕೊರಟ್ಟಿ ಅವರನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಇಮಿಗ್ರೇಷನ್ ಅಧಿಕಾರಿಗಳು ಅವಮಾನಗೊಳಿಸಿದ ಘಟನೆಯು ಮಂಗಳವಾರ (8ನೇ ಜೂನ್, 2010) ಬೆಳಗಿನ ಜಾವ ನಡೆದಿದೆ.

ಫಿನ್ಲೆಂಡ್ ದೇಶದ ಹೆಲ್ಸಿಂಕಿಯಲ್ಲಿ ಜೂನ್ 10ರಂದು ನಡೆಯಲಿರುವ "ಡಿಸ್ ಪ್ಲೇಸ್ ಮೆಂಟ್ " ವಿಷಯ ಕುರಿತ ಅಂತರರಾಷ್ಟ್ರೀಯ ವಿಚಾರ ಸಂಕಿರಣಕ್ಕಾಗಿ ವಿಶೇಷ ಭಾಷಣಕಾರ್ತಿಯಾಗಿ ಆಹ್ವಾನಿತರಾದ ಬುಡಕಟ್ಟು ಜನಾಂಗದ ಯುವತಿ ಸುಮನ್ ಕೊರಟ್ಟಿ ಅವರನ್ನು ಬೆಂಗಳೂರಿನಿಂದ ದುಬೈ ಹಾಗೂ ಫ್ರಾಂಕ್ ಫರ್ಟ್ ಮಾರ್ಗವಾಗಿ ಹೆಲ್ಸಿಂಕಿಗೆ ಪ್ರಯಾಣ ಮಾಡಲು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಇಮಿಗ್ರೇಷನ್ ಅಧಿಕಾರಿಗಳು ಅವಕಾಶ ನೀಡಲಿಲ್ಲ. ಅಷ್ಟೇ ಅಲ್ಲ ಇಲ್ಲ ಸಲ್ಲದ ಅವಹೇಳನಕಾರಿ ಪ್ರಶ್ನೆಗಳನ್ನು ಕೇಳಿ ಅವಮಾನ ಕೂಡ ಮಾಡಿದರು.

ಅಷ್ಟೇ ಅಲ್ಲ "ನಿನ್ನ ಹಿಂದಿ ನಮಗೆ ಅರ್ಥ ಆಗುವುದಿಲ್ಲ; ನೀನು ವಿದೇಶಕ್ಕೆ ಹೋಗುವುದಾದರೆ ನವದೆಹಲಿಯಿಂದಲೇ ಪ್ರಯಾಣ ಮಾಡು. ನವದೆಹಲಿಯಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಇಮಿಗ್ರೇಷನ್ ಅಧಿಕಾರಿಗಳಿಗೆ ನಿನ್ನ ಹಿಂದಿ ಅರ್ಥ ಆಗಬಹುದು" ಎಂದು ಕೂಡ ಸುಮನ್ ಕೊರಟ್ಟಿ ಅವರನ್ನು ಇಮಿಗ್ರೇಷನ್ ಅಧಿಕಾರಿಗಳು ವ್ಯಂಗ್ಯ ಮಾಡಿದರು.

ಸುಮನ್ ಕೊರಟ್ಟಿ ಅವರ ಜೊತೆಗೆ ಭಾಷಣದ ಇಂಗ್ಲಿಷ್ ಅನುವಾದಕರಾಗಿ ಹೆಲ್ಸಿಂಕಿಗೆ ಹೊರಟಿದ್ದ ಕೂರ್ಗ್ ಆರ್ಗನೈಜೇಷನ್ ಫಾರ್ ರೂರಲ್ ಡೆವಲಪ್ ಮೆಂಟ್ (ಸಿ.ಓ.ಆರ್.ಡಿ.) ನಿರ್ದೇಶಕ ಹಾಗೂ ನ್ಯಾಷನಲ್ ಆದಿವಾಸಿ ಅಲೈನ್ಸ್ ಸಂಚಾಲಕರಾದ ವಿ.ಎಸ್. ರಾಯ್ ಡೇವಿಡ್ ಅವರು ಮಧ್ಯ ಪ್ರವೇಶಿಸಿ ವಿವರಣೆ ನೀಡಲು ಯತ್ನಿಸಿದಾಗ "ಅವಳೇನು ನಿಮ್ಮ ಹೆಂಡತಿಯೇ...?" ಎಂದು ಅವಹೇಳನಕಾರಿಯಾದ ರೀತಿಯಲ್ಲಿ ವ್ಯಂಗ್ಯ ಮಾಡಿ ನಕ್ಕರು.

ಹೆಲ್ಸಿಂಕಿಯಲ್ಲಿ ನಡೆಯಲಿರುವ ವಿಚಾರ ಸಂಕಿರಣದ ಅಧಿಕೃತ ಆಹ್ವಾನ ಪತ್ರಿಕೆ ಸೇರಿದಂತೆ ಪ್ರಯಾಣಕ್ಕೆ ಅಗತ್ಯವಾಗಿದ್ದ ಎಲ್ಲ ದಾಖಲೆಗಳನ್ನು ಇಮಿಗ್ರೇಷನ್ ಅಧಿಕಾರಿಗಳಿಗೆ ತೋರಿಸಿ, ವಿವರಿಸಿದರೂ ಕೊನೆಗೂ ಅವರು ಒಪ್ಪಲಿಲ್ಲ. ಆದ್ದರಿಂದ ಮನನೊಂದ ಬುಡಕಟ್ಟು ಜನಾಂಗದ ಯುವತಿ ಸುಮನ್ ಕೊರಟ್ಟಿ ಅವರು ವಿಧಿ ಇಲ್ಲದೆ ರಾತ್ರೋರಾತ್ರಿ ನವದೆಹಲಿಗೆ ತೆರಳಿ, ಅಲ್ಲಿಂದ ಹೆಲ್ಸಿಂಕಿಗೆ ಪ್ರಯಾಣ ಮಾಡಬೇಕಾಯಿತು.

ಘಟನೆ ವಿವರ:

ಸುಮನ್ ಕೊರಟ್ಟಿ ಅವರು ಛತ್ತೀಸ್ಗಡದ ಅಸ್ತರಾದ ಬುಡಕಟ್ಟು ಜನಾಂಗದ ಯುವತಿ. ಸರ್ಕಾರವು ಅಭಿವೃದ್ಧಿಯ ಕಾರ್ಯಗಳ ಹೆಸರಿನಲ್ಲಿ ನಡೆಸಿದ ಮೂಲ ನಿವಾಸಿಗಳ ಎತ್ತಂಗಡಿ ಕಾರ್ಯಾಚರಣೆಯಲ್ಲಿ ತಮ್ಮ ಮೂಲ ನೆಲೆಯನ್ನು ಕಳೆದುಕೊಂಡು ಸ್ಥಳಾಂತರಗೊಂಡ ಆದಿವಾಸಿ ಕುಟುಂಬದವಳು. ಅವಳು ಮಾತನಾಡುವ ಹಿಂದಿ ಭಾಷೆಯ ಶೈಲಿಯು ಸ್ವಲ್ಪ ಭಿನ್ನವಾಗಿದೆ. ಆದರೆ ಆದಿವಾಸಿಗಳ ಹೋರಾಟದಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.

ಅವರಿಗೆ ಹೆಲ್ಸಿಂಕಿಯಲ್ಲಿ 10ನೇ ಜೂನ್ 2010ರಂದು ನಡೆಯುವ ""ಡಿಸ್ ಪ್ಲೇಸ್ ಮೆಂಟ್ " ವಿಷಯ ಕುರಿತ ಅಂತರರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ವಿಶೇಷ ಭಾಷಣಕಾರರಾಗಿ ಆಹ್ವಾನ ಬಂದಿತ್ತು. ಸುಮನ್ ಕೊರಟ್ಟಿ ಅವರ ಹಿಂದಿ ಭಾಷಣದ ಇಂಗ್ಲಿಷ್ ಅನುವಾದಕರಾಗಿ ಆಹ್ವಾನಿತರಾಗಿದ್ದು ಕೂರ್ಗ್ ಆರ್ಗನೈಜೇಷನ್ ಫಾರ್ ರೂರಲ್ ಡೆವಲಪ್ ಮೆಂಟ್ (ಸಿ.ಓ.ಆರ್.ಡಿ.) ನಿರ್ದೇಶಕ ಹಾಗೂ ನ್ಯಾಷನಲ್ ಆದಿವಾಸಿ ಅಲೈನ್ಸ್ ಸಂಚಾಲಕರಾದ ವಿ.ಎಸ್. ರಾಯ್ ಡೇವಿಡ್. ಆದ್ದರಿಂದಲೇ ಇವರಿಬ್ಬರೂ ಬೆಂಗಳೂರಿನಿಂದ ಒಟ್ಟಿಗೇ ದುಬೈ ಹಾಗೂ ಫ್ರಾಂಕ್ ಫರ್ಟ್ ಮಾರ್ಗವಾಗಿ ಹೆಲ್ಸಿಂಕಿಗೆ ಹೋಗಲು ಪ್ರಯಾಣದ ಟಿಕೆಟ್ ವ್ಯವಸ್ಥೆ ಮಾಡಲಾಗಿತ್ತು.

ಸುಮನ್ ಕೊರಟ್ಟಿ ಹಾಗೂ ವಿ.ಎಸ್. ರಾಯ್ ಡೇವಿಡ್ ಅವರು ಮಂಗಳವಾರ (8ನೇ ಜೂನ್, 2010) ಬೆಳಗಿನ ಜಾವ 4.15ಕ್ಕೆ ಫ್ಲೈಟ್ ಸಂಖ್ಯೆ: ಇ.ಕೆ.569 (ಎಮಿರೇಟ್ಸ್ ವಿಮಾನ) ಮೂಲಕ ದುಬೈಗೆ ಹೊರಡಬೇಕಾಗಿತ್ತು. ಅದಕ್ಕಾಗಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿ ಬೋರ್ಡಿಂಗ್ ಪಾಸ್ ಪಡೆದು ಕೂಡ ಆಗಿತ್ತು. ಆದರೆ ಇಮಿಗ್ರೇಷನ್ ಅಧಿಕಾರಿಗಳು ಸುಮನ್ ಕೊರಟ್ಟಿ ಅವರಿಗೆ ವಿಮಾನ ಏರಲು ಅವಕಾಶ ನೀಡಲಿಲ್ಲ. ಅಷ್ಟೇ ಅಲ್ಲ ಅವಹೇಳನಕಾರಿಯಾದ ರೀತಿಯಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳಿ, ವ್ಯಂಗ್ಯ ಮಾಡಿದರು.

ಆ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ವಿವರಿಸಿ ಹೇಳಲು ಪ್ರಯತ್ನ ಮಾಡಿದ ವಿ.ಎಸ್.ರಾಯ್ ಡೇವಿಡ್ ಅವರನ್ನೂ ಇಮಿಗ್ರೇಷನ್ ಅಧಿಕಾರಿಗಳು ಅವಹೇಳನ ಮಾಡುವ ರೀತಿಯಲ್ಲಿ ಮಾತನಾಡಿದರು. ತಾವು ಸುಮನ್ ಕೊರಟ್ಟಿ ಅವರ ಭಾಷಣದ ಇಂಗ್ಲಿಷ್ ಅನುವಾದಕರಾಗಿ ಹೆಲ್ಸಿಂಕಿಯಲ್ಲಿ ನಡೆಯುವ "ಡಿಸ್ ಪ್ಲೇಸ್ ಮೆಂಟ್ " ವಿಷಯ ಕುರಿತ ವಿಚಾರ ಸಂಕಿರಣಕ್ಕೆ ಜೊತೆಯಾಗಿ ಹೋಗುತ್ತಿರುವುದಾಗಿ ಹೇಳಿದಾಗಲೂ ಕೂಡ ಪ್ರಯೋಜನ ಆಗಲಿಲ್ಲ. ಆಗಲೂ ಇಮಿಗ್ರೇಷನ್ ಅಧಿಕಾರಿಗಳು ಅವಮಾನ ಮಾಡುವ ರೀತಿಯಲ್ಲಿ ಮಾತನಾಡಿದರು. "ನೀವೇಕೆ ಅವಳ ಜೊತೆಗೆ ಹೋಗಬೇಕು...; ನಿಮಗೂ ಅವಳಿಗೂ..." ಎಂದೆಲ್ಲ ಕೆಟ್ಟದಾದ ರೀತಿಯಲ್ಲಿ ಮಾತನಾಡಿದರು.

ಅಗತ್ಯ ದಾಖಲೆಗಳನ್ನು ನೀಡಿ, ಸ್ಪಷ್ಟವಾದ ವಿವರಣೆ ಕೊಟ್ಟರೂ ಇಮಿಗ್ರೇಷನ್ ಅಧಿಕಾರಿಗಳು ಸುಮನ್ ಕೊರಟ್ಟಿ ಅವರಿಗೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ ಮಾಡಲು ಅವಕಾಶ ನೀಡಲಿಲ್ಲ. ಆದ್ದರಿಂದ ಛತ್ತೀಸ್ಗಡದ ಬುಡಕಟ್ಟು ಜನಾಂಗದ ಯುವತಿ ಸುಮನ್ ಕೊರಟ್ಟಿ ಅನಿವಾರ್ಯವಾಗಿ ರಾತ್ರೋರಾತ್ರಿ ನವದೆಹಲಿಗೆ ಹೋಗಿ, ಅಲ್ಲಿಂದ ದುಬೈ ಹಾಗೂ ಫ್ರಾಂಕ್ ಫರ್ಟ್ ಮಾರ್ಗವಾಗಿ ಹೆಲ್ಸಿಂಕಿಗೆ ಪ್ರಯಾಣ ಮಾಡಬೇಕಾಯಿತು.

ವಿಚಿತ್ರವೆಂದರೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಇಮಿಗ್ರೇಷನ್ ಅಧಿಕಾರಿಗಳು ಅಷ್ಟೆಲ್ಲಾ ಅವಮಾನ ಮಾಡುವ ರೀತಿಯಲ್ಲಿ ಮಾತನಾಡಿ ಪ್ರಯಾಣಕ್ಕೆ ಅವಕಾಶ ನೀಡಲಿಲ್ಲ. ಆದರೆ ಅದೇ ನವದೆಹಲಿಯಲ್ಲಿನ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಇಮಿಗ್ರೇಷನ್ ಅಧಿಕಾರಿಗಳು ಒಂದು ಮರು ಪ್ರಶ್ನೆಯನ್ನು ಕೂಡ ಕೇಳದೆಯೇ ಪ್ರಯಾಣಕ್ಕೆ ಅನುವು ಮಾಡಿಕೊಟ್ಟರು.

ನವದೆಹಲಿಯಿಂದ ಸುಮನ್ ಏಕಾಂಗಿ ಪ್ರಯಾಣ:

ಮೊಟ್ಟ ಮೊದಲ ಬಾರಿಗೆ ವಿದೇಶ ಪ್ರಯಾಣಕ್ಕೆ ಹೊರಟ ಬುಡಕಟ್ಟು ಜನಾಂಗದ ಯುವತಿ ಸುಮನ್ ಕೊರಟ್ಟಿಗೆ ಭಯ. ಮೊದಲು ನಿಗದಿ ಮಾಡಿದಂತೆ ಬೆಂಗಳೂರಿನಿಂದ ಪ್ರಯಾಣ ಮಾಡುವುದಾಗಿದ್ದರೆ ಜೊತೆಗೆ ಕೂರ್ಗ್ ಆರ್ಗನೈಜೇಷನ್ ಫಾರ್ ರೂರಲ್ ಡೆವಲಪ್ ಮೆಂಟ್ (ಸಿ.ಓ.ಆರ್.ಡಿ.) ನಿರ್ದೇಶಕ ಹಾಗೂ ನ್ಯಾಷನಲ್ ಆದಿವಾಸಿ ಅಲೈನ್ಸ್ ಸಂಚಾಲಕರಾದ ವಿ.ಎಸ್. ರಾಯ್ ಡೇವಿಡ್ ಜೊತೆಗೆ ಇರುತ್ತಿದ್ದರು. ಹಾಗೆ ಆಗಿದ್ದರೆ, ಪ್ರಯಾಣ ಕಾಲದಲ್ಲಿ ಇಂಗ್ಲಿಷ್ ಭಾಷೆಯ ತೊಡಕೂ ಪ್ರಯಾಣ ಕಾಲದಲ್ಲಿ ಕಾಡುತ್ತಿರಲಿಲ್ಲ. ನೆರವಿಗೆ ರಾಯ್ ಡೇವಿಡ್ ಇರುತ್ತಿದ್ದರು.

ಆದರೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಇಮಿಗ್ರೇಷನ್ ಅಧಿಕಾರಿಗಳು ಇಲ್ಲಿಂದ ಪ್ರಯಾಣ ಮಾಡುವುದಕ್ಕೆ ಅವಕಾಶ ನೀಡದ ಕಾರಣ ಸುಮನ್ ಕೊರಟ್ಟಿ ಅವರು ನವದೆಹಲಿಗೆ ಹೋಗಿ ಅಲ್ಲಿಂದ ದುಬೈ ಹಾಗೂ ಫ್ರಾಂಕ್ ಫರ್ಟ್ ಮಾರ್ಗವಾಗಿ ಹೆಲ್ಸಿಂಕಿಗೆ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಎದುರಾಯಿತು. ಸುಮನ್ ಅವರಿಗೆ ಏಕಾಂಗಿಯಾಗಿ ಪ್ರಯಾಣ ಮಾಡುವ ಭಯವೂ ಕಾಡಿತು.

ಸುಮನ್ ಭಯದ ನಡುವೆ ಏಕಾಂಗಿಯಾಗಿ ವಿದೇಶ ಪ್ರಯಾಣ ಮಾಡಬೇಕಾಗಿದ್ದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಇಮಿಗ್ರೇಷನ್ ಅಧಿಕಾರಿಗಳ ಸಲ್ಲದೊಂದು ನಿರ್ಣಯದ ಫಲ. ಕನ್ನಡ ಗೊತ್ತಿಲ್ಲ ಹಾಗೂ ಹಿಂದಿ ಭಾಷೆಯ ಶೈಲಿಯೂ ಬೇರೆಯಾಗಿದೆ ಎನ್ನುವ ಒಂದೇ ಕಾರಣಕ್ಕಾಗಿ ಅವಳಿಗೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ ಮಾಡಲು ಅವಕಾಶ ನೀಡದಿದ್ದರ ಪರಿಣಾಮವಾಗಿ ಸುಮನ್ ಕೊರಟ್ಟಿ ಅವರು ರಾತ್ರೋರಾತ್ರಿ ಬೆಂಗಳೂರಿನಿಂದ ನವದೆಹಲಿಗೆ ಹೋಗಿ ಅಲ್ಲಿಂದ ಹೊಸ ಟಿಕೆಟ್ ವ್ಯವಸ್ಥೆ ಮಾಡಿಕೊಂಡು ಹೆಲ್ಸಿಂಕಿಗೆ ಪ್ರಯಾಣ ಮಾಡಬೇಕಾಯಿತು.

ಘಟನೆ ಬಗ್ಗೆ ಕೂರ್ಗ್ ಆರ್ಗನೈಜೇಷನ್ ಫಾರ್ ರೂರಲ್ ಡೆವಲಪ್ ಮೆಂಟ್ (ಸಿ.ಓ.ಆರ್.ಡಿ.) ನಿರ್ದೇಶಕ ವಿ.ಎಸ್. ರಾಯ್ ಡೇವಿಡ್ ಪ್ರತಿಕ್ರಿಯೆ:

"ಬುಡಕಟ್ಟು ಜನಾಂಗದವರನ್ನು ನಮ್ಮ ನಾಗರಿಕ ಸಮಾಜವು ಹೇಗೆ ಕಾಣುತ್ತದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಬುಡಕಟ್ಟು ಜನಾಂಗದವರೂ ಈ ದೇಶದ ನಾಗರಿಕರು; ಅವರಿಗೂ ದೇಶದ ಯಾವುದೇ ಭಾಗದಿಂದ ಪ್ರಯಾಣ ಮಾಡುವ ಹಕ್ಕಿದೆ. ಆದರೆ ಬುಡಕಟ್ಟು ಜನಾಂಗದ ಯುವತಿ ಸುಮನ್ ಕೊರಟ್ಟಿ ಅವರನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಇಮಿಗ್ರೇಷನ್ ಅಧಿಕಾರಿಗಳು ಅವಹೇಳನ ಮಾಡಿದ ರೀತಿಯು ಖಂಡಿತವಾಗಿಯೂ ನೋವುಂಟು ಮಾಡುವಂಥದು."

"ಕನ್ನಡ ಬರುವುದಿಲ್ಲ, ಹಿಂದಿ ಮಾತನಾಡುವ ಶೈಲಿ ಬೇರೆಯಾಗಿದೆ ಎಂದರೆ ಅನುಮಾನದಿಂದ ನೋಡುವುದು ಎಷ್ಟರ ಮಟ್ಟಿಗೆ ಸರಿ? ಬುಡಕಟ್ಟು ಜನಾಂಗದ ಈ ಯುವತಿ (ಸುಮನ್ ಕೊರಟ್ಟಿ) ದೇಶದ ಪ್ರತಿನಿಧಿಯಾಗಿ ಹೆಲ್ಸಿಂಕಿಯಲ್ಲಿ ನಡೆಯುವ ವಿಚಾರ ಸಂಕಿರಣದಲ್ಲಿ ವಿಶೇಷ ಭಾಷಣಕಾರ್ತಿಯಾಗಿ ಆಹ್ವಾನಿತಳಾದವಳು. ಅದಕ್ಕಾಗಿ ಬಂದ ಆಹ್ವಾನ, ಭಾಷಣದ ಪ್ರತಿ, ಪಾಸ್ ಪೋರ್ಟ್, ವೀಸಾ... ಸೇರಿದಂತೆ ಎಲ್ಲ ದಾಖಲೆಗಳನ್ನು ಇಮಿಗ್ರೇಷನ್ ಅಧಿಕಾರಿಗಳ ಮುಂದೆ ಇಟ್ಟರೂ ಅದನ್ನು ಕಡೆಗಣಿಸಿ; ಕೇವಲ ಅವಳು ಮಾತನಾಡುವ ಹಿಂದಿ ಭಾಷೆಯ ಶೈಲಿಯು ವಿಭಿನ್ನವಾಗಿದೆ ಎನ್ನುವ ಒಂದೇ ಕಾರಣಕ್ಕೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಹತ್ತಲು ಅವಕಾಶ ನೀಡದಿರುವುದು ವಿಷಾದಕರ ಸಂಗತಿ."

"ಬುಡಕಟ್ಟು ಜನಾಂಗದವರು ಎಂದಾಕ್ಷಣ ಅವರನ್ನು ಅನುಮಾನದಿಂದ ನೋಡುವ ಜಾಯಮಾನವನ್ನು ಇಮಿಗ್ರೇಷನ್ ಅಧಿಕಾರಿಗಳು ಬದಲಿಸಿಕೊಳ್ಳಬೇಕು. ಫಿನ್ಲೆಂಡ್ ದೇಶದ ದೊಡ್ಡದೊಂದು ಸಮಾಜ ಸೇವಾ ಸಂಘಟನೆಯು ವಿಶೇಷವಾಗಿ ಆಹ್ವಾನ ನೀಡಿ, ಭಾಷಣ ಮಾಡುವುದಕ್ಕೆ ಸುಮನ್ ಕೊರಟ್ಟಿಗೆ ಆಹ್ವಾನ ನೀಡಿದೆ. ವಿದೇಶಿಯರು ಗೌರವಯುತವಾಗಿ ಆಹ್ವಾನಿಸಿದಂಥ ಬುಡಕಟ್ಟು ಜನಾಂಗದ ಈ ಯುವತಿಗೆ ಸ್ವದೇಶದಲ್ಲಿಯೇ ಅವಮಾನವಾಗುವ ರೀತಿಯಲ್ಲಿ ಇಮಿಗ್ರೇಷನ್ ಅಧಿಕಾರಿಗಳು ನಡೆದುಕೊಂಡಿದ್ದು ನನ್ನ ಅಸಮಾಧಾನಕ್ಕೆ ಕಾರಣ"

"ಛತ್ತೀಸ್ಗಡದ ಅಸ್ತರಾ ಪ್ರದೇಶದ ವಾಸಿಯಾದ ಸುಮನ್ ಕೊರಟ್ಟಿ ಅವರಿಗೆ ವಿದೇಶ ಪ್ರಯಾಣ ಮೊಟ್ಟ ಮೊದಲ ಅನುಭವ. ಆದ್ದರಿಂದ ಸಹಜವಾಗಿಯೇ ಪ್ರವಾಸದ ಭಯ. ಆದ್ದರಿಂದ ಭಾಷಣದ ಇಂಗ್ಲಿಷ್ ಅನುವಾದಕನಾಗಿ ಅದೇ ವಿಚಾರ ಸಂಕಿರಣಕ್ಕೆ ಆಹ್ವಾನಿತನಾದ ನನ್ನ ಜೊತೆಗೆ ಕರೆದುಕೊಂಡು ಹೆಲ್ಸಿಂಕಿಗೆ ಹೋಗುವುದಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅದಕ್ಕಾಗಿಯೇ ಬೆಂಗಳೂರಿನಿಂದಲೇ ದುಬೈ ಹಾಗೂ ಫ್ರಾಂಕ್ ಫರ್ಟ್ ಮಾರ್ಗವಾಗಿ ಹೆಲ್ಸಿಂಕಿಗೆ ಟಿಕೆಟ್ ಬುಕ್ಕಿಂಗ್ ಮಾಡಲಾಗಿತ್ತು. ಆದರೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿನ ಅಧಿಕಾರಿಗಳ ವರ್ತನೆಯಿಂದಾಗಿ ಎಲ್ಲ ಪ್ರಯಾಣ ವ್ಯವಸ್ಥೆಯನ್ನು ಬದಲಿಸಬೇಕಾಯಿತು."

"ಸುಮನ್ ಕೊರಟ್ಟಿ ಅವರು ಛತ್ತೀಸ್ಗಡದವರು ಎನ್ನುವ ಕಾರಣಕ್ಕಾಗಿ ಅವರನ್ನು ಅಲ್ಲಿಗೆ ಸಮೀಪದ ನವದೆಹಲಿಯಿಂದಲೇ ಪ್ರಯಾಣ ಮಾಡುವಂತೆ ತಾಕೀತು ಮಾಡಿದ ಇಲ್ಲಿನ ಇಮಿಗ್ರೇಷನ್ ಅಧಿಕಾರಿಗಳು ಈ ಬುಡಕಟ್ಟು ಜನಾಂಗದ ಯುವತಿಯು ಭಾರತದ ಪ್ರಜೆಯಾಗಿ ಎಲ್ಲಿಯಿಂದಾದರೂ ಪ್ರಯಾಣ ಮಾಡುವ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದ್ದಾರೆ. ಉನ್ನತ ಹುದ್ದೆಯಲ್ಲಿ ಇರುವಂಥವರು ಎಲ್ಲಿಯಿಂದಾದರೂ ಪ್ರಯಾಣ ಮಾಡುವುದಕ್ಕೆ ಅವಕಾಶ ನೀಡುವ ಇದೇ ಇಮಿಗ್ರೇಷನ್ ಅಧಿಕಾರಿಗಳು; ಈ ಬುಡಕಟ್ಟು ಜನಾಂಗದ ಯುವತಿಯನ್ನು ತಡೆದಿದ್ದು ಯಾಕೆ? ಎನ್ನುವುದು ನನ್ನ ಪ್ರಶ್ನೆ. ಇದಕ್ಕೆ ಉತ್ತರ ನೀಡುವವರು ಯಾರು? ಇಮಿಗ್ರೇಷನ್ ಅಧಿಕಾರಿಗಳು ತಮ್ಮ ನಿರ್ಣಯವೇ ಕೊನೆ ಎನ್ನುವಂತೆ ವರ್ತಿಸಿದ್ದಾರೆ. ಆದರೆ ಇಂಥದೊಂದು ಸಲ್ಲದ ಕಟ್ಟಳೆಯನ್ನು ಹೇರಿದ್ದು ಎಷ್ಟರ ಮಟ್ಟಿಗೆ ಸರಿ?."

"ಬುಡಕಟ್ಟು ಜನಾಂಗದವರಿಗೆ ಸ್ವದೇಶದಲ್ಲಿಯೇ ಹೀಗೆ ಅವಮಾನ ಆಗುವ ರೀತಿಯ ಘಟನೆಯು ನಡೆದಿದ್ದು ಆಘಾತಕಾರಿ. ಅಭಿವೃದ್ಧಿಯ ಹೆಸರಿನಲ್ಲಿ ಈ ಬುಡಕಟ್ಟು ಜನಾಂಗದವರನ್ನು ಅವರ ಮೂಲ ನೆಲೆಯಿಂದ ಒತ್ತಾಯಪೂರ್ವಕವಾಗಿ ಓಡಿಸಿದ್ದು ಅಲ್ಲದೇ; ಅವರು ದೇಶದಲ್ಲಿಯೇ ಸ್ವಚ್ಛಂದವಾಗಿ ಓಡಾಡಲು ಕೂಡ ತಡೆದು ಸ್ವಾತಂತ್ರ್ಯ ಹರಣ ಮಾಡುತ್ತಿರುವುದು ಯ್ಯಾವ ಕಾನೂನು- ಕಟ್ಟಳೆ? ಮತ್ತೆ ಇಂಥ ಘಟನೆಗಳು ನಡೆಯದಂತೆ ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು ಎನ್ನುವುದು ನನ್ನ ವಿನಂತಿ."

"ಜಿ.ಎನ್.ಎಸ್" ಯಾಮಿನಿ ಫೌಂಡೇಷನ್ ಕಾರ್ಯದರ್ಶಿ ಶೋಭಾ ಎಂ. ಲೋಲನಾಥ್ ಪ್ರತಿಕ್ರಿಯೆ:

"ಸುಮನ್ ಕೊರಟ್ಟಿ ಒಬ್ಬಳು ಬುಡಕಟ್ಟು ಜನಾಂಗದವಳು; ಅವಳ ಭಾಷೆಯ ಶೈಲಿ ಬೇರೆ. ಹಾಗೆ ಎನ್ನುವ ಕಾರಣಕ್ಕೆ ಅವಳನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ ಮಾಡುವುದಕ್ಕೆ ಅವಕಾಶ ನೀಡದ ಇಮಿಗ್ರೇಷನ್ ಅಧಿಕಾರಿಗಳ ವರ್ತನೆಯು ಆಕ್ಷೇಪಾರ್ಹ."

"ಭಾರತದಲ್ಲಿ ಒಂದೊಂದು ಭಾಗದವರು ಮಾತನಾಡುವ ರೀತಿ ಹಾಗೂ ಶೈಲಿ ಭಿನ್ನವಾಗಿರುತ್ತದೆ. ಹಾಗೆಂದ ಮಾತ್ರಕ್ಕೆ ಅವರನ್ನು ದೇಶದಲ್ಲಿಯೇ ಬೇರೆ ಬೇರೆ ಪ್ರಜೆಗಳು ಎನ್ನುವಂತೆ ವಿಂಗಡನೆ ಮಾಡಲಾಗುತ್ತದೆಯೇ? ಉತ್ತರ ಭಾರತದವರು ದಕ್ಷಿಣ ಭಾರತದಲ್ಲಿನ ಹಾಗೂ ದಕ್ಷಿಣ ಭಾರತದವರು ಉತ್ತರ ಭಾರತದಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿಂದ ಪ್ರಯಾಣ ಮಾಡದಂತೆ ತಡೆದರೆ ಅದೆಂಥ ದುರಂತ! ವೈಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಂಡಂಥ ಘಟನೆ ಇದಾಗುತ್ತದೆ."

"BIA" (Bangalore International Airport) sees red

NEWS COURTESY: "BANGALORE MIRROR"


Immigration officials stop a young woman from Chhattisgarh from flying to Helsinki because they couldn’t understand her language!

BY: M K Ashoka

On Tuesday, immigration authorities at Bangalore airport prevented a young woman from flying to Helsinki for a conference because she had a Chhatisgarhi accent!

It’s a variant of the obnoxious racial profiling that the US immigration authorities practice: The way SRK and numerous other Indians have been harassed at US airports because they carry a problematic surname or simply come from a troubled region.

A similar paranoia, spawned obviously by ‘national security’ concerns, surfaced in Bangalore International Airport (BIA).

Suman Koretti was supposed to fly to Helsinki via Dubai and Frankfurt at 4.15 am on Tuesday. All her papers — passport, visa, the conference invitation etc — were in perfect order and she had already got the boarding pass when immigration authorities stopped her.

Suman, a tribal girl from Astara in Chhatisgarh, was to attend an international conference on displacement in Finland and, since she doesn’t speak English, was accompanied by a Bangalore-based translator V S Roy David.

Suman speaks Hindi mixed with a tribal dialect and immigration authorities wouldn’t let her go on the pretext that they couldn’t understand her. This despite the presence of V S Roy David, director of Coorg Organisation for Rural Development and and convenor of National Adivasi Alliance, who was able to answer all official questions on her behalf.

“Suman showed them the seminar invitation from Helsinki. They didn’t have any problems with her passport, visa etc. Just the fact that she spoke broken Hindi,” V S Roy David said.

On their part, immigration officials told Bangalore Mirror that Suman came to the immigration counter just 19 minutes before take-off, whereas the norm is at least 30 minutes. They added that she couldn’t answer them convincingly when a global verification procedure alerted them to certain discrepancies on her passport status.

When V S Roy David tried to translate her Hindi to the immigration officials they made snide remarks, asking him whether he was having an affair with her. “They asked me all kinds of questions. It was disgusting,” said V S Roy David.

The BIA immigration officials told Suman to fly to Helsinki from Delhi. Which they eventually did. The Indira ಗಾಂಧಿ International Airport authorities at Delhi, interestingly, let Suman fly to Finland without any hitch.

‘She didn’t give convincing answers’

This is what the spokesperson of the immigration department said: “Suman Koratti checked-in with Emirates Airlines at 3.13 am at BIA for the flight scheduled to take-off at 4.15 am. She came to immigration counter located on the first floor of BIA at 3.56 am, 43 minutes after the check-in with airline counter. Only 19 minutes were left for departure. As per established norms, she should have come to the immigration counter at least half an hour before departure.

“When we checked Passport Information Service on Net (PISON), there was a Lost/Damage/Impound/Revoke mention against her passport number. We questioned her on this, but she failed to give a convincing reply. She spoke Hindi with a peculiar accent. She could not explain why she was going to Finland. Our officer did not have enough time to profile her as she came late. At this juncture, we suggested that she take another flight to the same destination at 9.30 pm the same day. On her refusal, we had to offload her.”

Meanwhile, Foreigners Regional Registration Officer (FRRO), Soumendu Mukharjee explained that he had not come across any incident of discrimination based on caste, creed and identity so far in the immigration department. “We have to verify this. It is not fair on my part to comment on this issue. I will look into it and take immediate action,” he said.

THANKS TO "BANGALORE MIRROR"

5.06.2010

ಎಚ್.ವೈ.ಎಸ್.ಎ. ಖಂಡನೆ


ಪತ್ರಿಕಾ ಸ್ವಾತಂತ್ರ್ಯಕ್ಕೆ ಭಂಗ ತರುವಂಥ ಕ್ರಮವನ್ನು ಕೈಗೊಂಡಿರುವ ಶಿವಮೊಗ್ಗ ಪೊಲೀಸರ ಕ್ರಮವನ್ನು ಖಂಡಿಸಿ ಹೊಯ್ಸಳ ಯೂತ್ಸ್ ಸ್ಪೋರ್ಟ್ಸ್ ಅಸೋಸಿಯೇಷನ್ (ಎಚ್.ವೈ.ಎಸ್.ಎ.) ಯುವಕರು ಹಾಗೂ ಇಸ್ರೋ ಲೇಔಟ್ ಮತ್ತು ಕುಮಾರಸ್ವಾಮಿ ಬಡಾವಣೆಯ ನಾಗರಿಕರು ಗುರುವಾರ ಬೆಂಗಳೂರಿನಲ್ಲಿ ಪ್ರದರ್ಶನ ಫಲಕಗಳನ್ನು ಹಿಡಿದು ಮೌನ ಪ್ರತಿಭಟನೆ ನಡೆಸಿದರು


ಸುದ್ದಿ ಮೂಲ ಬಹಿರಂಗಕ್ಕೆ ಪೊಲೀಸರ ಒತ್ತಾಯ:
ಎಚ್.ವೈ.ಎಸ್.ಎ. ಖಂಡನೆ

ಸುದ್ದಿ ಮೂಲವನ್ನು ಬಹಿರಂಗಪಡಿಸಬೇಕೆಂದು ಶಿವಮೊಗ್ಗ ಪೊಲೀಸರು "ಪ್ರಜಾವಾಣಿ" ಪತ್ರಿಕೆಯ ಸಹ ಸಂಪಾದಕರಾದ ಪದ್ಮರಾಜ ದಂಡಾವತಿ ಮತ್ತು ವರದಿಗಾರ ರಾಹುಲ್ ಬೆಳಗಲಿ ಅವರಿಗೆ ನೋಟಿಸ್ ನೀಡಿರುವುದನ್ನು ಖಂಡಿಸಿರುವ ಹೊಯ್ಸಳ ಯೂತ್ಸ್ ಸ್ಪೋರ್ಟ್ಸ್ ಅಸೋಸಿಯೇಷನ್ (ಎಚ್.ವೈ.ಎಸ್.ಎ.) ಯುವಕರು ಗುರುವಾರ ಬೆಂಗಳೂರಿನಲ್ಲಿ ಮೌನ ಪ್ರತಿಭಟನೆ ನಡೆಸಿದರು.

ಪತ್ರಕರ್ತರಿಗೆ ನೋಟಿಸ್ ನೀಡಿರುವ ಪೊಲೀಸರು ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿರುವುದನ್ನು ಎಚ್.ವೈ.ಎಸ್.ಎ. ಯುವಕರು ಖಂಡಿಸಿದ್ದು, ಇಸ್ರೋ ಲೇಔಟ್ ಹಾಗೂ ಕುಮಾರಸ್ವಾಮಿ ಲೇಔಟ್ ನಾಗರಿಕರೊಂದಿಗೆ ಸೇರಿ ಪ್ರದರ್ಶನ ಫಲಕಗಳನ್ನು ಹಿಡಿದು "ಪತ್ರಿಕಾ ಸ್ವಾತಂತ್ರ್ಯವನ್ನು ಕಾಪಾಡಬೇಕು" ಎಂದು ಆಗ್ರಹಿಸಿದರು.

ನೈಜವಾದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಡುತ್ತಿರುವ ಪತ್ರಕರ್ತರ ವಿರುದ್ಧ ಇಂಥ ಕ್ರಮವನ್ನು ಕೈಗೊಂಡಿರುವುದು ಆಕ್ಷೇಪಾರ್ಹವೆಂದು ಈ ಭಾಗದ ನಾಗರಿಕರು ಧ್ವನಿ ಎತ್ತಿದ್ದಾರೆ.

"ಸುದ್ದಿ ಮೂಲವನ್ನು ರಹಸ್ಯವಾಗಿಡುವುದು ಪತ್ರಿಕಾ ಧರ್ಮಗಳಲ್ಲಿ ಒಂದಾಗಿದೆ. ಎಲ್ಲ ಪತ್ರಕರ್ತರೂ ಇದನ್ನು ಪಾಲಿಸಲೇಬೇಕು. ಇದಕ್ಕೆ ವಿರುದ್ಧವಾಗಿ ಸುದ್ದಿ ಮೂಲವನ್ನು ತಿಳಿಸುವಂತೆ ಪೊಲೀಸರು ನೋಟಿಸ್ ನೀಡುವ ಮೂಲಕ ಒತ್ತಡ ಹೇರಿರುವುದು ಸರಿಯಲ್ಲ" ಎಂದು ಕೂಡ ಎಚ್.ವೈ.ಎಸ್.ಎ. ಯುವಕರು ಅಭಿಪ್ರಾಯಪಟ್ಟಿದ್ದಾರೆ.

ಎಚ್.ವೈ.ಎಸ್.ಎ. ಪ್ರಧಾನ ಕಾರ್ಯದರ್ಶಿ ಕಿರಣ್ ಆಳ್ವಾ ವಿ. ಅವರ ನೇತೃತ್ವದಲ್ಲಿ ನಡೆದ ಮೌನ ಪ್ರತಿಭಟನೆಯಲ್ಲಿ ಇಸ್ರೋ ಲೇಔಟ್ ಹಾಗೂ ಕುಮಾರಸ್ವಾಮಿ ಬಡಾವಣೆಯ ನಾಗರಿಕರು ಪಾಲ್ಗೊಂಡರು.

3.29.2010

ಹುಲಿ ರಕ್ಷಣೆಗೆ ಧ್ವನಿ ಎತ್ತಿದ "ಯಾಮಿನಿ"



ಬೆಂಗಳೂರು: "ಹುಲಿ ರಕ್ಷಣೆ ನಮ್ಮೆಲ್ಲರ ಹೊಣೆ" ಸಂದೇಶವನ್ನು ಪ್ರತಿಯೊಬ್ಬರಿಗೂ ಮುಟ್ಟಿಸುವ ಪ್ರಯತ್ನದಲ್ಲಿ "ಜಿ.ಎನ್.ಎಸ್." ಯಾಮಿನಿ ಫೌಂಡೇಷನ್ ತೊಡಗಿದೆ.

ಫೌಂಡೇಷನ್ ಕಾರ್ಯದರ್ಶಿಯೂ ಆಗಿರುವ ಕಿರುತೆರೆ ನಟಿ ಶೋಭಾ ಎಂ.ಲೋಲನಾಥ್ ಅವರು ಹುಲಿ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿಯೊಬ್ಬರೂ ಹೇಗೆ ತಮ್ಮದೇ ಆದ ರೀತಿಯಲ್ಲಿ ಪ್ರಯತ್ನ ಮಾಡಬಹುದು ಎನ್ನುವುದನ್ನು ಮನವರಿಕೆ ಮಾಡಿಕೊಡಲು ಮುಂದಾಗಿದ್ದಾರೆ.

ಇದೇ ಜಾಗೃತಿ ಆಂದೋಲನದ ಅಂಗವಾಗಿ ಹುಲಿ ರಕ್ಷಣೆಯ ಕುರಿತ ಸಂದೇಶಗಳನ್ನು ಹೊತ್ತ "ಸ್ಟೀಕರ್" ಹಂಚುವ ಕಾರ್ಯಕ್ರಮವನ್ನೂ ಶೋಭಾ ಅವರು ಸೋಮವಾರ ಉದ್ಯಾನನಗರಿಯಲ್ಲಿ ಆರಂಭಿಸಿದರು. ಅಷ್ಟೇ ಅಲ್ಲ ರಾಷ್ಟ್ರೀಯ ಪ್ರಾಣಿಯಾದ ಹುಲಿಯ ಚರ್ಮ ಹಾಗೂ ಉಗುರು ಕೊಳ್ಳಬಾರದು; ಇವುಗಳನ್ನು ಮಾರುವವರು ಕಾಣಿಸಿಕೊಂಡರೆ ಪೊಲೀಸರಿಗೆ ಮಾಹಿತಿ ನೀಡುವ ಅಗತ್ಯದ ಕುರಿತೂ ತಿಳುವಳಿಕೆ ನೀಡುವ ಕಾರ್ಯವನ್ನೂ ಫೌಂಡೇಷನ್ ಸದಸ್ಯರು ಆರಂಭಿಸಿದರು.

"2001-02ರಲ್ಲಿ 3,642 ರಷ್ಟು ಇದ್ದ ಹುಲಿಗಳ ಸಂಖ್ಯೆಯು ಈಗ ಅಂದಾಜು 1,411ಕ್ಕೆ ಕುಸಿದಿದೆ. ಇದೇ ಆತಂಕಕ್ಕೆ ಕಾರಣ. ಹುಲಿ ಚರ್ಮ ಹಾಗೂ ಉಗುರು ಕೊಳ್ಳುವಲ್ಲಿ ಹಲವರಿಗೆ ಆಸಕ್ತಿ ಇರುವ ಕಾರಣ ಇಂಥದೊಂದು ಅಪಾಯ ಎದುರಾಗಿದೆ. ಆದ್ದರಿಂದ ಕೊಳ್ಳುವ ಆಸಕ್ತಿಯೇ ಇಲ್ಲವಾಗಬೇಕು, ಆಗ ಹುಲಿಯನ್ನು ಕೊಲ್ಲುವವರೂ ಇಲ್ಲವಾಗುತ್ತಾರೆ" ಎಂದು ಶೋಭಾ ಅವರು ಹೇಳಿದ್ದಾರೆ.

ಹುಲಿ ರಕ್ಷಣೆ ಜಾಗೃತಿ ಆಂದೋಲನದ ಮುಂದಿನ ಹೆಜ್ಜೆಯಾಗಿ "ಜಿ.ಎನ್.ಎಸ್." ಯಾಮಿನಿ ಫೌಂಡೇಷನ್ ವಿವಿಧ ಕಲಾವಿದರನ್ನು ಒಗ್ಗೂಡಿಸಿ ನೃತ್ಯ ರೂಪಕವನ್ನು ಪ್ರದರ್ಶಿಸಲಿದೆ. ಈ ನೃತ್ಯ ರೂಪಕ ಪ್ರದರ್ಶನವನ್ನು ರಾಜ್ಯದ ವಿವಿಧ ನಗರಗಳಲ್ಲಿ ಆಯೋಜಿಸಲಾಗುವುದೆಂದು ಶೋಭಾ ತಿಳಿಸಿದ್ದಾರೆ.

3.19.2010

ನೀ...ಜಿಂಕೆ ಮರಿನಾ...!


ಹೊಯ್ಸಳ ವೈಲ್ಡ್ಲೈಫ್ ಕನ್ಸರ್ವೇಷನ್
ಸೊಸೈಟಿ (ಎಚ್.ಡಬ್ಲ್ಯು.ಸಿ.ಎಸ್.)
ಮುಖ್ಯಸ್ಥರಾದ ಕಿರಣ್ ಆಳ್ವಾ ಅವರ
ತೋಳಲ್ಲಿ ಪುಟಾಣಿ ಜಿಂಕೆ.



ನೋಡಿದ ತಕ್ಷಣ ಎಲ್ಲರ ಕಣ್ಮನವನ್ನು ಸೆಳೆಯುವ ಮುದ್ದು ಮುಖ. ಹತ್ತಿರ ಹೋದವರೆಲ್ಲರನ್ನು ನಾಲಿಗೆ ಚಾಚಿ ಮುಟ್ಟುವ ತವಕ. ಹತ್ತಿರ ತನ್ನವರಿಲ್ಲದ ಕಾರಣ ಅದಕ್ಕೆ ಬಾಟಲಿಯಲ್ಲಿ ಹಾಲುಣಿಸುವ `ಪ್ರಾಣಿ ಪಾಲಕ' ರಾಮ ಅವರೇ ಅಮ್ಮನಂತೆ. ಪಿಳಪಿಳ ಕಣ್ಣುಬಿಡುವ ಈ ಜಿಂಕೆ ಮರಿ ತನ್ನ ತಾಯಿಯಿಂದ ದೂರವಾಗಿ ಈಗ ಅನಾಥ. ಆದ್ದರಿಂದ ಅದಕ್ಕೀಗ ಬನ್ನೇರುಘಟ್ಟ ರಾಷ್ಟ್ರೀಯ ವನ್ಯಜೀವಿ ಉದ್ಯಾನವನವೇ ಆಶ್ರಯ ತಾಣ.

ತಾಯಿಯಿಂದ ದೂರವಾಗಿ ಖಾಸಗಿ ವ್ಯಕ್ತಿಯೊಬ್ಬರ ಕೈಸೇರಿದ್ದ ಈ ಜಿಂಕೆ ಮರಿಯನ್ನು ವನ್ಯಜೀವಿ ರಕ್ಷಣೆ ಕಾಯಿದೆಯ ಅಡಿಯಲ್ಲಿ ರೆಸ್ಕಿವ್ ಮಾಡಿ ತಂದು ಈ ಉದ್ಯಾನದಲ್ಲಿ ಪೋಷಿಸಲಾಗುತ್ತಿದೆ. ಇದರ ವಯಸ್ಸು ಸುಮಾರು ಒಂದೂವರೆ ತಿಂಗಳು ದಾಟಿರಬಹುದು ಎನ್ನುವ ಅಂದಾಜು. ಆದ್ದರಿಂದ ಅದಕ್ಕಿನ್ನೂ ಗಟ್ಟಿಯಾದ ಆಹಾರ ಸೇವಿಸಲು ಆಗುವುದಿಲ್ಲ. ಆದ್ದರಿಂದ ವನ್ಯಜೀವಿ ಉದ್ಯಾನವನದ ಸಿಬ್ಬಂದಿಯೇ ಮುದ್ದುಮಾಡಿ ಹಾಲು ಕುಡಿಸಬೇಕು.

ಈ ಹೊಸ ಅತಿಥಿಯನ್ನು ಇನ್ನೂ ಸ್ವಚ್ಛಂದವಾಗಿ ಓಡಾಡಲು ವನ್ಯಜೀವಿ ಉದ್ಯಾನಕ್ಕೆ ಬಿಡಲು ಸಾಧ್ಯವಿಲ್ಲ. ಆದ್ದರಿಂದ ಇನ್ನೂ ಕೆಲವು ತಿಂಗಳು ಅದಕ್ಕೆ ಪೋಷಣೆ ನೀಡಿ, ಎಲೆ-ಕಾಯಿ ತಿನ್ನುವಷ್ಟು ಬೆಳೆದ ನಂತರ ಹೊರಗೆ ಬಿಡಲಾಗುತ್ತದೆ. ಸದ್ಯಕ್ಕೆ ಸಹಾಯಕ ನಿದರ್ೇಶಕ(ಪಶುವೈದ್ಯ ಸೇವೆ)ರಾದ ಬಿ.ಸಿ.ಚಿಟ್ಟಿಯಪ್ಪ ಅವರ ಮಾರ್ಗದರ್ಶನದಲ್ಲಿ ಇದನ್ನು ಪೋಷಿಸುವ ಕೆಲಸ ನಡೆಯುತ್ತಿದೆ.

-ಕೃಪೆ: `ಪ್ರಜಾವಾಣಿ' ಕನ್ನಡ ದಿನಪತ್ರಿಕೆ

3.18.2010

ಬನ್ನೇರುಘಟ್ಟದಲ್ಲಿ ಚಿಂಕಾರಾ "ಮರಿ"



ಮೊದಲ ಬಾರಿಗೆ ಕರ್ನಾಟಕದ ವನ್ಯಜೀವಿ ಉದ್ಯಾನವೊಂದರಲ್ಲಿ "ಚಿಂಕಾರಾ" ಮರಿ ಹಾಕಿದೆ. ಇಂಥದೊಂದು ವಿಶೇಷ ಸಾಧ್ಯವಾಗಿದ್ದು ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ.

ಇಲ್ಲಿನ ವಾತಾವರಣದಲ್ಲಿ ಚಿಂಕಾರಾ ಗರ್ಭಧಾರಣೆ ಮಾಡಲು ಸಾಧ್ಯವೇ ಇಲ್ಲ, ಹಾಗೆ ಸಾಧ್ಯವಾದರೂ ಅದು ಮರಿ ಹಾಕುವ ಸಂಭವವೂ ಕಡಿಮೆ. ಮರಿ ಹುಟ್ಟಿದರೂ ಅದು ಇಲ್ಲಿನ ಪರಿಸರದಲ್ಲಿ ಬದುಕಿ ಉಳಿಯುವುದು ಕಷ್ಟ... ಎನ್ನುವ ಹಲವಾರು ಅಭಿಪ್ರಾಯಗಳನ್ನು ಚಾಲೆಂಜ್ ಆಗಿ ತೆಗೆದುಕೊಂಡ ಬನ್ನೇರುಘಟ್ಟ ಜೈವಿಕ ಉದ್ಯಾನದ ಸಹಾಯಕ ನಿರ್ದೇಶಕ (ವನ್ಯಜೀವಿ ವೈದ್ಯಕೀಯ ಸೇವೆ) ಡಾ.ಬಿ.ಸಿ.ಚಿಟ್ಟಿಯಪ್ಪ ಅವರು ಚಿಂಕಾರಾ ಗರ್ಭಧಾರಣೆಗಾಗಿ "ಕ್ರಾಸಿಂಗ್" ಮಾಡಿಸಿಯೇಬಿಟ್ಟರು.

ಅದರೊಂದಿಗೆ ಎಲ್ಲರ ಅನಿಸಿಕೆಗಳು ಸುಳ್ಳಾದವು. ರಾಜ್ಯದ ವನ್ಯಜೀವಿ ಉದ್ಯಾನವೊಂದರಲ್ಲಿ ಮೊಟ್ಟ ಮೊದಲ ಬಾರಿಗೆ ಚಿಂಕಾರಾ ಮರಿಯ ಜನನವಾಯಿತು. ಅಷ್ಟೇ ಅಲ್ಲ ಪುಟ್ಟ ಚಿಂಕಾರಾ ಮರಿಯು ಈಗ ಎದ್ದು ಓಡಾಡುತ್ತಿದೆ. ತಾಯಿಯ ಮೊಲೆಹಾಲು ಕೂಡ ಕುಡಿಯುತ್ತಿದೆ. "ಚಿಂಕಾರಾ ಸ್ವಸ್ಥವಾಗಿದೆ ಓಡಾಡುತ್ತಿದೆ ಇದನ್ನು ನಾವು ಕಣ್ಣಾರೆ ಕಂಡಿದ್ದೇವೆ, ಆನಂದಿಸಿದ್ದೇವೆ" ಎಂದು ಜಿ.ಎನ್.ಎಸ್. ಯಾಮಿನಿ ಫೌಂಡೇಷನ್ ಕಾರ್ಯದರ್ಶಿ ಶೋಭಾ ಎಂ. ಲೋಲನಾಥ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬನ್ನೇರುಘಟ್ಟದಲ್ಲಿ ಮಾತ್ರ ಚಿಂಕಾರಾ:

ಬನ್ನೇರುಘಟ್ಟ ಜೈವಿಕ ಉದ್ಯಾನದ ಹೊರತಾಗಿ ಕರ್ನಾಟಕದ ಯಾವುದೇ ವನ್ಯಜೀವಿ ಉದ್ಯಾನದಲ್ಲಿ ಚಿಂಕಾರಾ ಇಲ್ಲವೆನ್ನುವುದು ವಿಶೇಷ. ಇಲ್ಲಿ ಈ ಪ್ರಾಣಿಯನ್ನು ತಂದು ಸಲಹುವ ನಿಟ್ಟಿನಲ್ಲಿ ಸಹಾಯಕ ನಿರ್ದೇಶಕ (ವನ್ಯಜೀವಿ ವೈದ್ಯಕೀಯ ಸೇವೆ) ಡಾ.ಬಿ.ಸಿ.ಚಿಟ್ಟಿಯಪ್ಪ ಅವರು ಬಹಳಷ್ಟು ಆಸಕ್ತಿ ವಹಿಸಿದರು. ಅಷ್ಟೇ ಅಲ್ಲ ಇಲ್ಲಿಯೇ ಚಿಂಕಾರಾ ಮರಿ ಹಾಕುವಂತೆ ಮಾಡುವಲ್ಲಿಯೂ ಅವರ ವೈದ್ಯಕೀಯ ಪರಿಣತಿಯು ಪ್ರಯೋಜನಕ್ಕೆ ಬಂತು.

ಎಲ್ಲಕ್ಕಿಂತ ಮುಖ್ಯವಾಗಿ ಅದಕ್ಕೆ ಬೇಕಾದ ಸೂಕ್ತವಾದ ವಾತಾವರಣವನ್ನು ಕಲ್ಪಿಸಲು ಬನ್ನೇರುಘಟ್ಟ ಜೈವಿಕ ಉದ್ಯಾನದ ನಿರ್ದೇಶಕರಾದ ಮಿಲ್ಟ್ಯಾಗೊ ಅವರು ಬಹಳಷ್ಟು ಮುತುವರ್ಜಿ ವಹಿಸಿದರು. ಅದರ ಪರಿಣಾಮವಾಗಿ ಮೊಟ್ಟ ಮೊದಲ ಬಾರಿಗೆ ರಾಜ್ಯದ ವನ್ಯಜೀವಿ ಉದ್ಯಾನವನವೊಂದರಲ್ಲಿ ಚಿಂಕಾರಾ ಮರಿಯನ್ನು ನೋಡುವ ಅವಕಾಶವು ವನ್ಯಜೀವಿ ಪ್ರಿಯರಿಗೆ ಸಿಕ್ಕಿದೆ.

ಚಿಂಕಾರಾ ಅಂದರೇನು?:

ಚಿಂಕಾರಾ ಇದು "ಆಂಟೆಲೋಪ್" ಪ್ರಜಾತಿಗೆ ಸೇರಿದ್ದು ಇದನ್ನು "ಜೆನಸ್ ಗ್ಯಾಜೆಲ್ಲಾ" ಗುಂಪಿಗೆ ಸೇರಿದ ಜೀವಿಗಳ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಆದ್ದರಿಂದಲೇ "ಚಿಂಕಾರಾ"ವನ್ನು "ಗ್ಯಾಜೆಲ್ಲಾ ಬೆನ್ನೆಟ್ಟೀ" ಎಂದು ಕೂಡ ಗುರುತಿಸಲಾಗುತ್ತದೆ. ಇದು ದಕ್ಷಿಣ ಏಷ್ಯಾ ಭಾಗದಲ್ಲಿ ಕಂಡುಬರುವ ಅಳಿವಿನ ಅಂಚಿನಲ್ಲಿರುವ ವನ್ಯಜೀವಿಗಳಲ್ಲಿ ಒಂದಾಗಿದೆ.

ಭಾರತ, ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಇರಾನ್ ದೇಶದ ಕೆಲವು ಭಾಗದಲ್ಲಿಯೂ ಇದರ ಸಂಖ್ಯೆ ಕ್ಷೀಣಿಸುತ್ತಾ ಬರುತ್ತಿದೆ ಎನ್ನುವುದು ಅಂತರರಾಷ್ಟ್ರೀಯ ಪ್ರಕೃತಿ ಮತ್ತು ಪ್ರಕೃತಿ ಸಂಪನ್ಮೂಲ ಸಂರಕ್ಷಣಾ ಒಕ್ಕೂಟ (ಐ.ಯು.ಸಿ.ಎನ್) ಆತಂಕ. "ಇಂಡಿಯನ್ ಗ್ಯಾಜೆಲ್ಲಾ" ಎಂದು ಕೂಡ ಕರೆಯಲಾಗುವ ಚಿಂಕಾರಾ ಎತ್ತರ ಸಾಮಾನ್ಯವಾಗಿ 64 ಸೆಂಟಿ ಮೀಟರ್. ತೂಕ 35 ಕಿಲೋ ಗ್ರಾಂ ಆಗಿರುತ್ತದೆ.

ಮುಖದ ಮೇಲಿನ ಪಟ್ಟಿಗಳು ಚಿಂಕಾರಾ ಪ್ರಮುಖ ಆಕರ್ಷಣೆ. ಇದರ ಕಪ್ಪು ವರ್ಣದ ಕೊಂಬುಗಳು ಗರಿಷ್ಠ 39 ಸೆಂಟಿ ಮೀಟರ್ ವರೆಗೂ ಬೆಳೆಯುತ್ತವೆ. ಬಹಳ ನಾಚಿಕೆ ಸ್ವಭಾವದ ಈ ವನ್ಯಜೀವಿಯು ಸದಾ ಪ್ರಶಾಂತವಾದ ಪ್ರದೇಶದಲ್ಲಿ ಇರಲು ಬಯಸುತ್ತದೆ. ವಿಶೇಷವೆಂದರೆ ದೀರ್ಘ ಕಾಲದವರೆಗೆ ನೀರು ಕುಡಿಯದಿದ್ದರೂ ಇದಕ್ಕೆ ತೊಂದರೆ ಆಗದು. ಅದು ತಾನು ಸೇವಿಸುವ ಸಸ್ಯಗಳಲ್ಲಿನ ತೇವದಿಂದಲೇ ತನ್ನ ದೇಹಕ್ಕೆ ಅಗತ್ಯವಾದ ಜಲವನ್ನು ಪೂರೈಸಿಕೊಳ್ಳುತ್ತದೆ ಎನ್ನುವುದೂ ವಿಶಿಷ್ಟ.

ಗುಂಪಿನಲ್ಲಿ ಬದುಕುವ ಪ್ರಾಣಿಯಲ್ಲ ಚಿಂಕಾರಾ. ಕೆಲವೊಮ್ಮೆ ಗುಂಪಾಗಿ ಇದ್ದರೂ, ಸಂಖ್ಯೆಯು ನಾಲ್ಕು ಹಾಗೂ ಐದಕ್ಕಿಂತ ಹೆಚ್ಚಿರುವುದು ವಿರಳ. ಈ ರೀತಿಯ ವನ್ಯಜೀವಿ ಸಮಾಜದ ಜೀವನವೇ ಅದಕ್ಕೆ ಅಪಾಯಕಾರಿಯೂ ಹೌದು. ಸುಲಭವಾಗಿ ಬೇಟೆಗೆ ಬಲಿಯಾಗುತ್ತದೆ. ಚಿರತೆಗಳಿಗೆ ಪ್ರಿಯವಾದ ಆಹಾರವಾಗಿದೆ ಚಿಂಕಾರಾ.

ಚಿಂಕಾರಾವನ್ನು ಮನುಷ್ಯರು ಆಟಕ್ಕಾಗಿ ಕೊಲ್ಲುವುದು ಹೆಚ್ಚಾಗಿದ್ದರಿಂದ ಇವುಗಳ ಸಂಖ್ಯೆ ಕಡಿಮೆ ಆಗುತ್ತಿದೆ ಎನ್ನುವುದು ಆತಂಕ. ಆದ್ದರಿಂದ ಇವುಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವ ರಾಜಸ್ತಾನದಲ್ಲಿ ಚಿಂಕಾರಾ ರಕ್ಷಣೆಗಾಗಿ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗಿದೆ. ಆದರೂ ಬೇಟೆಗಾರರಿಗೆ ಚಿಂಕಾರಾ ಪ್ರಿಯವಾಗಿವೆ. ಇದಕ್ಕೆ ಕಾರಣ ಇವು ಗುಂಪುಗಳಲ್ಲಿ ಇರುವುದಿಲ್ಲ ಎನ್ನುವುದು.

2.10.2010

ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ...!



ಶ್ರೀ ಸದಾಶಿವರಾವ್ ಗರುಡ ಅವರ
ಹೆಸರಿನ ವೇದಿಕೆ, ಸ್ವಾಗತ ದ್ವಾರ
ಇಲ್ಲವೆ
ಸ್ವಾಗತ ಕಮಾನು ನಿರ್ಮಿಸುವ ಕುರಿತು


ಗದಗ ಜಿಲ್ಲೆಯಲ್ಲಿ ಈ ಬಾರಿಯ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುತ್ತಿರುವುದು ಸಂತಸದ ವಿಷಯ. ಈ ಸಂದರ್ಭದಲ್ಲಿ ಗದಗದಲ್ಲಿಯೇ ನೆಲೆಸಿ ಈ ನಾಡಿನ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸಿದ ಸಾಹಿತಿಗಳು, ನಾಟಕಕಾರರು, ಕವಿಗಳಿಗೆ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ತಕ್ಕ ಗೌರವ ನೀಡುವುದು ನಮ್ಮೆಲ್ಲರ ಕರ್ತವ್ಯ.

ಅದೇ ರೀತಿಯಲ್ಲಿ ನಾಟಕ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ "ಕರ್ನಾಟಕ ನಾಟಕಾಲಂಕಾರ", "ಅಭಿನಯ ಕೇಸರಿ" ಶ್ರೀ ಸದಾಶಿವರಾವ್ ಗರುಡ ಅವರನ್ನು ಕೂಡ ಇದೇ ಸಂದರ್ಭದಲ್ಲಿ ಸ್ಮರಿಸಿಕೊಳ್ಳುವ ಮೂಲಕ ಹಾಗೂ ಅವರಿಗೆ ತಕ್ಕ ಗೌರವ ಸಲ್ಲಿಸುವ ಮೂಲಕ ಸಾಹಿತ್ಯ ಕ್ಷೇತ್ರವು ಅವರಿಗೆ ತಕ್ಕ ಮಾನ ನೀಡಬೇಕಾಗಿರುವುದು ಅಗತ್ಯವಾಗಿದೆ.

ಆದ್ದರಿಂದ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಶ್ರೀ ಸದಾಶಿವರಾವ್ ಗರುಡ ಅವರ ಹೆಸರಿನಲ್ಲಿ ಒಂದು ವೇದಿಕೆ ಇಲ್ಲವೆ ಸ್ವಾಗತ ದ್ವಾರ ಅಥವಾ ಸ್ವಾಗತ ಕಮಾನು ನಿರ್ಮಿಸುವ ಮೂಲಕ ಅವರು ಕನ್ನಡ "ನಾಟಕ ಸಾಹಿತ್ಯ"ಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಬೇಕು. ಈ ವಿಷಯವನ್ನು ಸಂಘಟಕರು ಮರೆತರೆ ಅದು ಈ ಭಾಗದ ಮಹಾನ್ ನಾಟಕಕಾರ ಶ್ರೀ ಸದಾಶಿವರಾವ್ ಗರುಡ ಅವರ ಸಾಧನೆಯ ಸ್ಮರಣೆಯಲ್ಲಿ ದೊಡ್ಡ ಅಪಚಾರ ಮಾಡಿದಂತೆ ಆಗುತ್ತದೆ. ಈ ಕುರಿತು ಈಗಾಗಲೇ ಸಂಬಂಧಿಸಿದವರಿಗೆ ಮನವಿ ಪತ್ರವನ್ನು ಕಳುಹಿಸಲಾಗಿದೆ (ಪ್ರತಿಗಳನ್ನು ಈ ಪತ್ರಿಕಾ ಪ್ರಕಟಣೆಯ ಜೊತೆಗೆ ಲಗತ್ತಿಸಲಾಗಿದೆ).

ಈ ಕಾರಣಕ್ಕಾಗಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಕರು ಶ್ರೀ ಸದಾಶಿವರಾವ್ ಗರುಡ ಅವರ ಹೆಸರಿನಲ್ಲಿ ಒಂದು ವೇದಿಕೆ ಇಲ್ಲವೆ ಸ್ವಾಗತ ದ್ವಾರ ಅಥವಾ ಸ್ವಾಗತ ಕಮಾನು ನಿರ್ಮಿಸುವ ಕೆಲಸವನ್ನು ಮಾಡಬೇಕಾಗಿ ವಿನಂತಿ.

ನಮ್ಮ ವಿನಂತಿ:

"ಗರುಡ ನಾಟ್ಯ ಸಂಘ"ದ ನೂರಾರು ಕಲಾವಿದರ ಈ ಮನವಿಯನ್ನು ಪರಿಗಣಿಸಿ ಗದಗದಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ "ನಾಟಕಾಲಂಕಾರ" ಶ್ರೀ ಸದಾಶಿವರಾವ್ ಗರುಡ ಅವರ ಹೆಸರಲ್ಲಿ ಒಂದು ವೇದಿಕೆ ಇಲ್ಲವೆ ಸ್ವಾಗತ ಕಮಾನು ನಿರ್ಮಿಸುವ ಮೂಲಕ ನಾಟಕ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಈ ಮಹನಿಯರಿಗೆ ತಕ್ಕ ಗೌರವವನ್ನು ಸಲ್ಲಿಸಬೇಕಾಗಿ ಸಂಘಟಕರಲ್ಲಿ ವಿನಯಪೂರ್ವಕವಾದ ಪ್ರಾರ್ಥನೆ.

ಶ್ರೀ ಸದಾಶಿವರಾವ್ ಗರುಡ ಅವರ ಕಿರು ಪರಿಚಯ:

"ಕರ್ನಾಟಕ ನಾಟಕಾಲಂಕಾರ", "ಅಭಿನಯ ಕೇಸರಿ", "ನಾಟ್ಯಾಚಾರ್ಯ" ಹೀಗೆ ಹತ್ತು ಹಲವು ಬಿರುದಾವಳಿಗಳನ್ನು ಪಡೆದ ಶ್ರೀ ಸದಾಶಿವರಾವ್ ಗರುಡ ಅವರನ್ನು ಅಂದಿನ ಕಲಾ ಪ್ರಿಯರು "ಗರೂಡ ಸದಾಶಿವರಾಯರು" ಎಂದೇ ಕರೆಯುತ್ತಿದ್ದರು. ರಂಗಭೂಮಿಯು ಉಚ್ರಾಯ ಸ್ಥಿತಿಯಲ್ಲಿದ್ದ 1905ರಿಂದ 1940ರ ಅವಧಿಯಲ್ಲಿ ಬಂದ ವೃತ್ತಿನಿರತ ರಂಗಕರ್ಮಿಗಳು ಹಾಗೂ ನಾಟಕಕಾರರಲ್ಲಿ ಶ್ರೀ ಸದಾಶಿವರಾವ್ ಗರುಡ ಅವರದ್ದು ದೊಡ್ಡ ಹೆಸರು. ವೃತ್ತಿ ರಂಗಭೂಮಿಗೆ ಒಂದು ಶಿಸ್ತನ್ನು ತಂದುಕೊಟ್ಟ ಕೀರ್ತಿಯೂ ಶ್ರೀ ಸದಾಶಿವರಾವ್ ಗರುಡ ಅವರದ್ದು. ಈಗಲೂ ಅನೇಕ ಹವ್ಯಾಸಿ ರಂಗ ಕಲಾವಿದರು ಶ್ರೀ ಸದಾಶಿವರಾವ್ ಗರುಡ ಅವರ "ರಂಗಭೂಮಿ ಶಿಸ್ತು" ಪಾಲಿಸಿಕೊಂಡು ಹೋಗುತ್ತಿದ್ದಾರೆ.

"ಶ್ರೀ ದತ್ತಾತ್ರೇಯ ಸಂಗೀತ ನಾಟಕ ಮಂಡಳಿ" ಕಟ್ಟಿ ಬೆಳೆಸಿ, ಅದಕ್ಕಾಗಿ ನಾಟಕಗಳನ್ನು ಕೂಡ ಬರೆದು ಪ್ರದರ್ಶಿಸಿದ ಕೀರ್ತಿ ಶ್ರೀ ಸದಾಶಿವರಾವ್ ಗರುಡ ಅವರದ್ದು. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು ಕೂಡ ಶ್ರೀ ಸದಾಶಿವರಾವ್ ಗರುಡ ಅವರ "ಸತ್ಯ ಸಂಕಲ್ಪ" ನಾಟಕವನ್ನು ನೋಡಿ ಮೆಚ್ಚಿಕೊಂಡಿದ್ದು ವಿಶೇಷ. ಶ್ರೀ ಸದಾಶಿವರಾವ್ ಗರುಡ ಅವರ "ಕಂಸವಧ", "ಕೃಷ್ಣಲೀಲಾ", ಲಂಕಾದಹನ" ಮುಂತಾದ ನಾಟಕಗಳು ಬ್ರಿಟಿಷ್ ಆಡಳಿತದ ವಿರುದ್ಧ ಪರೋಕ್ಷವಾಗಿ ಧ್ವನಿ ಎತ್ತಿದ್ದು ಗಮನ ಸೆಳೆದ ಅಂಶ. ಈ ನಾಟಕಗಳನ್ನು ಆಗ ನೋಡಿದ ಪ್ರೇಕ್ಷಕರು ಉತ್ಸಾಹದಿಂದ "ಜೈ ಭಾರತ ಮಾತಾ", "ಬ್ರಿಟಿಷರಿಗೆ ಧಿಕ್ಕಾರ"ಎಂದು ಘೋಷಣೆ ಕೂಗುತ್ತಿದ್ದರು ಎನ್ನುವುದನ್ನೂ ಸ್ಮರಿಸಬಹುದು.

ನಾಟಕ ಸಾಹಿತ್ಯಕ್ಕೆ ಶ್ರೀ ಸದಾಶಿವರಾವ್ ಗರುಡ ಅವರು ನೀಡಿದ ಕೊಡುಗೆಯೂ ಅಪಾರ. 50ಕ್ಕೂ ಹೆಚ್ಚು ನಾಟಕಗಳನ್ನು ಬರೆದು ರಂಗದ ಮೇಲೆ ಪ್ರದರ್ಶಿಸಿದ್ದರು. "ಶ್ರೀರಾಮ ಪಾದುಕಾ ಪಟ್ಟಾಭಿಷೇಕ", "ವಿಷಮ ವಿವಾಹ", "ಲಂಕಾ ದಹನ", "ಕಂಸವಧ", "ಚವತಿ ಚಂದ್ರ", ಮಾಯಾ ಬಜಾರ", "ಸತ್ಯ ಸಂಕಲ್ಪ", "ನಮ್ಮ ಭಾಗ್ಯೋದಯ", "ದುರಾತ್ಮ ರಾವಣ", "ಉಗ್ರ ಕಲ್ಯಾಣ", "ಶಕ್ತಿ ವಿಲಾಸ"...ಮುಂತಾದ ನಾಟಕಗಳು ಈಗಲೂ ಜನಮನದಲ್ಲಿ ಉಳಿದಿವೆ.

ಗರುಡ ನಾಟ್ಯ ಸಂಘ ಪರಿಚಯ:

ಶ್ರೀ ಸದಾಶಿವರಾವ್ ಗರುಡ ಅವರ ನೆನಪನ್ನು ಹಸಿರಾಗಿ ಉಳಿಸುವ ಉದ್ದೇಶದಿಂದ ಸ್ಥಾಪಿತವಾದ "ಗರುಡ ನಾಟ್ಯ ಸಂಘ"ವು ಉತ್ತರ ಕರ್ನಾಟಕ ಭಾಗದಲ್ಲಿ ಮಾತ್ರವಲ್ಲ; ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶದಲ್ಲಿಯೂ ನೂರಾರು ಹವ್ಯಾಸಿ ನಾಟಕ, ನೃತ್ಯ ಪ್ರದರ್ಶನಗಳನ್ನು ನೀಡಿದೆ. ಬೆಂಗಳೂರಿನಲ್ಲಿಯೂ ತನ್ನ ಕೇಂದ್ರವನ್ನು ಸ್ಥಾಪಿಸುವ ಮೂಲಕ "ಗರುಡ ನಾಟ್ಯ ಸಂಘ"ವು ತನ್ನ ಚಟುವಟಿಕೆಯನ್ನು ನಡೆಸಿಕೊಂಡು ಬರುತ್ತಿದೆ. ಈಗ ಬೆಂಗಳೂರಿನಲ್ಲಿ ಚುರುಕಿನ ಚಟುವಟಿಕೆಗಳಿಂದ ಸಾಮಾಜಿಕ ವಿಷಯಗಳನ್ನು ಬಿಂಬಿಸುವ ನೃತ್ಯ, ನಾಟಕ ಹಾಗೂ ರೂಪಕಗಳನ್ನು ಪ್ರದರ್ಶಿಸುವ ಕೆಲಸವನ್ನು ಮಾಡುತ್ತಿದೆ. ಕಿರುತೆರೆ ಕಲಾವಿದೆಯೂ ಆಗಿರುವ ಶೋಭಾ ಎಂ.ಲೋಲನಾಥ್ ಅವರ ನೇತೃತ್ವದಲ್ಲಿ ರಂಗ ಹಾಗೂ ನೃತ್ಯ ಚಟುವಟಿಕೆಗಳ ಜೊತೆಗೆ, ಛಾಯಾಗ್ರಹಣ, ಚಿತ್ರಕಲೆ, ನೃತ್ಯಕಲೆಯನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದೆ. ಅಷ್ಟೇ ಅಲ್ಲ ವನ್ಯಜೀವಿಗಳ ರಕ್ಷಣೆಗಾಗಿ ನೃತ್ಯ ಚಳವಳಿ ಕೂಡ ನಡೆಸುಕೊಂಡು ಬರುತ್ತಿದೆ.

ಇಂಥದೊಂದು ಸಂಘವನ್ನು ಯುವಕರು ಕಟ್ಟುವಂತೆ ಪ್ರೇರಣೆ ನೀಡಿದ ಶ್ರೀ ಸದಾಶಿವರಾವ್ ಗರುಡ ಅವರಿಗೆ ಗದಗದಲ್ಲಿ ನಡೆಯುವ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ತಕ್ಕ ಗೌರವನ್ನು ಸಲ್ಲಿಸುವ ಸಕಾರಾತ್ಮಕವಾದ ಪ್ರಯತ್ನ ಮಾಡುವ ಮೂಲಕ ಗದುಗಿನ ನಾಟಕಕಾರರಾದ ಶ್ರೀ ಸದಾಶಿವರಾವ್ ಗರುಡ ಅವರು "ನಾಟಕ ಸಾಹಿತ್ಯ"ಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವ ಕಾರ್ಯವನ್ನು ಸಾಹಿತ್ಯ ಸಮ್ಮೇಳನದ ಸಂಘಟಕರು ಮಾಡುತ್ತಾರೆಂದು ನಾವು ವಿಶ್ವಾಸ ಹೊಂದಿದ್ದೇವೆ.

1.28.2010

ಏಕತೆಯ ಸಂದೇಶ ಸಾರಿದ "ಸಂಗಮ"


ಜನಿಸಿದ ಎಲ್ಲರೂ ನಡೆಯುವ ಭೂಮಿ, ಕುಡಿಯುವ ನೀರು...ಎಲ್ಲವೂ ಒಂದೇ; ಆದರೆ ನಮ್ಮಲ್ಲಿ ಜಾತಿ, ಧರ್ಮ ಹಾಗೂ ವರ್ಣ ಬೇಧ ಏಕೆ ಎಂದು ಯೋಚಿಸುವಂತೆ ಮಾಡಿದರು ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ ನಲಿದ ನಾಟ್ಯ ಕಲಾವಿದೆಯರು. ಆಂಧ್ರ ಮಹಾಕವಿ ಅನ್ನಮಯ್ಯ ಬರೆದ ಕಾವ್ಯದ ನಾಲ್ಕು ಸಾಲುಗಳನ್ನು ಗರುಡ ನಾಟ್ಯ ಸಂಘದ ಪುಟ್ಟ ಹಾಗೂ ಯುವ ಕಲಾವಿದರು ಅರ್ಥಪೂರ್ಣವಾಗಿ ರಂಗದ ಮೇಲೆ ಪ್ರದರ್ಶಿಸಿದ್ದು ವಿಶೇಷ.

ಒಂದೆಡೆ ನೃತ್ಯದ ಮೂಲಕ ಸಾಮಾಜಿಕ ಕಳಕಳಿಯ ಸಂದೇಶವನ್ನು ಸಾರಿದರೆ; ಇನ್ನೊಂದೆಡೆ ಅದೇ ವೇದಿಕೆಯಲ್ಲಿ "ಹ್ಯೂಮರ್ ಕಿಂಗ್" ವೈ.ಎಂ.ಎನ್. ಮೂರ್ತಿ ಅವರು ಜೀವನದಲ್ಲಿ ಸರ್ವರೂ ಪಾಲಿಸಬೇಕಾದ ಸತ್ವಯುತವಾದ ತತ್ವಗಳನ್ನು ಹಾಸ್ಯದ ಸಿಹಿಲೇಪದೊಂದಿಗೆ ಪ್ರೇಕ್ಷಕರಿಗೆ ಹಂಚಿದರು. ಆದ್ದರಿಂದ ಅಂದು ಸಂಜೆ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಡ್ಲ್ ಕಲ್ಚರ್ ಭವನದಲ್ಲಿ ಸೇರಿದ್ದವರ ಮನಕ್ಕೆ ರಂಜನೆಯ ಹಿತದೊಂದಿಗೆ ಒಂದಾಗಿ ಬಾಳುವ ಸಂದೇಶವೂ ತಂಗಾಳಿಯಾಗಿ ಸೋಕಿತು.

ಆದ್ದರಿಂದಲೇ ಅದೊಂದು ನೃತ್ಯ ಸೊಬಗಿನ ಹರಿವಿನ ಜೊತೆಗೆ ಹಾಸ್ಯದ ಪ್ರವಾವಹವೂ ಒಂದಾದ ಅಪೂರ್ವವಾದ ಹಾಗೂ ಅರ್ಥಪೂರ್ಣವಾದ "ಸಂಗಮ" ಸ್ಥಾನವೆನಿಸಿತು. "ಪರಭ್ರಹ್ಮ ಒಂದೇ" ಎನ್ನುವ ಸಂದೇಶವು ಗೆಜ್ಜೆಗಳ ಸದ್ದಿನೊಂದಿಗೆ ನೃತ್ಯ ಪ್ರಿಯರ ಎದೆಯೊಳಗೆ ನಿನಾದ ಮಾಡಿತು.

ಕಲಾವಿದೆ ಶೋಭಾ ಲೋಲನಾಥ್ ಮತ್ತು ಉತ್ಸಾಹಿ ಭರತನಾಟ್ಯ ಪಟು ಎಸ್.ರಘುನಂದನ್ ನೇತೃತ್ವದಲ್ಲಿ ಯುವ ಕಲಾವಿದರು ಕ್ಲಾಸಿಕಲ್ ಹಾಗೂ ಸಮಕಾಲೀನ ನೃತ್ಯವನ್ನು ವಿಭಿನ್ನವಾದ ರೀತಿಯಲ್ಲಿ ರಂಗವೆನ್ನುವ ಕ್ಯಾನ್ವಸ್ ಮೇಲೆ ರಂಗುಗಳ ಚಿತ್ತಾರವಾಗಿ ಬಿಡಿಸಿಟ್ಟರು. ಭಕ್ತಿಯ ಜೊತೆಗೆ ತತ್ವವೂ ಬೆರೆತಿದ್ದರಿಂದ ಸಂಪ್ರದಾಯದ ಚೌಕಟ್ಟಿನೊಳಗೆ ವೈಚಾರಿಕ ಅಂಶಗಳು ಬಿಂಬಿತವಾದವು.

ಎಂ.ಎಲ್, ನವೀನ್ ಕುಮಾರ್, ನಿಧಿ ಶ್ರೀನಾಥ್, ರಮ್ಯಾ ವೆಂಕಟೇಶ್, ಯೋಗಿತಾ ಎಲ್.ಎಂ., ಸಂಧ್ಯಾ ದಿನೇಶ್, ಅನಘಾ ಭಟ್, ವರ್ಷಾ ವೆಂಕಟೇಶ್, ಗಿರೀಶ್ ಭಟ್ ಹಾಗೂ ಕಾರ್ತಿಕ್ ಗಿರೀಶ್ ಶರ್ಮ ಅವರು ಪ್ರತಿಭಾಪೂರ್ಣವಾದ ನೃತ್ಯಾಭಿನಯದಿಂದ ಮೆಚ್ಚುಗೆಯ ಚಪ್ಪಾಳೆ ಗಿಟ್ಟಿಸಿದರು.

ವಿಶೇಷವೆಂದರೆ ಇದೇ ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಿ ಮೆಚ್ಚುಗೆಗೆ ಪಾತ್ರಳಾದ ಪುಟ್ಟ ಕಲಾವಿದೆ ವರ್ಷಾ ವೆಂಕಟೇಶ್ಗೆ ಸಹೃದಯಿಯಾದ ಕಿಶೋರ್ ಕುಮಾರ್ ಅವರು ಹದಿನೈದು ಸಾವಿರ ರೂಪಾಯಿ ಶಿಕ್ಷಣ ಪ್ರೋತ್ಸಾಹ ಧನವಾಗಿ ನೀಡಿದರು. ಶ್ರೀ ಸಾಯಿ ಗೋಲ್ಡ್ ಪ್ಯಾಲೆಸ್ ಸಹಯೋಗದಲ್ಲಿ ನಡೆದ "ಸಂಗಮ" ಕಾರ್ಯಕ್ರಮಕ್ಕೆ ಕಳೆಕಟ್ಟಿದ ಕಿರುತೆರೆ ನಿರ್ದೇಶಕ ಹಾಗೂ ನಿರ್ಮಾಪಕ ರವಿ ಕಿರಣ್, ಸಾಯಿ ಗೋಲ್ಡ್ ಪ್ಯಾಲೆಸ್ ಒಡೆಯರಾದ ಸರವಣ ಹಾಗೂ ಆರ್.ಎಂ.ಎಸ್. ಇಂಟರ್ ನ್ಯಾಷನಲ್ ಶಾಲೆ ಕಾರ್ಯದರ್ಶಿಗಳಾದ ರತ್ನಾ ಎಂ. ಶ್ರೀನಿವಾಸ್ ಕೂಡ ಕಲಾವಿದವೃಂದಕ್ಕೆ ಮುತ್ತಿನಂಥ ಮಾತುಗಳ ಹಾರ ತೊಡಿಸಿದರು.

1.21.2010

HUMOUR AND DANCE "SANGAMA"


GARUDA NATYA SANGA (R)
AND
SHREE SAI GOLD PALACE

PRESENTS

HUMOUR AND DANCE

"SANGAMA"

TIME: 6.30 PM

DATE: 24th JANUARY 2010
(SUNDAY)

VENUE:
THE INDIAN INSTITUTE OF WORLD CULTURE
NO.6, B.P. WADIA ROAD,
BASAVANAGUDI,
BANGALORE-560 004


ಹಾಸ್ಯ-ನೃತ್ಯ "ಸಂಗಮ"


ಸೊಬಗಿನ ಹರಿವಿನ ಜೊತೆಗೆ ಹಾಸ್ಯದ ಪ್ರವಾವಹವೂ ಒಂದಾಗುವ ಅಪೂರ್ವ "ಸಂಗಮ" ಸ್ಥಾನ! ಹೌದು; ಗರುಡ ನಾಟ್ಯ ಸಂಘ ಇಂಥದೊಂದು ರಸದೌತಣವನ್ನು ಕಲಾಪ್ರಿಯ ಸಹೃದಯರಿಗೆ ಉಣಬಡಿಸಲಿದೆ.

ಸಾಯಿ ಗೋಲ್ಡ್ ಪ್ಯಾಲೆಸ್ ಸಹಯೋಗದೊಂದಿಗೆ ಇದೇ ಭಾನುವಾರ (24ನೇ ಜನವರಿ, 2010) ಸಂಜೆ 6.30ಕ್ಕೆ ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಡ್ಲ್ ಕಲ್ಚರ್ ಸಭಾಂಗಣದಲ್ಲಿ ಗರುಡ ನಾಟ್ಯ ಸಂಘದ ಕಲಾವಿದರು ನೃತ್ಯದ ಸುಂದರ ಹಂದರದ ನಡುವೆ ತತ್ವ ಸಾರಕ್ಕೆ ಅಲಂಕಾರ ರತ್ನ ಕಿರೀಟ ತೊಡಿಸುವರು.

ಕಟ್ಟಿ ಹೆಜ್ಜೆ ಹಾಕು ಕಲಾವಿದರು "ಪರಭ್ರಹ್ಮ ಒಂದೇ" ಎನ್ನುವ ಸಂದೇಶವನ್ನೂ ಸಾರುವರು. ಅಷ್ಟೇ ಅಲ್ಲ ಅದೇ ವೇದಿಕೆಯಲ್ಲಿ "ಹ್ಯೂಮರ್ ಕಿಂಗ್" ವೈ.ಎಂ.ಎನ್. ಮೂರ್ತಿ ಅವರು ಜೀವನದಲ್ಲಿ ಪಾಲಿಸಬೇಕಾದ ಸತ್ವಯುತವಾದ ತತ್ವಗಳನ್ನು ಹಾಸ್ಯದ ಸಿಹಿಲೇಪದೊಂದಿಗೆ ಪ್ರೇಕ್ಷಕರಿಗೆ ಹಂಚುವರು. ಆದ್ದರಿಂದಲೇ ಇದು ಅರ್ಥಪೂರ್ಣವಾದ ಹಾಸ್ಯ-ನೃತ್ಯ ಸಂಗಮ ಸ್ಥಾನ.

ನಟಿ ಶೋಭಾ ಲೋಲನಾಥ್ ಮತ್ತು ಭರತನಾಟ್ಯ ಪಟು ಎಸ್. ರಘುನಂದನ್ ನೇತೃತ್ವದಲ್ಲಿ ಯುವ ಕಲಾವಿದರು ಕ್ಲಾಸಿಕಲ್ ಹಾಗೂ ಸಮಕಾಲೀನ ನೃತ್ಯವನ್ನು ವಿಭಿನ್ನವಾದ ರೀತಿಯಲ್ಲಿ ರಂಗವೆನ್ನುವ ಕ್ಯಾನ್ವಾಸ್ ಮೇಲೆ ರಂಗುಗಳ ಚಿತ್ತಾರವಾಗಿ ಬಿಡಿಸಿಡುವುದನ್ನು ನೋಡುವುದೇ ಕಣ್ಣಿಗೆ ಸೊಗಸು. ಭಕ್ತಿಯ ಜೊತೆಗೆ ತತ್ವವನ್ನು ಬೆರೆಸಿದ ವಿಶಿಷ್ಟವಾದ ನಾಟ್ಯಕಲಾ ಪ್ರದರ್ಶನವಿದು.

ಹಾಸ್ಯ ಮತ್ತು ನೃತ್ಯದ "ಸಂಗಮ" ಕಾರ್ಯಕ್ರಮಕ್ಕೆ ಕಳೆಕಟ್ಟಲು ಟೆಲಿವಿಷನ್ ಧಾರಾವಾಹಿಗಳ ನಿರ್ದೇಶಕ ಹಾಗೂ ನಿರ್ಮಾಪಕರಾದ ರವಿ ಕಿರಣ್, ಸಮಾಜ ಸೇವಕ ಕಿಶೋರ್ ಕುಮಾರ್ ಹಾಗೂ ಆರ್.ಎಂ.ಎಸ್. ಇಂಟರ್ ನ್ಯಾಷನಲ್ ಶಾಲೆ ಕಾರ್ಯದರ್ಶಿಗಳಾದ ರತ್ನಾ ಎಂ. ಶ್ರೀನಿವಾಸ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು.

ಎಂ.ಎಲ್, ನವೀನ್ ಕುಮಾರ್, ನಿಧಿ ಶ್ರೀನಾಥ್, ರಮ್ಯಾ ವೆಂಕಟೇಶ್, ಯೋಗಿತಾ ಎಲ್.ಎಂ., ಸಂಧ್ಯಾ ದಿನೇಶ್, ಅನಘಾ ಭಟ್, ವರ್ಷಾ ವೆಂಕಟೇಶ್, ಗಿರೀಶ್ ಭಟ್ ಹಾಗೂ ಕಾರ್ತಿಕ್ ಗಿರೀಶ್ ಶರ್ಮ ಅವರು ನೃತ್ಯ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿರುವ ಯುವ ಕಲಾವಿದರು.

11.06.2009

YOUTHFUL EXUBERANCE


YOUTHFUL EXUBERANCE


Mitha Ramesh who gave a kathak dance recital is a student of 'Nadam', popular Kathak school of Bangalore. She is the grand daughter of D S Garud, the tabla wizard. She has already performed in few dance programmes, in and outside Bangalore. "Saraswathi Vandana" gave her recital a bright start. The "Theen Thai" and the "Dhammar" - stood testifying to her hard practice.


The tharana which brought the curtains down was in the raga yaman kalyan. With some more higher training and stage experience Mitha has a bright future in the years to come.


Apart from her gurus Nandini Mehtha and Murali Mohan, she was well supported by Praveen D Rao (tabla) Samanvitha Sharma (vocal), Deepak (sarangi), Prakash Hegde (flute) and Srinivas (sitar) - from the wings.


-COURTESY: DECCAN HERALD

10.27.2009

INTEREST IN INDIAN DANCE


ಭಾರತೀಯ ನೃತ್ಯ; ವಿದೇಶಿ ಯುವತಿಯ ಆಸಕ್ತಿ

ದಕ್ಷಿಣ ಅಮೆರಿಕಾದಲ್ಲಿ ಹಲವಾರು ನೃತ್ಯ ಪ್ರದರ್ಶನ ನೀಡಿದ ಬೆಳ್ಳನೆ ಬೆಳ್ಳಿಯ ಬೆಡಗಿಗೆ ಅದೇನೋ ಭಾರತೀಯ ನೃತ್ಯಗಳ ಕಡೆಗೆ ಭಾರಿ ಸೆಳೆತ. ಆ ಆಕರ್ಷಣೆಯೇ ಅವಳು ಸಾವಿರಾರು ಮೈಲಿ ಸಾಗರವನ್ನು ದಾಟಿ ಇಲ್ಲಿಗೆ ಬಂದಳು. ಹೆಸರು ಜೆಸ್ಸಿಕಾ; ಉದ್ಯಾನಗರಿಗೆ ಬಂದ ನಂತರ ಮೊದಲು ಆರಂಭಿಸಿದ್ದು ಯೋಗಾಭ್ಯಾಸ. ಜೊತೆಗೆ ನಡೆಯಿತು ನೃತ್ಯ ಶಾಲೆಯ ಶೋಧ. `ಡೆಕ್ಕೆನ್ ಹೆರಾಲ್ಡ್' ಪತ್ರಿಕೆ ಎತ್ತಿಕೊಂಡು ಕಾರ್ಯಕ್ರಮ ಪಟ್ಟಿ ನೋಡಿ, ಕೆಲವು ನೃತ್ಯ ಪ್ರದರ್ಶನ ನೋಡಲು ಕೂಡ ಹೋದಳು. ಯಾವುದು ತನ್ನ ನೃತ್ಯ ಶೈಲಿಗೆ ಪೂರಕವಾಗುತ್ತದೆ ಎನ್ನುವ ಸಂಶೋಧನೆಯೂ ನಡೆಯಿತು. ಆಗ ಸೂಕ್ತವಾಗಿ ಕಂಡಿದ್ದು ಭಾರತದ ಎಲ್ಲ ನೃತ್ಯ ಪ್ರಕಾರಗಳ ಬೆರೆಸಿದ ಕಾಂಟೆಂಪರರಿ ಕ್ಲಾಸಿಕ್ ನೃತ್ಯ.

ಭರತನಾಟ್ಯ, ಕಥಕ್, ಕೂಚಪುಡಿ, ಮಣಿಪುರಿ, ಯಕ್ಷಗಾನ, ಅಟ್ಟಕಳರಿ...ಹೀಗೆ ಹತ್ತು ಹಲವು ಭಾರತೀಯ ನೃತ್ಯ ಶೈಲಿಯನ್ನು ಮೇಳೈಸಿಕೊಂಡ ಕಾಂಟೆಂಪರರಿ ಕ್ಲಾಸಿಕಲ್ ಇಷ್ಟವಾಯಿತು. ಆಗ ಜೆಸ್ಸಿಕಾ ಬಂದು ನಿಂತಿದ್ದು ಇಂತಹದೇ ಒಂದು ನೃತ್ಯ ಪ್ರಕಾರಕ್ಕೆ ಒಗ್ಗಿಕೊಂಡಿರುವ ತಂಡವನ್ನು ಕಟ್ಟಿಕೊಂಡು ಪ್ರದರ್ಶನ ನೀಡುತ್ತಿರುವ ನಟಿಯೂ ಆಗಿರುವ ನೃತ್ಯಗಾರ್ತಿ ಶೋಭಾ ಲೋಲನಾಥ್ ಅವರ ಮುಂದೆ. ಭಾರತದ ತಮ್ಮ ವೀಸಾ ಅವಧಿ ಮುಗಿಯುವಷ್ಟರಲ್ಲಿ ನೃತ್ಯ ಪಾಠ ಕಲಿಯುವ ಉತ್ಸಾಹದಿಂದ ಗಮನವಿಟ್ಟು ಪಾಠ ಕಲಿತಳು ಜೆಸ್ಸಿಕಾ.

ತಮ್ಮ ನಾಡಿನಲ್ಲಿ ನೃತ್ಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಜೆಸ್ಸಿಕಾಗೆ ಬೆಂಗಳೂರಿನ ಕಲಾ ಕ್ಷೇತ್ರದಲ್ಲಿ ಸಾಕಷ್ಟು ಅಚ್ಚರಿಗಳು ಕಾಣಿಸಿದವು. ಮೊದಲನೆಯದಾಗಿ ಇಲ್ಲಿ ನೃತ್ಯ ಪ್ರದರ್ಶನಗಳಿಗೆ ಉಚಿತ ಪ್ರವೇಶ ಎನ್ನುವುದು. `ಅಲ್ಲಿ; ನಮ್ಮ ದೇಶದಲ್ಲಿ ಯಾವುದೂ ಉಚಿತವಿಲ್ಲ. ಕಲೆಯೂ ಅಷ್ಟೇ. ನೋಡಬೇಕೆಂದರೆ ಹಣ ಕೊಡಬೇಕು. ಪ್ರವೇಶ ಶುಲ್ಕ ಭಹಳ ಅಧಿಕ. ನಾನು ಇಲ್ಲಿ ಮೊದಲ ಬಾರಿಗೆ ನೃತ್ಯ ಪ್ರದರ್ಶನ ನೋಡಲು ಹೋದಾಗ, ಟಿಕೆಟ್ ಕೌಂಟರ್ ಎಲ್ಲಿ ಎಂದು ಹುಡುಕಾಡಿದೆ. ಆಗ ಒಬ್ಬರು ಉಚಿತ ಪ್ರವೇಶ ಎಂದರು. ಭಾರಿ ಅಚ್ಚರಿ ಆಯಿತು. ಅದೊಂದು ಅದ್ಭುತ ನೃತ್ಯ ಪ್ರದರ್ಶನವಾಗಿತ್ತು. ಆದರೂ ಒಂದು ಡಾಲರ್ ಕೂಡ ವ್ಯಯ ಮಾಡದೆ ನೋಡಿದೆ' ಎಂದು ಇಷ್ಟಗಲ ಕಣ್ಣರಳಿಸಿದಳು ಜೆಸ್ಸಿಕಾ.

ಮಾತೃ ಭಾಷೆ ಸ್ಪ್ಯಾನಿಷ್ ಆದ್ದರಿಂದ ಜೆಸ್ಸಿಕಾಗೆ ಇಂಗ್ಲಿಷ್ ಮಾತನಾಡುವುದು ಹಾಗೂ ಅರ್ಥ ಮಾಡಿಕೊಳ್ಳುವುದು ಕಷ್ಟ. ಹಾಗೆಂದು ಮುಜುಗರ ಪಟ್ಟುಕೊಳ್ಳದೇ `ನನಗೆ ಇಂಗ್ಲಿಷ್ ಕಷ್ಟ; ಸ್ವಲ್ಪ ನಿಧಾನವಾಗಿ ಮಾತನಾಡಿ' ಎಂದು ನಿರ್ಭಿಡೆಯಾಗಿ ಹೇಳುತ್ತಾಳೆ.

`ನಾನು ಇಲ್ಲಿಗೆ ಬಂದ್ದಿದು ನೃತ್ಯ ಹಾಗೂ ಯೋಗ ಕಲಿಯುವುದಕ್ಕೆ. ಮೊದಲು ಕೋಲ್ಕತ್ತಕ್ಕೆ ಹೋಗಿದ್ದೆ; ಅಲ್ಲಿನ ಜನರು ಇಷ್ಟವಾಗಲಿಲ್ಲ. ಆದ್ದರಿಂದ ಬೆಂಗಳೂರಿಗೆ ಬಂದೆ. ಈ ನಗರದಲ್ಲಿನ ಜನ ತುಂಬಾ ಒಳ್ಳೆಯವರು' ಎಂದು ಒಂದೊಂದೇ ಇಂಗ್ಲಿಷ್ ಪದವನ್ನು ಜೋಡಿಸಿದ ಜೆಸ್ಸಿಕಾ `ನನ್ನ ಮಟ್ಟಿಗೆ ಇದು ಶಿಕ್ಷಣ ಪ್ರವಾಸ. ಬೆಳಿಗ್ಗೆಯಿಂದ ಸಂಜೆಯವರೆಗಿನ ಕಾರ್ಯಕ್ರಮದ ಟಾಯಮ್ ಟೇಬಲ್ ಇದೆ. ಆರು ಗಂಟೆಗೆ ಯೋಗ, ಆನಂತರ ಡಾನ್ಸ್ ಕ್ಲಾಸ್, ಅಲ್ಲಿ ಕಲಿತದ್ದನ್ನು ನನ್ನ ಕೋಣೆಗೆ ಹಿಂದಿರುಗಿ ಅಭ್ಯಾಸ ಮಾಡುವುದು. ಮಧ್ಯಾಹ್ನ "ಡೆಕ್ಕನ್ ಹೆರಾಲ್ಡ್" ಪತ್ರಿಕೆ ತೆಗೆದುಕೊಂಡು ನೃತ್ಯ ಕಾರ್ಯಕ್ರಮಗಳ ಪಟ್ಟಿ ನೋಡಿ, ಸಂಜೆ ನೃತ್ಯ ಸೊಬಗು ಆಸ್ವಾಧಿಸುವುದು. ಇಷ್ಟು ನನ್ನ ದಿನಚರಿ' ಎಂದು ಚೆಂದದ ಮಂದಹಾಸ ಚೆಲ್ಲುತ್ತಾಳೆ.

ಏನು ಇಷ್ಟವೆಂದು ಕೇಳಿದರೆ `ಇಲ್ಲಿನ ಸಂಪ್ರದಾಯಗಳು. ಪೂಜೆ ಮಾಡುವುದು, ಊದುಬತ್ತಿ ಹಾಗೂ ದೀಪ ಬೆಳಗುವುದನ್ನು ನಾನೂ ಮಾಡುತ್ತೇನೆ. ಒಂಥರಾ ಸಂತಸ ಸಿಗುತ್ತದೆ. ಡಾನ್ಸ್ ಕ್ಲಾಸ್ನಲ್ಲಿ ನಟರಾಜನ ಪೂಜೆ ಮಾಡಿದ್ದು, ನೆಲಕ್ಕೆ ಮೊಣಕಾಲೂರಿ ನಮಸ್ಕರಿಸಿದ್ದು... ಎಲ್ಲವೂ ನನ್ನ ನೆನಪಿನಲ್ಲಿ ಸದಾ ಇರುತ್ತದೆ. ಇದೇ ಸಂಪ್ರದಾಯವೇ ನಿಜವಾದ ಭಾರತ ಅಲ್ಲವೇ?' ಎಂದು ಕೇಳಿ, ತಣ್ಣಗೆ ನೋಡುತ್ತಾಳೆ.

ಜೆಸ್ಸಿಕಾ ತಾನು ಇಲ್ಲಿ ಕಲಿತ ವಿದ್ಯೆಯನ್ನು ತಮ್ಮ ದೇಶದಲ್ಲಿ ಬೇರೆಯವರಿಗೂ ಕಲಿಸಿಕೊಡುವ ಯೋಚನೆ. ಜೆಸ್ಸಿಕಾ ಹೇಳುವ ಪ್ರಕಾರ ವಿದೇಶದಲ್ಲಿ ಅತ್ಯಧಿಕವಾಗಿ ಸೇಲ್ ಆಗುವ ಭಾರತದ ಪ್ರೊಡಕ್ಟ್ ಯಾವುದೆಂದರೆ; ಅದು `ಯೋಗ' ಹಾಗೂ `ಮಸಾಲೆ' ಮಾತ್ರ!

ಲೇಖನ ಕೃಪೆ: "ಪ್ರಜಾವಾಣಿ" ಕನ್ನಡ ದಿನಪತ್ರಿಕೆ

FIGHT FOR RIGHT


"SHOOED AWAY"

Two women who were sold defective sandals by a shop-keeper fight for their right and ensure they get their money back.
It was a shoe matter, but two gutsy women refused to be shooed away by the shopkeeper who had sold defective sandals and refused to either return the money or exchange the goods sold.

It all began when Prema David, a resident of ISRO Layout , bought three pairs of sandals from Khal , a shoe store, in Jayanagar 4th Block on July 4. She paid Rs 2,097, but was shocked to find one of pairs being defective.

The next day, she tried another pair and found the strap had come off. I went to the shop-keeper to exchange the defective pair. He agreed, and when I tried out the other pairs, I found them all defective , she said.

I decided to get my money back. On July 11, I went to the shop with my friend Shobha Lolanath (a TV artiste). When I showed him the defective pairs of sandals and demanded that he return my money, he refused , Prema said.

Even as the shop-keeper screamed at the women, the other shop-keepers alleged that she had pulled the straps.

The shop-keeper was in no mood to listen. We were feeling helpless when we saw a Hoysala vehicle pass by. I approached them and explained the matter to them, said Shobha.

The police tried to reason with the shop owner. After some time, the police felt it was futile to talk to him and asked them to lodge a complaint in Jayanagar police station.

Immediately, Prema and Shobha went to the police station and filed a complaint. Subsequently , the inspector summoned the shop-keeper who agreed to return the entire amount to Prema.

COURTESY: "BANGALORE MIRROR"

10.03.2009

`ಮಿತಾ' ನೃತ್ಯೋತ್ಸಾಹ ಅಪರಿಮಿತ

`ಮಿತಾ' ನೃತ್ಯೋತ್ಸಾಹ ಅಪರಿಮಿತ

ಭಾವನೆಗಳಿಗೆ ಮನ ನೀಡಿದ ಪದಗಳೆಲ್ಲ ಸೇರಿ ಆಯಿತು ಭಾವಗೀತೆ; ಆ ಗೀತೆಯ ಲಯಕೆ ನಲಿಯಿತು ನವಿಲು. ಅದನು ಕಂಡ ಕಂಗಳ ಅಂಗಳದಲ್ಲಿ ಹರ್ಷ ವರ್ಷ! ಎದೆಯೊಳಗೆ ಕೂಡ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದಂತಹ ಗಿಲಗಿಲ ನಾದ-ನಿನಾದ. ಆಗ ಆದ ಆನಂದವನ್ನು ಅಕ್ಷರಗಳ ಜೋಡಿಸಿಟ್ಟು ವರ್ಣಿಸಲು ಸಾಧ್ಯವೆ? ಖಂಡಿತ ಆಗದು! ಅಂತಹದೊಂದು ಅವ್ಯಕ್ತ ಹಿತಾನುಭವ ನೀಡಿದ್ದು ಮಿತಾ ರಮೇಶ್ ಅವರ ಕಥಕ್ ರಂಗ ಪ್ರವೇಶ ಕಾರ್ಯಕ್ರಮ.
ತಾಳ ಹಾಗೂ ಲಯದ ಮೇಲೆ ಬಿಗುವಿನ ಹಿಡಿತ ಸಾಧಿಸಿದ ಈ ಯುವ ನರ್ತಕಿ ತೋರಿದ ಭಾವ ಶುದ್ಧತೆಯನ್ನು ಕಂಡ ಖ್ಯಾತ ಕಲಾ ವಿಮರ್ಶಕ ಡಾ.ಎಂ.ಸೂರ್ಯಪ್ರಸಾದ್ ಕೂಡ ಹಾಡಿ ಹೊಗಳಿದ್ದು ಅಚ್ಚರಿಯೇನಲ್ಲ. ಕಥಕ್ ನೃತ್ಯ ಪ್ರಕಾರವು ಕೇವಲ ತಾಳಕ್ಕೆ ಹೆಜ್ಜೆ ಕೂಡಿಸುವ ಕಲೆಯಲ್ಲ; ಭಾವಗಳು ಕೂಡ ಅಲ್ಲಿ ಉಕ್ಕಿ ಹರಿಯಬೇಕು. ಅದೇ ನಿಜವಾದ ಕಥಕ್ ಕಲಾ ಕೌಶಲ್ಯ. ಅಂತಹ ಭಾವ ಸ್ಪಷ್ಟತೆಯನ್ನು ಮಿತಾ ರಂಗದ ಮೇಲೆ ಪ್ರದರ್ಶಿಸಿದರು.
ನೃತ್ಯ ಗುರುಗಳಾದ ನಂದಿನಿ ಕೆ.ಮೆಹ್ತಾ ಹಾಗೂ ಕೆ.ಮುರಳಿ ಮೋಹನ್ ಮಾರ್ಗದರ್ಶನದಲ್ಲಿ ಭಾವ-ಭಂಗಿ, ರಾಗ-ತಾಳ ಹಾಗೂ ಲಯಗಳ ಜ್ಞಾನ ಪಡೆದಿರುವ ಮಿತಾ ಅವರ ನೃತ್ಯೋತ್ಸಾಹ ನೋಡಿದವರಿಗೆ ಅದೊಂದು ಉತ್ಸವದಂತೆ ಗೋಚರಿಸಿತು. ರಂಗ ಪ್ರವೇಶ ನೃತ್ಯ ಸೊಬಗು ಹೆಚ್ಚಿಸಲು ಸಜ್ಜಾಗಿದ್ದ ವೇದಿಕೆ ಕೂಡ ಅಂತಹದೇ ಹಬ್ಬದ ಸಡಗರವನ್ನು ಕಂಗಳ ಮುಂದೆ ತೆರೆದಿಟ್ಟಿದ್ದು ವಿಶೇಷ.

ಕಲಿತ ಕಲಾ ಕೌಶಲ್ಯವನ್ನು ರಂಗದ ಮೇಲೆ ಪ್ರದರ್ಶಿಸುವ ಅಂಗವಾದ ರಂಗ ಪ್ರವೇಶದ ಈ ಸಂಪ್ರದಾಯದ ಚೌಕಟ್ಟಿನೊಳಗೆ ಎಲ್ಲವನ್ನೂ ಚೊಕ್ಕಟವಾಗಿ ಜೋಡಿಸಿಟ್ಟಿದ್ದು ಮಾತ್ರ ಮಿತಾ. ತಾಳಗಳ ಜೊತೆಗೆ ಹೆಜ್ಜೆಗೂಡಿಸಿದರು. ಅಷ್ಟೇ ಅಲ್ಲ; ರಾಗದ ಲಯದೊಂದಿಗೆ ಲಾಲಿತ್ಯಪೂರ್ಣವಾಗಿ ಅಂಗ ಚಲನೆಯ ರಂಗವಲ್ಲಿಯನ್ನೂ ಬಿಡಿಸಿದರು ಲಲಿತಾ ಹಾಗೂ ಟಿ.ಎನ್. ರಮೇಶ್ ಅವರ ಪುತ್ರಿಯಾದ ಮಿತಾ.

ಶಾಸ್ತ್ರದಂತೆ ಸರಸ್ವತಿ ವಂದನೆಯೊಂದಿಗೆ ತೆರೆಯಿತು ಕಥಕ್ ರಂಗ ಮಂಚದ ತೆರೆ. `ವಿಹರತಿ ಭ್ರಹ್ಮ ನಂದಿನಿ...' ಹಾಡಿನ ಭಾವಗಳ ನಾಡಿ ಹಿಡಿದ ನೃತ್ಯಗಾರ್ತಿಯ ಹಸ್ತ ಮುದ್ರೆಗಳ ಶುದ್ಧಿಯಂತೂ ಎದ್ದು ಕಾಣಿಸಿತು. ಅದೇ ಪ್ರೇಕ್ಷಕರಿಗೆ ಪ್ರಿಯವೂ ಎನಿಸಿದ್ದು ಸಹಜ. ಇಲ್ಲಿ ನೃತ್ಯ ಮಾಡಿದ ಯುವ ಕಲಾವಿದೆಗೆ ಸಮನ್ವಿತಾ ಶರ್ಮ ಅವರ ಗಾಯನವೇ ಸ್ಫೂರ್ತಿಯ ಸೆಲೆ. ಪ್ರಭಾವಿ ಗಾನವೇ ನೃತ್ಯ ಪ್ರದರ್ಶನದ ಅರ್ಧ ಯಶಸ್ಸು; ಇನ್ನರ್ಧ ಪಾಲು ಮಿತಾ ನೃತ್ಯ ಪರಿಣತಿಯದ್ದು.

`ತೀನ್ ತಾಲ್' ಅಂತೂ ಮನದ ಮನೆಯಲ್ಲಿ ಗಟ್ಟಿಯಾಗಿ ಉಳಿಯಿತು. ತಾಳ-ಲಯದೊಂದಿಗೆ ಒಂದಾಗಿ ಅಂದ ಹೆಚ್ಚಿಸುವುದು ಹೇಗೆಂದು ಸಾಕ್ಷಿ ನೀಡಿದರು ಮಿತಾ. ಕಾಫಿ-ಖಮಾಜ್ ರಾಗ ಬೆರಕೆಯಿಂದ ಪಂಡಿತ್ ದತ್ತಾತ್ರೇಯ ಗರುಡ ಅವರು ಸಂಯೋಜಿಸಿದ `ಶಾಮ್ ಚುನರಿಯಾ ದೇದೆ ಮೋರಿ...' ಠುಮರಿಯಲ್ಲಿ ಸ್ಫುರಣಗೊಂಡ ಬಹುಭಾವಗಳ ಪ್ರವಾಹದ ನಡುವೆಯೂ ಭಕ್ತಿರಸ ಉಕ್ಕಿ ಹರಿಯಿತು. `ಮಾರಾ ರಾಮ್ ತಮೆ ಸೀತಾ ಜೀ ನೆ ತೋಲೆನ ಆವ್...' ಭಜನ್ ಕೂಡ ಭಕ್ತಿಯ ವಿಭಿನ್ನ ಅಭಿವ್ಯಕ್ತಿ ಎನಿಸಿತು.

ಧಮಾರ್ ಹಾಗೂ ಯಮನ್ ಕಲ್ಯಾಣ್ ರಾಗದ ತರಾನಾ ಪ್ರಸ್ತುತ ಪಡಿಸುವುದರೊಂದಿಗೆ ರಂಗ ಪ್ರವೇಶ ಕಾರ್ಯಕ್ರಮಕ್ಕೆ ತೆರೆ ಎಳೆದ ಮಿತಾಗೆ ವಾದ್ಯ ಸಾಂಗತ್ಯ ನೀಡಿದ್ದು ಪ್ರವೀಣ್ ಡಿ.ರಾವ್ (ತಬಲಾ), ದೀಪಕ್ (ಸಾರಂಗಿ) ಹಾಗೂ ಪ್ರಕಾಶ್ ಪಿ.ಹೆಗ್ಡೆ (ಕೊಳಲು). ಎಲ್ಲಿಯೂ ತಾಳ ಹಾಗೂ ಲಯ ತಪ್ಪದಂತೆ ಒಪ್ಪವಾಗಿ ನೃತ್ಯ ಪ್ರದರ್ಶನ ಸಾಗುವಂತೆ ಈ ಸಾಥಿಗಳು ಸಾಥ್ ನೀಡಿದರು

9.30.2009

"ಭವಾನಿ" DANCE PROGRAM REVIEW


ಮುದ ನೀಡಿದ "ಭವಾನಿ ವೈಭವ" ನೃತ್ಯ

ಸೂರ್ಯ ಬಾನಂಚಿನ ತೆರೆಯ ಮರೆಗೆ ಸರಿಯುವ ಆ ಹೊತ್ತಿನಲ್ಲಿ ಅಂಬೆಯ ಸನ್ನಿಧಿಯಲ್ಲಿ ಅಲಕೃತವಾದ ರಂಗದ ಪರದೆ ಸರಿಯಿತು. ಅಲ್ಲಿ ತೆರೆದುಕೊಂಡಿತು ದೇವಿಯ ಹತ್ತಾರು ರೂಪಗಳ ವೈಭವದ ಚಿತ್ತಾರ.

ಇಂಪಾದ ರಾಗದ ಜೊತೆಗೆ ತಾಳದ ಮೇಳ. ಗೆಜ್ಜೆ ಕಟ್ಟಿ ಹೆಜ್ಜೆ ಹಾಕುವ ಸುಂದರಾಂಗಿಯರ ಸುಂದರ ಮೊಗದಲ್ಲಿಯೂ ದೈವಕಳೆ. ಅವರೆಲ್ಲರೂ ರಂಗದ ಮೇಲೆ ಭಾವ-ಭಂಗಿಯಿಂದ ದೇವಿಯ ಪ್ರತಿರೂಪವಾಗಿ ನಿಂತರು. ಅದೆಷ್ಟೊಂದು ಹೊತ್ತು ಬಣ್ಣ-ಬೆಳಕಿನ ಆಟದ ನಡುವೆ ಭವಾನಿಯ ವೈಭವದ ರಸಾಮೃತ ಸಾರವೇ ಅಲ್ಲಿ ಹರಿಯಿತು. ಚಿತ್ತವನು ಅತ್ತಿತ್ತ ಕದಲಿಸದೇ; ಸ್ತಬ್ಧ ಚಿತ್ರಗಳಂತೆ ಕುಳಿತ ಪ್ರೇಕ್ಷಕರ ಕಂಗಳ ತುಂಬಾ ಭಕ್ತಿಯ ಹೊಳಪು ಅಪಾರ.

ಇಂತಹದೊಂದು ಭಕ್ತಿಯ ಸಾರವು ನೃತ್ಯ ಸಾಗರ ಮಂಥನದಿಂದ ಹೊರಹೊಮ್ಮಿತು. ಅದೇ `ಅಂಬಾ ಭವಾನಿ ವೈಭವ'ದ ಅಮೃತಧಾರೆ. ಈ ನೃತ್ಯಾಮೃತ ಧಾರೆಯನ್ನು ಹರಿಸಿದ್ದು `ಗರುಡ ನಾಟ್ಯ ಸಂಘ'ದ ಪ್ರತಿಭಾವಂತ ಯುವ ಕಲಾವಿದರು. ಕುಮಾರಸ್ವಾಮಿ ಬಡಾವಣೆಯಲ್ಲಿನ `ಶ್ರೀ ಅಂಬಾ ಭವಾನಿ ದೇವಸ್ಥಾನ'ದಲ್ಲಿ ನಡೆದ ದೇವಿ ವರ್ಣನೆಯ ನೃತ್ಯ ಕಾರ್ಯಕ್ರಮವು ಪ್ರೇಕ್ಷಕರಿಗೆ ಮುದ ನೀಡಿತು.

ಭರತ ನಾಟ್ಯ ಹಾಗೂ ಕಾಂಟೆಂಪರರಿ ನೃತ್ಯವನ್ನು ಮೇಳೈಸಿದ `ಕಾಂಟೆಂಪರರಿ ಕ್ಲಾಸಿಕಲ್' ಶೈಲಿಯಲ್ಲಿ ಪ್ರಸ್ತುತಪಡಿಸಿದ ಅಂಬಾ ಭವಾನಿ ವೈಭವ ನೃತ್ಯವು ಸುಮಾರು ಒಂದೂವರೆ ತಾಸು ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿತು. ಫ್ಯೂಜನ್ ಸಂಗೀತದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ನೃತ್ಯ ನೋಡುವುದು ಎಷ್ಟೊಂದು ಸೊಗಸು ಎನ್ನುವುದಿಲ್ಲಿ ಅನುಭವಕ್ಕೆ ಬಂತು.

ಪಾಶ್ಚಾತ್ಯ ಸಂಗೀತದ ಮಿಶ್ರಣವ್ದಿದರೂ ಸಂಪ್ರದಾಯದ ಚೌಕಟ್ಟಿನೊಳಗೆ ನಡೆದ ನೃತ್ಯ ಪ್ರದರ್ಶನಕ್ಕೆ ನಾಂದಿ ಹಾಡಿದ್ದೇ ಗಣೇಶನ ಸ್ತುತಿಯೊಂದಿಗೆ. ಗಿರಿಜಾ ಸುತನ ಸ್ಮರಣೆ ಮಾಡಿದ್ದು ಶೋಭಾ ಲೋಲನಾಥ್ ಹಾಗೂ ರಮ್ಯಾ ವೆಂಕಟೇಶ್. ಸುಮುಖನ ಸ್ತುತಿಯ ನಂತರ ಶಿವನ ತಾಂಡವ ಇರಲೇಬೇಕ್ಲಲವೇ!? ಅದನ್ನು ರಂಗದ ಮೇಲೆ ಪ್ರದರ್ಶಿಸಿದ್ದು ಪುಟ್ಟ ಕಲಾವಿದೆ ವರ್ಷಾ ವೆಂಕಟೇಶ್.
ಆನಂತರ ನಡೆಯಿತು ದೇವಿಯ ನೃತ್ಯಾರಾಧನೆ. ಅದರ ನಡುವೆ ವಿಷ್ಣು ನಾಮವೂ ಫ್ಯೂಜನ್ ಸಂಗೀತದೊಂದಿಗೆ ಹರಿದು ಬಂದಾಗ ಸುಲಭ ಹಸ್ತ ಹಾಗೂ ಮಿತವಾದ ಆಂಗಿಕ ಅಭಿನಯದಿಂದ ಪ್ರೇಮಾ ಡೇವಿಡ್, ಎಲ್.ಎಂ.ಯೋಗೇಶ್ವರಿ, ಶೋಭಾ ಲೋಲನಾಥ್ ಹಾಗೂ ರಮ್ಯಾ ವೆಂಕಟೇಶ್ ಅವರು ಲಕ್ಷ್ಮೀಪ್ರಿಯನನ್ನು ಪಾಡಿ ಪೊಗಳಿದರು.

ಪಾರ್ವತಿ ಪತಿಯ ಪರಮ ಭಕ್ತನಾದ ನಂದಿಯ ರೂಪದಲ್ಲಿ ಕಾಣಿಸಿಕೊಂಡ ಗಿರೀಶ್ ಭಟ್ ಅಂತೂ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಗೆಜ್ಜೆಕಟ್ಟಿದ ಪಾದ ತಟ್ಟಿದ ರೀತಿ ಪ್ರೇಕ್ಷಕರ ಮುಖದಲ್ಲಿ ಮಂದಹಾಸದ ಅಂದದ ಹೂವು ಅರಳುವಂತೆ ಮಾಡಿದ್ದು ವಿಶೇಷ. ಅನಘಾ ಭಟ್, ಸಂಧ್ಯಾ ದಿನೇಶ್, ತಾರಾ ಲೋಲನಾಥ್, ಕಾರ್ತಿಕ್ ಗಿರೀಶ್ ಶರ್ಮ ಹಾಗೂ ನವೀನ್ ಕುಮಾರ್ ಕೂಡ ಭವಾನಿಯ ವೈಭವದ ಸೊಬಗಿಗೆ ಪ್ರಭಾವಳಿಯಾಗುವ ರೀತಿಯಲ್ಲಿ ಭವಾನಿ ವೈಭವ ನೃತ್ಯದಲ್ಲಿ ಒಂದಾದರು.

9.29.2009

AMBA BHAVANI VAIBHAVA DANCE PROGRAM

"ಅಂಬಾ ಭವಾನಿ ವೈಭವ" ನೃತ್ಯ ಕಾರ್ಯಕ್ರಮ


ಬೆಂಗಳೂರು: ಸುಮಾರು ನಲ್ವತ್ತು ವರ್ಷಗಳ ದೀರ್ಘ ಇತಿಹಾಸ ಹೊಂದಿರುವ "ಗರುಡ ನಾಟ್ಯ ಸಂಘ"ದ ಕಲಾವಿದರು ಇದೇ ಭಾನುವಾರ (ಸೆಪ್ಟೆಂಬರ್ 27, 2009)ದಂದು ನಗರದ ಕುಮಾರಸ್ವಾಮಿ ಬಡಾವಣೆಯ ಶ್ರೀ ಅಂಬಾ ಭವಾನಿ ದೇವಸ್ಥಾನದಲ್ಲಿ "ಅಂಬಾ ಭವಾನಿ ವೈಭವ" ನೃತ್ಯ ಕಾರ್ಯಕ್ರಮ ಪ್ರದರ್ಶಿಸಲಿದ್ದಾರೆ.

ದೇವಿಯ ವಿವಿಧ ರೂಪಗಳನ್ನು ಪ್ರೇಕ್ಷಕರೆದುರು ಸಾದರಪಡಿಸುವ ಈ ನೃತ್ಯ ಕಾರ್ಯಕ್ರಮವು ರಾತ್ರಿ 7.00 ಗಂಟೆಗೆ ಆರಂಭವಾಗಲಿದೆ. ಬನಶಂಕರಿ ದೇವಸ್ಥಾನದ ದರ್ಮದರ್ಶಿಗಳಾದ ಎಚ್. ಸುರೇಶ್ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಸಮಾಜ ಸೇವಕರಾದ ಕೆ.ಕಿಶೋರ್ ಕುಮಾರ್ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ. ಖ್ಯಾತ ರೇಡಿಯೊ ಜಾಕಿ "ಆರ್ ಜೆ" ಬಾಬ್ಬಿ (ಎಫ್.ಎಂ.-92.7) ಅವರು ತಮ್ಮದೇ ಆದ ವಿಶಿಷ್ಟವಾದ ಶೈಲಿಯಲ್ಲಿ ಕಾರ್ಯಕ್ರಮವನ್ನು ನಿರೂಪಣೆ ಮಾಡಲಿರುವುದು ವಿಶೇಷ.


"ಅಂಬಾ ಭವಾನಿ ವೈಭವ"

ನೃತ್ಯ ಕಾರ್ಯಕ್ರಮ

ದಿನಾಂಕ: 27ನೇ ಸೆಪ್ಟೆಂಬರ್ 2009 (ಭಾನುವಾರ)
ಸಮಯ: ರಾತ್ರಿ 7.00

ಸ್ಥಳ: ಶ್ರೀ ಅಂಬಾ ಭವಾನಿ ದೇವಸ್ಥಾನ
58ನೇ ಅಡ್ಡ ರಸ್ತೆ, 64ನೇ ಅಡ್ಡ ರಸ್ತೆ, ಮುನೇಶ್ವರ ಬ್ಲಾಕ್,
ಕುಮಾರಸ್ವಾಮಿ ಲೇಔಟ್, 1ನೇ ಹಂತ.
ಬೆಂಗಳೂರು 560 078

ಉದ್ಘಾಟನೆ: ಶ್ರೀ ಎಚ್.ಸುರೇಶ್ (ಧರ್ಮದರ್ಶಿಗಳು, ಶ್ರೀ ಬನಶಂಕರಿ ದೇವಸ್ಥಾನ)

ಮುಖ್ಯ ಅತಿಥಿ: ಶ್ರೀ ಕೆ.ಕಿಶೋರ್ ಕುಮಾರ್ (ಸಮಾಜ ಸೇವಕರು)

ಕಾರ್ಯಕ್ರಮ ನಿರೂಪಣೆ: "ಆರ್ಜೆ"

9.25.2009

Rangamanch Pravesh of Mitha Ramesh


ಮಿತಾ ರಂಗ ಪ್ರವೇಶ

ನಾಟಕಾಲಂಕಾರ ಗರುಡ ಸದಾಶಿವರಾಯರ ಮರಿಮಗಳಾದ ಮಿತಾ ರಮೇಶ್ ಅವರು ಕಥಕ್ ನೃತ್ಯದಲ್ಲಿ ಶಾಸ್ತ್ರೋಕ್ತವಾಗಿ ಅಭ್ಯಾಸ ಪೂರ್ಣಗೊಳಿಸಿದ್ದು ಅಕ್ಟೋಬರ್ 2 (ಶುಕ್ರವಾರ)ರಂದು ರಂಗ ಪ್ರವೇಶ ಮಾಡಲಿದ್ದಾರೆ.

ಸುದೀರ್ಘ ಎಂಟು ವರ್ಷಗಳ ಕಾಲ ನೃತ್ಯ ಗುರುಗಳಾದ ನಂದಿನಿ ಕೆ.ಮೆಹ್ತಾ ಹಾಗೂ ಕೆ.ಮುರಳಿ ಮೋಹನ್ ಅವರಿಂದ ಭಾವ-ಭಂಗಿ ಹಾಗೂ ರಾಗ, ತಾಳ, ಲಯಗಳ ಜ್ಞಾನ ಪಡೆದಿರುವ ಮಿತಾ ಈಗಾಗಲೇ ಅನೇಕ ಕಡೆಗಳಲ್ಲಿ ನಾಟ್ಯ ಪ್ರದರ್ಶನ ನೀಡಿದ್ದಾರೆ.

ನಾಟ್ಯ ಶಾಸ್ತ್ರದ ಸಂಪ್ರದಾಯದಂತೆ ಅವರೀಗ ರಂಗಮಂಚ ಪ್ರವೇಶ ಮಾಡುವ ಮೂಲಕ ಕಲಾ ಪ್ರಭೆಯನ್ನು ಹರಡಲು ಸಜ್ಜಾಗಿದ್ದಾರೆ.

ತಮ್ಮ ಅಜ್ಜ ಖ್ಯಾತ ತಬಲಾ ವಾದಕ ಪಂಡಿತ್ ದತ್ತಾತ್ರೇಯ ಗರುಡ ಅವರಂತೆಯೇ ಕಲಾ ಕ್ಷೇತ್ರದಲ್ಲಿ ಬೆಳೆಯುವ ಮಹತ್ವಾಕಾಂಕ್ಷೆ ಹೊಂದಿರುವ ಮಿತಾ ಸಾಧನೆಯ ಹಾದಿಗೆ ಈ ರಂಗ ಪ್ರವೇಶವೇ ಮುನ್ನುಡಿ.

ಲಲಿತಾ ಹಾಗೂ ಟಿ.ಎನ್.ರಮೇಶ್ ಅವರ ಪುತ್ರಿಯಾದ ಮಿತಾ ರಂಗ ಪ್ರವೇಶದ ನೃತ್ಯ ಕಾರ್ಯಕ್ರಮವು ಉದ್ಯಾನನಗರಿಯ ಎ.ಡಿ.ಎ.ರಂಗ ಮಂದಿರದಲ್ಲಿ ಅಕ್ಟೋಬರ್ 2ರಂದು ಸಂಜೆ 6.15ಕ್ಕೆ ಆರಂಭವಾಗಲಿದೆ.

ಪ್ರವೀಣ್ ಡಿ.ರಾವ್ (ತಬಲಾ), ಸಮನ್ವಿತಾ ಶರ್ಮ (ಗಾಯನ), ಫಿಯಾಜ್ ಖಾನ್ (ಸಾರಂಗಿ) ಹಾಗೂ ಪ್ರಕಾಶ್ ಪಿ.ಹೆಗ್ಡೆ (ಕೊಳಲು) ಅವರು ಸಂಗೀತ ಸಾಂಗತ್ಯ ನೀಡಲಿದ್ದಾರೆ.

ವಿಜಯಾ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಗುರುದಾಸ್ ಜಿ. ನರೆಕುಳಿ ಹಾಗೂ ಕಲಾ ವಿಮರ್ಶಕರಾದ ಡಾ.ಎಂ.ಸೂರ್ಯ ಪ್ರಸಾದ್ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ.



ಮಿತಾ ರಮೇಶ್ `ರಂಗ ಪ್ರವೇಶ'

ದಿನಾಂಕ: 2ನೇ ಅಕ್ಟೋಬರ್ 2009

ಸಮಯ: ಸಂಜೆ 6.15

ಸ್ಥಳ: ಎ.ಡಿ.ಎ. ರಂಗಮಂದಿರ, ನಂ.109,

ರವೀಂದ್ರ ಕಲಾಕ್ಷೇತ್ರ ಎದುರು,ಜೆ.ಸಿ.ರಸ್ತೆ,

ಬೆಂಗಳೂರು-560 002

9.12.2009

Rotaract installation programme

ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಸಿ.ಎಂ.ಆರ್. ತಾಂತ್ರಿಕ ಸಂಸ್ಥೆಯ ಕಾಲೇಜಿನ ರೋಟರಾಕ್ಟ್ ಎರಡನೇ ನೂತನ ಘಟಕದ ಉದ್ಘಾಟನೆಯನ್ನು ನಟಿ ಶೋಭಾ ಎಂ. ಲೋಲನಾಥ್ ಅವರು ಸಸಿ ನೆಡುವ ಮೂಲಕ ಉದ್ಘಾಟಿಸಿದರು.

ರೋಟರಾಕ್ಟ್ ನೂತನ

ಘಟಕಕ್ಕೆ ಚಾಲನೆ

ಬೆಂಗಳೂರು: ವಿದ್ಯಾರ್ಧಿಗಳಲ್ಲಿ ಸಮಾಜ ಸೇವಾ ಚಟುವಟಿಕೆಯ ಬಗ್ಗೆ ಆಸಕ್ತಿ ಮೂಡಿಸುವ ಮೂಲ ಉದ್ದೇಶದ ರೋಟರಾಕ್ಟ್ ಎರಡನೇ ನೂತನ ಘಟಕವನ್ನು ಸಿ.ಎಂ.ಆರ್. ತಾಂತ್ರಿಕ ಸಂಸ್ಥೆಯ ಕಾಲೇಜ್ ಕ್ಯಾಂಪಸ್ಸಿನಲ್ಲಿ ಸ್ಥಾಪಿಸಲಾಯಿತು.

ಸುಮಾರು ನೂರಕ್ಕೂ ಅಧಿಕ ವಿದ್ಯಾರ್ಧಿಗಳು ನೋಂದಣಿ ಮಾಡಿಕೊಂಡಿರುವ ಈ ನೂತನ ಘಟಕಕ್ಕೆ ಯುವ ನಟಿ ಶೋಭಾ ಎಂ. ಲೋಲನಾಥ್ ಅವರು ಶುಕ್ರವಾರ ನಡೆದ ಸಮಾರಂಭದಲ್ಲಿ ಚಾಲನೆ ನೀಡಿದರು. ಸಸಿ ನೆಡುವ ಮೂಲಕ ಸಿ.ಎಂ.ಆರ್.ಐ.ಟಿ ಕಾಲೇಜಿನ ರೋಟರಾಕ್ಟ್ ಚಟುವಟಿಕೆಯನ್ನು ಆರಂಭಿಸಿದ್ದು ವಿಶೇಷ.

"ಸೇವೆ ಪರಮ ಉದ್ದೇಶ" ಎನ್ನುವ ಸಂದೇಶದೊಂದಿಗೆ ಕಾಲೇಜ್ ವಿದ್ಯಾರ್ಧಿ ಹಾಗೂ ವಿದ್ಯಾರ್ಧಿನಿಯರು ರೋಟರಾಕ್ಟ್ ಪದಾಧಿಕಾರಿಗಳಾಗಿ ಪ್ರಮಾಣ ಸ್ವೀಕರಿಸಿ, ಸದಸ್ಯತ್ವದ ಬ್ಯಾಚ್ ಪಡೆದುಕೊಂಡರು. ಬ್ಯಾಚ್ ಅನ್ನು ರಾಮಮೂರ್ತಿನಗರದ ರೋಟರಿ ಅಧ್ಯಕ್ಷರಾದ ಡಾ.ನಾರಾಯಣ ಅವರು ತೊಡಿಸಿದರು. ಸಮಾರಂಭದಲ್ಲಿ ಸಿ.ಎಂ.ಆರ್.ಐ.ಟಿ. ಕಾರ್ಯದರ್ಶಿಗಳಾದ ಕೆ.ಸಿ.ಜಗನ್ನಾಥ ರೆಡ್ಡಿ ಅವರು ಉಪಸ್ಥಿತರಿದ್ದರು.

8.04.2009

ಶೋಭಾ ಲೋಲನಾಥ್ ಅವರಿಗೆ "ಒನಕೆ ಓಬವ್ವ" ಪ್ರಶಸ್ತಿ ಪ್ರದಾನ

ಶೋಭಾ ಲೋಲನಾಥ್ ಅವರಿಗೆ ಒನಕೆ ಓಬವ್ವ ಪ್ರಶಸ್ತಿ ಪ್ರದಾನ


ಶಕ್ತಿಯ ಸಂಕೇತ "ಒನಕೆ ಓಬವ್ವ": ಡಾ.ಹಂಪನ


"ತಿರುವಳ್ಳವರ ಪ್ರತಿಮೆ ಅನಾವರಣದ ವಿಷಯದಲ್ಲಿ ವಿರೋಧ ಬೇಡ. ಸಾಂಸ್ಕೃತಿಕ ಸೌಹಾರ್ದದ ಸಂಕೇತವಾಗಿ ಪ್ರತಿಮೆಯ ಅನಾವರಣ ನಡೆಯಬೇಕು" ಎಂದು ಖ್ಯಾತ ಮಹಿಳಾ ಸಾಹಿತಿ ಡಾ. ಕಮಲಾ ಹಂಪನ ಹೇಳಿದರು.
ಕನರ್ಾಟಕ ಸಹೃದಯರ ಸೇವಾ ಪ್ರತಿಷ್ಠಾನ ಆಯೋಜಿಸಿದ್ದ "ಒನಕೆ ಓಬವ್ವ ಪ್ರಶಸ್ತಿ" ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು "ತಮಿಳುನಾಡಿನೊಂದಿಗೆ ನಾವು ಅನೇಕ ವಿಷಯದಲ್ಲಿ ಸದಾ ಹೋರಾಟ ನಡೆಸುತ್ತಾ ಬಂದಿದ್ದೇವೆ. ನೆಲ ಹಾಗೂ ಜಲದ ವಿಷಯದಲ್ಲಿ ತಮಿಳರು ಕನ್ನಡಿಗರಿಗೆ ಬ್ರಿಟಿಷರ ಕಾಲದಿಂದಲೂ ತೊಂದರೆ ಕೊಡುತ್ತಾ ಬಂದಿದ್ದಾರೆ. ಈಗಲೂ ಅದೇ ರೀತಿ ಮಾಡುತ್ತಿದ್ದಾರೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಬಾರದೆಂದು ಕೂಡ ಅಡ್ಡಗಾಲು ಹಾಕಿದ್ದರು" ಎಂದು ಕಮಲಾ ಅವರು ನುಡಿದರು.


"ತಮಿಳುನಾಡು ಹಾಗೂ ತಮಿಳರ ಜೊತೆಗೆ ನಮ್ಮ ಹೋರಾಟ ಏನೇ ಇರಲಿ; ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಸೌಹಾರ್ದ ವಿಷಯ ಬಂದಾಗ ವಿರೋಧ ಬೇಡ. ತಮಿಳು ಕವಿ ತಿರುವಳ್ಳವರ ಪ್ರತಿಮೆಯನ್ನು ಬೆಂಗಳೂರಿನಲ್ಲಿ ಅನಾವರಣಗೊಳಿಸುವುದು ಕೂಡ ಅಂತಹದೊಂದು ಸೌಹಾರ್ದ ಸಂಬಂಧದ ಬೆಸುಗೆಯೇ ಆಗಿದೆ" ಎಂದು ಹಂಪನಾ ತಿಳಿಸಿದರು.


ನಟಿ ಶೋಭಾ ಎಂ. ಲೋಲನಾಥ್ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಹೋರಾಟದ ಹಾದಿಯಲ್ಲಿ ಸಾಗಿ ಸಾಧನೆ ಮಾಡಿದ ಮಹಿಳೆಯರಿಗೆ "ಒನಕೆ ಓಬವ್ವ ಪ್ರಶಸ್ತಿ" ಪ್ರದಾನ ಮಾಡಿದ ಡಾ. ಕಮಲಾ ಹಂಪನ ಅವರು "ಒನಕೆ ಓಬವ್ವ ಮಹಿಳೆಯ ಹೋರಾಟದ ಶಕ್ತಿಯ ಸಂಕೇತ" ಎಂದ ಅವರು "ಹೆಣ್ಣುಮಕ್ಕಳು ಈ ನವಯುಗದಲ್ಲಿ ಎಲ್ಲ ಕ್ಷೇತ್ರದಲ್ಲಿ ದಾಪುಗಾಲು ಇಡುತ್ತಿರುವುದು ಒಳ್ಳೆಯ ಬೆಳವಣಿಗೆ" ಎಂದು ಹೇಳಿದರು.


ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಾದ ಶೋಭಾ ಎಂ. ಲೋಲನಾಥ್, ಪ್ರೋ. ಬಿ. ನಾರಾಯಣಮ್ಮ, ಡಾ. ಎನ್. ನಂದಿನಿ, ಲಲಿತಾ ಮೇರಿ, ಪುಷ್ಪಾ ರಮೇಶ್, ಜಿ. ಪದ್ಮಾವತಿ, ಡಾ. ಇಸಬೆಲ್ಲಾ ಎಸ್. ಕ್ಸೇವಿಯರ್, ರಾಧಾ ಕುಲಕಣರ್ಿ, ಬ್ರಹ್ಮಕುಮಾರಿ ಭಾರತಿ, ಕೆ. ಪಲ್ಲವಿ, ರತ್ನ ಹಾಲಪ್ಪಗೌಡ, ಹೊನ್ನಮ್ಮ ಸೋಮಲಿಂಗಪ್ಪ ಚಂದಾಪುರ, ಸ್ವಾತಿ ಪಿ. ಭಾರದ್ವಾಜ್, ಎನ್. ಗೌರಮ್ಮ ಮೂತರ್ಿ, ವಿಜಯಾ, ಅಂಬುಜಾಕ್ಷಿ ರೆಡ್ಡಿ, ಲಕ್ಷ್ಮೀಕಾಂತಮ್ಮ, ಬಿ.ಆರ್. ಭಾಗ್ಯ ರಂಗನಾಥನ್, ರೇಖಾ ಜಿ. ಹೆಗ್ಗಡೆ ಹಾಗೂ ಟಿ.ಗಿರಿಜಾ ಅವರಿಗೆ ಈ ಸಮಾರಂಭದಲ್ಲಿ "ಒನಕೆ ಒಬವ್ವ ಪ್ರಶಸ್ತಿ" ನೀಡಿ ಗೌರವಿಸಲಾಯಿತು. ಬಿ.ಎಲ್. ಭಾಗ್ಯಲಕ್ಷ್ಮಿ ಮತ್ತು ನಾರಾಯಣ ಮೂತರ್ಿ ವೈ.ಜಿ. ಅವರಿಗೆ "ಆದರ್ಶ ದಂಪತಿಗಳು ಪ್ರಶಸ್ತಿ" ಪ್ರದಾನ ಮಾಡಲಾಯಿತು.


ವೇದಿಕೆಯ ಮೇಲೆ ಹಿರಿಯ ಸಾಹಿತಿ ಪ್ರೇಮಾ ಭಟ್, ಕನರ್ಾಟಕ ಸಹೃದಯರ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಗುಡಿಬಂಡೆ ಮಧುಸೂಧನ ಹಾಗೂ ಖಜಾಂಚಿಯಾದ ಅನ್ನಪೂರ್ಣ, ನಟಿ ಶೋಭಾ ಎಂ. ಲೋಲನಾಥ್, ಡಾ.ನಂದಿನಿ ಎನ್. ಅವರು ಉಪಸ್ಥಿತರಿದ್ದರು.

7.30.2009

ಶೋಭಾ ಲೋಲನಾಥ್ ಅವರಿಗೆ "ಒನಕೆ ಓಬವ್ವ ಪ್ರಶಸ್ತಿ"



ಶೋಭಾ ಲೋಲನಾಥ್ ಅವರಿಗೆ

"ಒನಕೆ ಓಬವ್ವ ಪ್ರಶಸ್ತಿ"


ಬೆಂಗಳೂರು: ಸಿನಿಮಾ ಹಾಗೂ ಟೆಲಿವಿಷನ್ ನಟಿ ಶೋಭಾ ಎಂ. ಲೋಲನಾಥ್ ಅವರು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಹೋರಾಟ ನಡೆಸಿ ಸಾಧನೆ ಮಾಡಿರುವ ಇಪ್ಪತ್ತು ಮಹಿಳೆಯರು ಕನರ್ಾಟಕ ಸಹೃದಯರ ಸೇವಾ ಪ್ರತಿಷ್ಠಾನ ಕೊಡಮಾಡುವ "ಒನಕೆ ಓಬವ್ವ" ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರತಿಷ್ಠಾನವು ನೀಡುವ "ಆದರ್ಶ ದಂಪತಿಗಳು" ಪ್ರಶಸ್ತಿಗೆ ಬಿ.ಎಲ್. ಭಾಗ್ಯಲಕ್ಷ್ಮಿ ಹಾಗೂ ನಾರಾಯಣ ಮೂತರ್ಿ ವೈ.ಜಿ. ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು ಆಗಸ್ಟ್ 2 (ಭಾನುವಾರ)ರಂದು ಉದ್ಯಾನನಗರಿಯ ಎನ್.ಆರ್.ಕಾಲೋನಿಯಲ್ಲಿರುವ ಬಿ.ಎಂ.ಶ್ರೀ ಕಲಾ ಭವನದಲ್ಲಿ ಸಂಜೆ 5 ಗಂಟೆಗೆ ನಡೆಯಲಿದೆ. ಮಾಜಿ ಸಚಿವರಾದ ಲೀಲಾದೇವಿ ಆರ್. ಪ್ರಸಾದ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಡಾ. ಕಮಲಾ ಹಂಪನ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಹಿರಿಯ ಸಾಹಿತಿಗಳಾದ ಪ್ರೇಮಾ ಭಟ್, ನಗರ ಪಾಲಿಕೆ ಮಾಜಿ ಸದಸ್ಯರಾದ ಸತ್ಯನಾರಾಯಣ ಹಾಗೂ ಕೈಗಾರಿಕೋದ್ಯಮಿಯಾದ ಮೋಹನ್ ಕೆ. ಹಿರೇಗೌಡರು ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಪ್ರಶಸ್ತಿ ವಿಜೇತರ ಪಟ್ಟಿ ಇಂತಿದೆ:

"ಒನಕೆ ಓಬವ್ವ ಪ್ರಶಸ್ತಿ":

1. ಶೋಭಾ ಎಂ. ಲೋಲನಾಥ್ (ಜನಪ್ರಿಯ ಸಿನಿಮಾ ಹಾಗೂ ಕಿರುತೆರೆ ನಟಿ); 2. ಪ್ರೋ. ಬಿ. ನಾರಾಯಣಮ್ಮ (ಸಾಹಿತ್ಯ ಕ್ಷೇತ್ರ); 3. ಡಾ. ಎನ್. ನಂದಿನಿ (ಶಿಕ್ಷಣ ಕ್ಷೇತ್ರ); 4. ಲಲಿತಾ ಮೇರಿ (ಹೋರಾಟಗಾತರ್ಿ); 5. ಪುಷ್ಪಾ ರಮೇಶ್ (ಸಮಾಜ ಸೇವೆ); 6. ಜಿ. ಪದ್ಮಾವತಿ (ಸುಗಮ ಸಂಗೀತ); 7. ಡಾ. ಇಸಬೆಲ್ಲಾ ಎಸ್. ಜೀವಿಯರ್ (ಮಾನವ ಹಕ್ಕುಗಳ ಸೇವೆ); 8. ರಾಧಾ ಕುಲಕಣರ್ಿ (ಶಿಕ್ಷಣ ಕ್ಷೇತ್ರ); 9. ಬ್ರಹ್ಮಕುಮಾರಿ ಭಾರತಿ (ಧಾಮರ್ಿಕ ಕ್ಷೇತ್ರ); 10. ಕೆ. ಪಲ್ಲವಿ (ಕ್ರೀಡಾ ಕ್ಷೇತ್ರ); 11. ರತ್ನ ಹಾಲಪ್ಪಗೌಡ (ಚುಟುಕು ಸಾಹಿತಿ); 12. ಹೊನ್ನಮ್ಮ ಸೋಮಲಿಂಗಪ್ಪ ಚಂದಾಪುರ (ಸಂಘಟನೆ); 13. ಸ್ವಾತಿ ಪಿ. ಭಾರದ್ವಾಜ್ (ನೃತ್ಯ ಕ್ಷೇತ್ರ); 14. ಎನ್. ಗೌರಮ್ಮ ಮೂತರ್ಿ (ಸಮಾಜ ಸೇವೆ); 15. ವಿಜಯಾ (ಶಿಕ್ಷಣ ಕ್ಷೇತ್ರ); 16. ಅಂಬುಜಾಕ್ಷಿ ರೆಡ್ಡಿ (ಸಂಘಟನೆ); 17. ಲಕ್ಷ್ಮೀಕಾಂತಮ್ಮ (ಸಮಾಜ ಸೇವೆ); 18. ಬಿ.ಆರ್. ಭಾಗ್ಯ ರಂಗನಾಥನ್ (ಶಿಕ್ಷಣ ಮತ್ತು ನಿರ್ವಹಣೆ); 19. ರೇಖಾ ಜಿ. ಹೆಗ್ಗಡೆ (ಸಾಧನ ಮಹಿಳೆ); 20. ಟಿ.ಗಿರಿಜಾ (ಸಾಹಿತ್ಯ)

"ಆದರ್ಶ ದಂಪತಿಗಳು"

ಶ್ರೀಮತಿ ಬಿ.ಎಲ್. ಭಾಗ್ಯಲಕ್ಷ್ಮಿ ಹಾಗೂ ಶ್ರೀ ನಾರಾಯಣ ಮೂತರ್ಿ ವೈ.ಜಿ.

7.07.2009

PHOTO EXHIBITION "NANNA SUTTA"


"ನನ್ನ ಸುತ್ತ"ಛಾಯಾಚಿತ್ರಗಳ ಪ್ರದರ್ಶನ


ಚಿತ್ತ ಕದಿಯುವಂತಹ ಅನೇಕ ದೃಶ್ಯಾವಳಿಗಳು ನಮ್ಮ ಸುತ್ತಲೂ ಹರಡಿಕೊಂಡಿವೆ. ಅವುಗಳನ್ನು ವಿಶಿಷ್ಟವಾದ ರೀತಿಯಲ್ಲಿ ನೋಡುವುದು ಹಾಗೂ ಅವುಗಳನ್ನು ಒಂದು ಕಲಾಕೃತಿಯಾಗಿಸುವುದೇ ವಿಶೇಷ ಅನುಭೂತಿ. ಆದರೆ ಕಂಡಿದ್ದನ್ನು ಕಂಡಹಾಗೆ ಎನ್ನುವುದಕ್ಕಿಂತ ಅದಕ್ಕೊಂದು ಅರ್ಥ ನೀಡುವ ರೀತಿಯಲ್ಲಿ ಯಾವುದೇ ಒಂದು ಕಲಾ ರೂಪಕ್ಕೆ ಇಳಿಸುವುದು ಸುಲಭ ಸಾಧ್ಯವಲ್ಲ. ಅದಕ್ಕೆ ಕಲಾವಿದನ ಹೃದಯವೂ ಬೇಕು.

ಅಂತಹ ಕಲಾವಿದನ ಹೃದಯ ಹೊಂದಿರುವ ಡಿ.ಗರುಡ ಅವರು ಕ್ಯಾಮೆರಾ ಕಣ್ಣಿನಲ್ಲಿ ತಮ್ಮ ಸುತ್ತಲಿನ ಜಗತ್ತನ್ನು ವಿಭಿನ್ನವಾದ ರೀತಿಯಲ್ಲಿ ಕಂಡಿದ್ದಾರೆ. ತಾವು ಕಂಡಿದ್ದನ್ನು ಛಾಯಾಚಿತ್ರಗಳ ಮೂಲಕ ಕಲಾ ಪ್ರಿಯರಾದ ಸಹೃದಯರ ಮುಂದೆ ಇಡುತ್ತಿದ್ದಾರೆ. ಜೂನ್ 6, 2009 (ಶನಿವಾರ)ರಂದು "ನನ್ನ ಸುತ್ತ" ಛಾಯಾಚಿತ್ರಗಳ ಪ್ರದರ್ಶನವನ್ನು ಬೆಂಗಳೂರಿನ ಬಸವನಗುಡಿಯ ಬಿ.ಪಿ.ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವಲ್ಡರ್್ ಕಲ್ಚರ್ನಲ್ಲಿ ಏರ್ಪಡಿಸಿದ್ದಾರೆ.

ಪ್ರತಿ ದಿನವೂ ನಾವು ಹಲವಾರು ದೃಶ್ಯಗಳನ್ನು ಕಾಣುತ್ತೇವೆ. ಅವುಗಳಲ್ಲಿ ಅನೇಕ ಸೂಕ್ಷ್ಮಗಳು ಇರುತ್ತವೆ. ಆದರೆ ಸಹಜವಾಗಿ ನೋಡುವಾಗ ಅವು ವಿಶೇಷ ಎನಿಸುವುದೇ ಇಲ್ಲ. ಅಂತಹ ಸೂಕ್ಷ್ಮಗಳನ್ನು ಕೂಡ ಡಿ.ಗರುಡ ಅವರು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದಿದ್ದಾರೆ. ಗೋಡೆಯ ಮೇಲೆ ಬೆಳೆಯುವ ಅತಿ ಸೂಕ್ಷ್ಮವಾದ ಫಂಗಸ್ ನಮ್ಮ ಗಮನ ಸೆಳೆಯುತ್ತದೆಯೇ; ಖಂಡಿತ ಇಲ್ಲ. ಅದೊಂದು ಪ್ರಕೃತಿಯ ವಿಸ್ಮಯ ಎನ್ನುವುದನ್ನು ನಾವೆಂದೂ ಕಾಣುವುದೇ ಇಲ್ಲ. ಆದರೆ ಕ್ಯಾಮೆರಾ ಕಣ್ಣಿನಲ್ಲಿ ಅದೇ ಫಂಗಸ್ ಅನ್ನು ಡಿ.ಗರುಡ ಅವರು ಪ್ರಕೃತಿ ಸೃಷ್ಟಿಸಿದ "ನ್ಯಾನೊ ಕಾಡು" ಎನ್ನುವ ರೀತಿಯಲ್ಲಿ ಸೆರೆಹಿಡಿದು ಸುಂದರ ಕಲಾಕೃತಿಯಾಗಿಸಿದ್ದಾರೆ.

ನಲ್ಲಿಯ ನೀರು ನಿಂತು, ಕೊನೆಯಲ್ಲಿ ಹನಿಹನಿಯಾಗಿ ತೊಟ್ಟಿಕ್ಕಿ ಬೀಳುವಾಗ ಅದೊಂದು ಅದ್ಭುತ ದೃಶ್ಯವೇ ಆಗಿರುತ್ತದೆ ಎನ್ನುವುದು ಡಿ.ಗರುಡ ಅವರು ಸೆರೆಹಿಡಿದ ಚಿತ್ರದಿಂದ ಅರಿವಾಗುತ್ತದೆ. ಒಂದು ಹನಿ ತೊಟ್ಟಿಕ್ಕುವ ಕ್ಷಣವನ್ನು ಅತಿ ಸೂಕ್ಷ್ಮವಾಗಿ ಲೆನ್ಸ್ ಮೂಲಕ ನೋಡಿದಾಗ ಅದೊಂದು "ಡೀಪ್ ಇಂಪ್ಯಾಕ್ಟ್"ನಂತೆ ಕಾಣಿಸುತ್ತದೆ ಎನ್ನುವುದು ಖಂಡಿತ ಅಚ್ಚರಿಗೊಳಿಸುತ್ತದೆ.

ಕಾಡಿನಲ್ಲಿ ಬೆಳೆದೊಂದು ಮರವು ಸುಂದರಿಯು ಬಳುಕುತ್ತಾ ನಿಂತಂತೆ ಕಾಣುವ ಕಣ್ಣು ಬೇಕು! ಆ ರೀತಿಯ "ವನ ಸುಂದಿರಿ"ಯು ಖಂಡಿತ ಮನಕ್ಕೆ ಮುದ ನೀಡುತ್ತಾಳೆ. ಅದೇ ರೀತಿಯಲ್ಲಿ ಸೂಯರ್ಾಸ್ತ-ಸೂಯರ್ೋದಯದ ಹಲವಾರು ದೃಶ್ಯಗಳು ಕಣ್ಮನ ತಣಿಸುತ್ತವೆ. ನಮ್ಮ ಸುತ್ತಲಿರುವುದೆಲ್ಲವೂ ಸುಂದರ ಎನ್ನುವುದು ಡಿ.ಗರುಡ ಅವರ "ನನ್ನ ಸುತ್ತ" ಛಾಯಾಚಿತ್ರ ಪ್ರದರ್ಶನದಲ್ಲಿ ಅಡಗಿರುವ ತತ್ವ.

ಐಡಿಯಾ-ಜಿ ಹಾಗೂ ಗರುಡ ನಾಟ್ಯ ಸಂಘದ ಸಹಯೋಗದಲ್ಲಿ ನಡೆಯಲಿರುವ "ನನ್ನ ಸುತ್ತ" ಪ್ರದರ್ಶನದಲ್ಲಿ ಸುಮಾರು ನೂರೈವತ್ತು ಛಾಯಾಚಿತ್ರ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಇವುಗಳಲ್ಲಿ ವನ್ಯ ಜೀವಿಗಳ ಚಿತ್ರಗಳೂ ಸೇರಿವೆ. ಅಷ್ಟೇ ಅಲ್ಲ ಮಾಡೆಲಿಂಗ್, ಪೋರ್ಟರೇಟ್, ಪ್ರಕೃತಿ, ಮಾನವೀಯ ಸಂವೇದನೆ...ಹೀಗೆ ಹತ್ತು ಹಲವು ವಿಷಯಗಳನ್ನು ಸುತ್ತಿ ಬರುವ ಛಾಯಾಚಿತ್ರ ಕಲಾಕೃತಿಗಳಿವೆ.

ವೃತ್ತಿಯಿಂದ ಪತ್ರಕರ್ತರಾಗಿರುವ ಡಿ.ಗರುಡ ಅವರು ಪ್ರವೃತ್ತಿಯಿಂದ ಛಾಯಾಗ್ರಾಹಕರು. ದುಬಾರಿ ಎನ್ನಿಸುವ ಛಾಯಾಚಿತ್ರ ಹವ್ಯಾಸವನ್ನು ಕೇವಲ ತಮ್ಮ ಮನೆಯಲ್ಲಿನ ಅಲ್ಬಂಗೆ ಸೀಮಿತವಾಗಿ ಇಟ್ಟುಕೊಳ್ಳಲು ಬಯಸದ ಅವರು "ನನ್ನ ಸುತ್ತ" ಎನ್ನುವ ಪ್ರದರ್ಶನದ ಮೂಲಕ ಸೃಜನಾತ್ಮಕತೆಗೆ ಸ್ಪಂದಿಸುವಂತಹ ಕಲಾಪ್ರಿಯರ ಮುಂದಿಡುತ್ತಿದ್ದಾರೆ.
"ನನ್ನ ಸುತ್ತ" ಛಾಯಾಚಿತ್ರಗಳ ಪ್ರದರ್ಶನವನ್ನು ಅಂತರರಾಷ್ಟ್ರೀಯ ಮಾಜಿ ಕ್ರಿಕೆಟ್ ಆಟಗಾರರಾದ ದೊಡ್ಡ ಗಣೇಶ ಅವರು ಶನಿವಾರ ಬೆಳಿಗ್ಗೆ 11.00ಕ್ಕೆ ಉದ್ಘಾಟಿಸುವರು. ಸಮಾರಂಭದ ಅಧ್ಯಕ್ಷತೆಯನ್ನು ಹ್ಯೂಮರ್ ಕ್ಲಬ್ ಇಂಟರ್ನ್ಯಾಷನಲ್ನ ಸ್ಥಾಪಕ ಅಧ್ಯಕ್ಷರಾದ ವೈ.ಎಂ.ಎನ್.ಮೂತರ್ಿ ಅವರು ವಹಿಸುವರು. ಸಾಮಾಜಿಕ ಕಾರ್ಯಕರ್ತರಾದ ರತ್ನಾ ಎಂ.ಶ್ರೀನಿವಾಸ್ ಹಾಗೂ ಖ್ಯಾತ ಟೆಲಿವಿಷನ್ ನಟರಾದ ಅಂಬರೀಷ್ ಸಾರಂಗಿ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ.

ದಿನಾಂಕ: 6ನೇ ಜೂನ್ 2009 (ಶನಿವಾರ)

ಛಾಯಾಚಿತ್ರಗಳ ಪ್ರದರ್ಶನ ಸಮಯ: ಬೆಳಿಗ್ಗೆ 11.00ರಿಂದ ರಾತ್ರಿ 7ರವರೆಗೆ

(ಉದ್ಘಾಟನೆ: ಬೆಳಿಗ್ಗೆ 11.00ಕ್ಕೆ)

ಸ್ಥಳ: ಮನೋರಮಾ ಹಾಲ್,

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವಲ್ಡರ್್ ಕಲ್ಚರ್,

ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು-560 004

PHOTO EXHIBITION "NANNA SUTTA"

"ನನ್ನ ಸುತ್ತ"ಛಾಯಾಚಿತ್ರಗಳ ಪ್ರದರ್ಶನ


ಚಿತ್ತ ಕದಿಯುವಂತಹ ಅನೇಕ ದೃಶ್ಯಾವಳಿಗಳು ನಮ್ಮ ಸುತ್ತಲೂ ಹರಡಿಕೊಂಡಿವೆ. ಅವುಗಳನ್ನು ವಿಶಿಷ್ಟವಾದ ರೀತಿಯಲ್ಲಿ ನೋಡುವುದು ಹಾಗೂ ಅವುಗಳನ್ನು ಒಂದು ಕಲಾಕೃತಿಯಾಗಿಸುವುದೇ ವಿಶೇಷ ಅನುಭೂತಿ. ಆದರೆ ಕಂಡಿದ್ದನ್ನು ಕಂಡಹಾಗೆ ಎನ್ನುವುದಕ್ಕಿಂತ ಅದಕ್ಕೊಂದು ಅರ್ಥ ನೀಡುವ ರೀತಿಯಲ್ಲಿ ಯಾವುದೇ ಒಂದು ಕಲಾ ರೂಪಕ್ಕೆ ಇಳಿಸುವುದು ಸುಲಭ ಸಾಧ್ಯವಲ್ಲ. ಅದಕ್ಕೆ ಕಲಾವಿದನ ಹೃದಯವೂ ಬೇಕು.

ಅಂತಹ ಕಲಾವಿದನ ಹೃದಯ ಹೊಂದಿರುವ ಡಿ.ಗರುಡ ಅವರು ಕ್ಯಾಮೆರಾ ಕಣ್ಣಿನಲ್ಲಿ ತಮ್ಮ ಸುತ್ತಲಿನ ಜಗತ್ತನ್ನು ವಿಭಿನ್ನವಾದ ರೀತಿಯಲ್ಲಿ ಕಂಡಿದ್ದಾರೆ. ತಾವು ಕಂಡಿದ್ದನ್ನು ಛಾಯಾಚಿತ್ರಗಳ ಮೂಲಕ ಕಲಾ ಪ್ರಿಯರಾದ ಸಹೃದಯರ ಮುಂದೆ ಇಡುತ್ತಿದ್ದಾರೆ. ಜೂನ್ 6, 2009 (ಶನಿವಾರ)ರಂದು "ನನ್ನ ಸುತ್ತ" ಛಾಯಾಚಿತ್ರಗಳ ಪ್ರದರ್ಶನವನ್ನು ಬೆಂಗಳೂರಿನ ಬಸವನಗುಡಿಯ ಬಿ.ಪಿ.ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವಲ್ಡರ್್ ಕಲ್ಚರ್ನಲ್ಲಿ ಏರ್ಪಡಿಸಿದ್ದಾರೆ.

ಪ್ರತಿ ದಿನವೂ ನಾವು ಹಲವಾರು ದೃಶ್ಯಗಳನ್ನು ಕಾಣುತ್ತೇವೆ. ಅವುಗಳಲ್ಲಿ ಅನೇಕ ಸೂಕ್ಷ್ಮಗಳು ಇರುತ್ತವೆ. ಆದರೆ ಸಹಜವಾಗಿ ನೋಡುವಾಗ ಅವು ವಿಶೇಷ ಎನಿಸುವುದೇ ಇಲ್ಲ. ಅಂತಹ ಸೂಕ್ಷ್ಮಗಳನ್ನು ಕೂಡ ಡಿ.ಗರುಡ ಅವರು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದಿದ್ದಾರೆ. ಗೋಡೆಯ ಮೇಲೆ ಬೆಳೆಯುವ ಅತಿ ಸೂಕ್ಷ್ಮವಾದ ಫಂಗಸ್ ನಮ್ಮ ಗಮನ ಸೆಳೆಯುತ್ತದೆಯೇ; ಖಂಡಿತ ಇಲ್ಲ. ಅದೊಂದು ಪ್ರಕೃತಿಯ ವಿಸ್ಮಯ ಎನ್ನುವುದನ್ನು ನಾವೆಂದೂ ಕಾಣುವುದೇ ಇಲ್ಲ. ಆದರೆ ಕ್ಯಾಮೆರಾ ಕಣ್ಣಿನಲ್ಲಿ ಅದೇ ಫಂಗಸ್ ಅನ್ನು ಡಿ.ಗರುಡ ಅವರು ಪ್ರಕೃತಿ ಸೃಷ್ಟಿಸಿದ "ನ್ಯಾನೊ ಕಾಡು" ಎನ್ನುವ ರೀತಿಯಲ್ಲಿ ಸೆರೆಹಿಡಿದು ಸುಂದರ ಕಲಾಕೃತಿಯಾಗಿಸಿದ್ದಾರೆ.

ನಲ್ಲಿಯ ನೀರು ನಿಂತು, ಕೊನೆಯಲ್ಲಿ ಹನಿಹನಿಯಾಗಿ ತೊಟ್ಟಿಕ್ಕಿ ಬೀಳುವಾಗ ಅದೊಂದು ಅದ್ಭುತ ದೃಶ್ಯವೇ ಆಗಿರುತ್ತದೆ ಎನ್ನುವುದು ಡಿ.ಗರುಡ ಅವರು ಸೆರೆಹಿಡಿದ ಚಿತ್ರದಿಂದ ಅರಿವಾಗುತ್ತದೆ. ಒಂದು ಹನಿ ತೊಟ್ಟಿಕ್ಕುವ ಕ್ಷಣವನ್ನು ಅತಿ ಸೂಕ್ಷ್ಮವಾಗಿ ಲೆನ್ಸ್ ಮೂಲಕ ನೋಡಿದಾಗ ಅದೊಂದು "ಡೀಪ್ ಇಂಪ್ಯಾಕ್ಟ್"ನಂತೆ ಕಾಣಿಸುತ್ತದೆ ಎನ್ನುವುದು ಖಂಡಿತ ಅಚ್ಚರಿಗೊಳಿಸುತ್ತದೆ.

ಕಾಡಿನಲ್ಲಿ ಬೆಳೆದೊಂದು ಮರವು ಸುಂದರಿಯು ಬಳುಕುತ್ತಾ ನಿಂತಂತೆ ಕಾಣುವ ಕಣ್ಣು ಬೇಕು! ಆ ರೀತಿಯ "ವನ ಸುಂದಿರಿ"ಯು ಖಂಡಿತ ಮನಕ್ಕೆ ಮುದ ನೀಡುತ್ತಾಳೆ. ಅದೇ ರೀತಿಯಲ್ಲಿ ಸೂಯರ್ಾಸ್ತ-ಸೂಯರ್ೋದಯದ ಹಲವಾರು ದೃಶ್ಯಗಳು ಕಣ್ಮನ ತಣಿಸುತ್ತವೆ. ನಮ್ಮ ಸುತ್ತಲಿರುವುದೆಲ್ಲವೂ ಸುಂದರ ಎನ್ನುವುದು ಡಿ.ಗರುಡ ಅವರ "ನನ್ನ ಸುತ್ತ" ಛಾಯಾಚಿತ್ರ ಪ್ರದರ್ಶನದಲ್ಲಿ ಅಡಗಿರುವ ತತ್ವ.

ಐಡಿಯಾ-ಜಿ ಹಾಗೂ ಗರುಡ ನಾಟ್ಯ ಸಂಘದ ಸಹಯೋಗದಲ್ಲಿ ನಡೆಯಲಿರುವ "ನನ್ನ ಸುತ್ತ" ಪ್ರದರ್ಶನದಲ್ಲಿ ಸುಮಾರು ನೂರೈವತ್ತು ಛಾಯಾಚಿತ್ರ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಇವುಗಳಲ್ಲಿ ವನ್ಯ ಜೀವಿಗಳ ಚಿತ್ರಗಳೂ ಸೇರಿವೆ. ಅಷ್ಟೇ ಅಲ್ಲ ಮಾಡೆಲಿಂಗ್, ಪೋರ್ಟರೇಟ್, ಪ್ರಕೃತಿ, ಮಾನವೀಯ ಸಂವೇದನೆ...ಹೀಗೆ ಹತ್ತು ಹಲವು ವಿಷಯಗಳನ್ನು ಸುತ್ತಿ ಬರುವ ಛಾಯಾಚಿತ್ರ ಕಲಾಕೃತಿಗಳಿವೆ.

ವೃತ್ತಿಯಿಂದ ಪತ್ರಕರ್ತರಾಗಿರುವ ಡಿ.ಗರುಡ ಅವರು ಪ್ರವೃತ್ತಿಯಿಂದ ಛಾಯಾಗ್ರಾಹಕರು. ದುಬಾರಿ ಎನ್ನಿಸುವ ಛಾಯಾಚಿತ್ರ ಹವ್ಯಾಸವನ್ನು ಕೇವಲ ತಮ್ಮ ಮನೆಯಲ್ಲಿನ ಅಲ್ಬಂಗೆ ಸೀಮಿತವಾಗಿ ಇಟ್ಟುಕೊಳ್ಳಲು ಬಯಸದ ಅವರು "ನನ್ನ ಸುತ್ತ" ಎನ್ನುವ ಪ್ರದರ್ಶನದ ಮೂಲಕ ಸೃಜನಾತ್ಮಕತೆಗೆ ಸ್ಪಂದಿಸುವಂತಹ ಕಲಾಪ್ರಿಯರ ಮುಂದಿಡುತ್ತಿದ್ದಾರೆ.
"ನನ್ನ ಸುತ್ತ" ಛಾಯಾಚಿತ್ರಗಳ ಪ್ರದರ್ಶನವನ್ನು ಅಂತರರಾಷ್ಟ್ರೀಯ ಮಾಜಿ ಕ್ರಿಕೆಟ್ ಆಟಗಾರರಾದ ದೊಡ್ಡ ಗಣೇಶ ಅವರು ಶನಿವಾರ ಬೆಳಿಗ್ಗೆ 11.00ಕ್ಕೆ ಉದ್ಘಾಟಿಸುವರು. ಸಮಾರಂಭದ ಅಧ್ಯಕ್ಷತೆಯನ್ನು ಹ್ಯೂಮರ್ ಕ್ಲಬ್ ಇಂಟರ್ನ್ಯಾಷನಲ್ನ ಸ್ಥಾಪಕ ಅಧ್ಯಕ್ಷರಾದ ವೈ.ಎಂ.ಎನ್.ಮೂತರ್ಿ ಅವರು ವಹಿಸುವರು. ಸಾಮಾಜಿಕ ಕಾರ್ಯಕರ್ತರಾದ ರತ್ನಾ ಎಂ.ಶ್ರೀನಿವಾಸ್ ಹಾಗೂ ಖ್ಯಾತ ಟೆಲಿವಿಷನ್ ನಟರಾದ ಅಂಬರೀಷ್ ಸಾರಂಗಿ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ.

ದಿನಾಂಕ: 6ನೇ ಜೂನ್ 2009 (ಶನಿವಾರ)

ಛಾಯಾಚಿತ್ರಗಳ ಪ್ರದರ್ಶನ ಸಮಯ: ಬೆಳಿಗ್ಗೆ 11.00ರಿಂದ ರಾತ್ರಿ 7ರವರೆಗೆ

(ಉದ್ಘಾಟನೆ: ಬೆಳಿಗ್ಗೆ 11.00ಕ್ಕೆ)

ಸ್ಥಳ: ಮನೋರಮಾ ಹಾಲ್,

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವಲ್ಡರ್್ ಕಲ್ಚರ್,

ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು-560 004