3.17.2011

ಆಹ್ವಾನ ಪತ್ರಿಕೆ..."ಕ್ರಿಕೆಟ್ ಪ್ರೇಮ"ವನ್ನು ಅನಾವರಣಗೊಳಿಸುವ ವಿಶಿಷ್ಟ ವಿನ್ಯಾಸದ "ಸೀರೆ" ಪ್ರದರ್ಶನ



ಆಹ್ವಾನ ಪತ್ರಿಕೆ

ಪತ್ರಕರ್ತರು, ಟೆಲಿವಿಷನ್ ಮಾಧ್ಯಮ ಪ್ರತಿನಿಧಿಗಳು ಹಾಗೂ ಛಾಯಾಗ್ರಾಹಕರಿಗೆ

ಹವ್ಯಾಸಿ ವಸ್ತ್ರ ವಿನ್ಯಾಸಕಿ ಸವಿತಾ ನಿರಂಜನ್ ಅವರು ರೂಪಿಸಿರುವ "ಕ್ರಿಕೆಟ್ ಪ್ರೇಮ"ವನ್ನು ಅನಾವರಣಗೊಳಿಸುವ ವಿಶಿಷ್ಟ ವಿನ್ಯಾಸದ "ಸೀರೆ" ಪ್ರದರ್ಶನ

ಸವಿತಾ ನಿರಂಜನ್ ಅವರು ವಿಶ್ವಕಪ್ ಕ್ರಿಕೆಟ್ ಸಂದರ್ಭದಲ್ಲಿ ರೂಪಿಸಿರುವ ಕ್ರಿಕೆಟ್ ಪ್ರೀತಿಯನ್ನು ವ್ಯಕ್ತಪಡಿಸುವ ಆಕರ್ಷಕವಾದ ಸೀರೆಯನ್ನು ರೂಪದರ್ಶಿಗಳು ಧರಿಸಿಕೊಂಡು ಪತ್ರಕರ್ತರು, ಟೆಲಿವಿಷನ್ ಮಾಧ್ಯಮ ಪ್ರತಿನಿಧಿಗಳು ಹಾಗೂ ಛಾಯಾಗ್ರಾಹಕರ ಎದುರು ಪ್ರದರ್ಶನ ಮಾಡಲಿದ್ದಾರೆ. ಛಾಯಾಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಹಾಗೂ ಬ್ಯಾಕ್ ಡ್ರಾಪ್ ಮುಂದೆ ರೂಪದರ್ಶಿಗಳ ಪ್ರದರ್ಶನಕ್ಕೆ ವ್ಯವಸ್ಥೆನ್ನು ಡಿಸೈನರ್ ಸವಿತಾ ಅವರ ನಿವಾಸದಲ್ಲಿಯೇ ಮಾಡಲಾಗಿದೆ.

ದಿನಾಂಕ: 19ನೇ ಮಾರ್ಚ್ 2011 (ಶನಿವಾರ)

ಸಮಯ: ಬೆಳಿಗ್ಗೆ 10.00ರಿಂದ ಮಧ್ಯಾಹ್ನ 12.30ರವರೆಗೆ

ಸ್ಥಳ: "ರಂಗನಾಥ ನಿಲಯ"
ಸೇಂಟ್ ಫಿಲೋಮಿನಾ ಶಾಲೆ ಹತ್ತಿರ,
(ಮಣೀಶ್ ಕಾರ್ತಿಕೇಯ ಅಪಾರ್ಟ್ ಮೆಂಟ್ ಹಿಂದೆ)
2ನೇ ಹಂತ, ಕುಮಾರಸ್ವಾಮಿ ಲೇಔಟ್,
ಬೆಂಗಳೂರು-560 078

ಹೆಚ್ಚಿನ ಮಾಹಿತಿಗಾಗಿ ಹಾಗೂ ವಿಳಾಸ ಪತ್ತೆ ಮಾಡುವುದು ಕಷ್ಟವಾದಲ್ಲಿ ಸಂಪರ್ಕಿಸಿ:
ಶೋಭಾ ಎಂ. ಲೋಲನಾಥ್
ಕಾರ್ಯದರ್ಶಿ, "ಜಿಎನ್ಎಸ್" ಯಾಮಿನಿ ಫೌಂಡೇಷನ್
ಮೊಬೈಲ್ ಸಂಖ್ಯೆ: 9845339262

* * * * * * * * * * * * * * * * * *

ಪತ್ರಿಕಾ ಪ್ರಕಟಣೆ

ಕ್ರಿಕೆಟ್ ಪ್ರೀತಿ ಅನಾವರಣಗೊಳಿಸುವ ಸೀರೆ

ಹವ್ಯಾಸಿ ಡಿಸೈನರ್ ಸವಿತಾ ನಿರಂಜನ್ ವಿನ್ಯಾಸಗೊಳಿಸಿರುವ ವಿಶಿಷ್ಟ ಸೀರೆಯ ಸೊಬಗು

ಕ್ರಿಕೆಟ್ ಪ್ರೇಮಿಯೂ ಆಗಿರುವ ಬೆಂಗಳೂರಿನ ಹವ್ಯಾಸಿ ವಸ್ತ್ರವಿನ್ಯಾಸಕಿ ಸವಿತಾ ನಿರಂಜನ್ ಅವರು ಕ್ರಿಕೆಟ್ ಮೇಲಿನ ತಮ್ಮ ಪ್ರೀತಿಯನ್ನು ವಿಶಿಷ್ಟವಾಗಿ ವ್ಯಕ್ತಪಡಿಸುವ ಉದ್ದೇಶದಿಂದ ಅತ್ಯಾಕರ್ಷಕವಾದ ಹಾಗೂ ಅಮೂಲ್ಯವಾದ ಸೀರೆಯನ್ನು ವಿನ್ಯಾಸಗೊಳಿಸಿದ್ದಾರೆ.

ವಿಶ್ವಕಪ್ ಕ್ರಿಕೆಟ್ ಉತ್ಸಾಹದ ಪ್ರವಾಹದಲ್ಲಿ ತಾವೂ ಇದ್ದೇವೆ, ತಮ್ಮ ಕ್ರಿಕೆಟ್ ಪ್ರೀತಿಯೂ ಅಪಾರವಾದದ್ದು ಎನ್ನುವುದನ್ನು ಬಿಂಬಿಸುವ ಆಶಯವೇ ಈ ಸುಂದರವಾದ ಅಂದದ ಸೀರೆಯ ವಿನ್ಯಾಸ ರೂಪುಗೊಳ್ಳಲು ಕಾರಣ. ಸುಮಾರು ಇಪ್ಪತ್ತು ದಿನಗಳವರೆಗೆ ಶ್ರಮವಹಿಸಿ ಸವಿತಾ ನಿರಂಜನ್ ಅವರು ಈ ಸೀರೆಯನ್ನು ಸಜ್ಜುಗೊಳಿಸಿದ್ದಾರೆ. ನೋಡಲು ಆಕರ್ಷಕವಾಗಿರುವ ಜೊತೆಗೆಯೇ ಅಮೂಲ್ಯವಾದದ್ದು ಎನ್ನುವುದನ್ನು ಸ್ಪಷ್ಟವಾಗಿಸುವಂಥ ವಿನ್ಯಾಸ ಈ ಸೀರೆಯದ್ದು.

ಬೆಳ್ಳಿಯ ಎಳೆಗಳ ಕುಸುರಿ ಝರಿ ಹಾಗೂ ಬೆಲೆಯುಳ್ಳ ಹರಳುಗಳಿಂದ ಸೀರೆಯನ್ನು ಅಲಂಕರಿಸಲಾಗಿದೆ. ಭಾರತದ ವಿಶಿಷ್ಟವಾದ ಹಾಗೂ ಸೂಕ್ಷ್ಮವಾದ ಕುಸುರಿ ಕಲೆಯಿಂದ ಸೀರೆಯ ಸೊಗಸು ಹೆಚ್ಚಿಸಲಾಗಿದೆ. ಯಾವುದೇ ದೇಶದವರು ವಿಶ್ವಕಪ್ ಗೆಲ್ಲಲಿ; ಆ ತಂಡದ ನಾಯಕನ ಪತ್ನಿ ಇಲ್ಲವೆ ಆತ್ಮೀಯ ಗೆಳತಿಗೆ ಈ ಸೀರೆಯು ಉಡುಗೊರೆಯಾಗಿ ಭಾರತದ ಕಡೆಯಿಂದ ಸೇರಬೇಕು ಎನ್ನುವುದು ಸವಿತಾ ನಿರಂಜನ್ ಅವರ ಆಶಯ.

ಹವ್ಯಾಸಿ ವಿನ್ಯಾಸಕಿ ಸವಿತಾ ನಿರಂಜನ್:

ವಸ್ತ್ರವಿನ್ಯಾಸ ಹಾಗೂ ಒಳಾಂಗಣ ವಿನ್ಯಾಸದಲ್ಲಿ ಆಸಕ್ತಿ ಹೊಂದಿರುವ ಸವಿತಾ ನಿರಂಜನ್ ಅವರು ಭಾರತೀಯ ಸಾಂಪ್ರದಾಯಿಕ ಕಲೆಗಳನ್ನು ಹೊಸ ತಲೆಮಾರಿನವರಿಗೆ ಇಷ್ಟವಾಗುವಂತೆ ತಮ್ಮ ವಿನ್ಯಾಸಗಳಲ್ಲಿ ಅಳವಡಿಸಿಕೊಂಡು ಬಂದಿದ್ದಾರೆ. "ಡಿಸೈನಿಂಗ್" ಎನ್ನುವುದು ಇವರಿಗೆ ಹವ್ಯಾಸ. ತಮ್ಮ ಕೌಟುಂಬಿಕ ಜೀವನದ ಜೊತೆಗೆ ಹವ್ಯಾಸವನ್ನು ಸರಿದೂಗಿಸಿಕೊಂಡು ಕೂಡ ಹೋಗುತ್ತಿದ್ದಾರೆ. ಕ್ರಿಕೆಟ್ ಆಟದ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿರುವ ಕಾರಣ ವಿಶ್ವಕಪ್ ಕ್ರಿಕೆಟ್ ಸಂದರ್ಭದಲ್ಲಿ ತಮ್ಮದೇ ಆದ ರೀತಿಯಲ್ಲಿ ಕ್ರಿಕೆಟ್ ಪ್ರೀತಿಯನ್ನು ವ್ಯಕ್ತಪಡಿಸಲು ಮುಂದಾಗಿ ವಿಶಿಷ್ಟವಾದ ಸೀರೆಯನ್ನು ವಿನ್ಯಾಸಗೊಳಿಸಿದ್ದಾರೆ.

ಸೀರೆಯನ್ನು ಪ್ರದರ್ಶಿಸುವ ರೂಪದರ್ಶಿಗಳು:

ಶೋಭಾ ಎಂ. ಲೋಲನಾಥ್: ಕಿರುತೆರೆ ನಟಿ ಹಾಗೂ ಭರತನ್ಯಾಟ್ಯ ಕಲಾವಿದೆ ಶೋಭಾ ಎಂ. ಲೋಲನಾಥ್ ಅವರು ಟೆಲಿವಿಷನ್ ವೀಕ್ಷಕರಿಗೆ ಚಿರಪರಿಚಿತರು. ಕಾಪರ್ೊರೇಟ್, ಮುದ್ರಣ ಹಾಗೂ ಪ್ರೊಡಕ್ಟ್ ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ತಮ್ಮ ಕಲಾ ಜೀವನ ಮುಂದುವರಿಸಿದ್ದು ಈಗ "ಚಕ್ರವಾಕ", "ಹೃದಯ ಸಾಕ್ಷಿ" ಹಾಗೂ "ಗೆಜ್ಜೆ ಪೂಜೆ" ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದಾರೆ. ಇವರು "ಜಿಎನ್ಎಸ್" ಯಾಮಿನಿ ಫೌಂಡೇಷನ್ ಕಾರ್ಯದರ್ಶಿಯೂ ಆಗಿದ್ದಾರೆ.

ಬೀನಾ ಬೋರ್ಕರ್ (ಬಿಯಾ): "ಯುನಿನಾರ್" ಜಾಹೀರಾತಿನಿಂದ ಸಾಕಷ್ಟು ಪ್ರಚಾರ ಪಡೆದ ಬೀನಾ ಬೋರ್ಕರ್ ಅವರು ಲಿಯೊನಾರ್ಡ್ ಏರೋನ್ಸ್ ಹಾಗೂ ರಿಯೊಲೋಫ್ ಫೆಂಟ್ ಜೋಸ್ ಅವರಂಥ ಖ್ಯಾತ ಛಾಯಾಗ್ರಾಹಕರಿಗೆ ರೂಪದರ್ಶಿಯಾಗಿದ್ದಾರೆ. ವಿವಿಧ ಗೃಹಬಳಕೆ ವಸ್ತುಗಳನ್ನು ಉತ್ಪಾದಿಸುವ ಅನೇಕ ಕಂಪೆನಿಗಳ ಜಾಹೀರಾತುಗಳಲ್ಲಿಯೂ ಇವರು ಕಾಣಿಸಿಕೊಂಡಿದ್ದಾರೆ.


ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಶೋಭಾ ಎಂ. ಲೋಲನಾಥ್
ಕಾರ್ಯದರ್ಶಿ, "ಜಿಎನ್ಎಸ್" ಯಾಮಿನಿ ಫೌಂಡೇಷನ್
ಮೊಬೈಲ್ ಸಂಖ್ಯೆ: 984533926