7.29.2011

ಸರ್ಕಾರಿ ಶಾಲಾ ಮಕ್ಕಳಿಗೆ ಶೂ ಮತ್ತು ಡೆಸ್ಕ್ ವಿತರಣೆ

ಬೆಂಗಳೂರಿನಲ್ಲಿ ನಡೆದ ರೋಟರಿ ರಾಮಮೂರ್ತಿನಗರ ಘಟಕದ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭವನ್ನು ಅಂತರರಾಷ್ಟೀಯ ರೂಪದರ್ಶಿ ಬಿಯಾ ಬೋರ್ಕರ್ ಅವರು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು. ಅಧ್ಯಕ್ಷ ಡಾ. ರಾಜಕುಮಾರ್ ಶೇಠ್ (ಎಡತುದಿ), ಹಿರಿಯ ಪತ್ರಕರ್ತ ಗೋಪಾಲಕೃಷ್ಣ ಹೆಗಡೆ (ನಡುವೆ) ಹಾಗೂ ರೋಟರಿ ಜಿಲ್ಲಾ ಗವರ್ನರ್ ಆರ್. ಬದರಿ ಪ್ರಸಾದ್ ಉಪಸ್ಥಿತರಿದ್ದರು.


ರೋಟರಿ ರಾಮಮೂರ್ತಿನಗರ ಘಟಕದ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ

ಸರ್ಕಾರಿ ಶಾಲಾ ಮಕ್ಕಳಿಗೆ
ಶೂ ಮತ್ತು ಡೆಸ್ಕ್ ವಿತರಣೆ


ಬೆಂಗಳೂರು: ಅಧಿಕಾರ ಸ್ವೀಕಾರ ಸಮಾರಂಭದಿಂದಲೇ ಸಮಾಜಮುಖಿಯಾಗುವ ಕಾರ್ಯವನ್ನು ಮಾಡಲು ಮುಂದಾದ ರೋಟರಿ ರಾಮಮೂರ್ತಿನಗರ ಘಟಕದ ನೂತನ ಪದಾಧಿಕಾರಿಗಳು ಸರ್ಕಾರಿ ಶಾಲಾ ಮಕ್ಕಳಿಗೆ ಶೂ ಹಾಗೂ ಡೆಸ್ಕ್ ವಿತರಣೆ ಮಾಡಿದರು.

ಸಿ.ಎಂ.ಆರ್. ಹೆಲ್ತ್ ಕ್ಯಾಂಪಸ್ ಭವನದಲ್ಲಿ ನಡೆದ ಸಮಾರಂಭದಲ್ಲಿ 500 ಶಾಲಾ ಮಕ್ಕಳಿಗೆ ಶೂಗಳನ್ನು ಅಧ್ಯಕ್ಷ ಡಾ. ರಾಜಕುಮಾರ್ ಶೇಠ್ ಅವರು ವಿತರಣೆ ಮಾಡಿದರು. ಅಷ್ಟೇ ಅಲ್ಲ ರಾಮಮೂರ್ತಿ ನಗರ ಭಾಗದಲ್ಲಿನ ಸರ್ಕಾರಿ ಶಾಲೆಗಳಿಗೆ 300 ಡೆಸ್ಕ್ ಕೂಡ ನೀಡಲಾಯಿತು.

ಇನ್ನೊಂದು ವಿಶೇಷವೆಂದರೆ ಪರಿಸರ ಪ್ರೇಮದ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಎಲ್ಲ ಅತಿಥಿಗಳಿಗೆ ಹಾಗೂ ಪ್ರೇಕ್ಷಕರಿಗೆ ಸಸಿಗಳನ್ನು ನೀಡಲಾಯಿತು. ಜೊತೆಗೆ ನಗರದಲ್ಲಿ ಶಬ್ಧ ಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರೋಟರಿ ರಾಮಮೂರ್ತಿ ನಗರದ ಸದಸ್ಯರೆಲ್ಲರೂ ಸಾಧ್ಯವಾದ ಮಟ್ಟಿಗೆ ತಮ್ಮ ವಾಹನಗಳ ಹಾರ್ನ್ ಅನ್ನು ಕಡಿಮೆ ಬಳಸುವ ಪ್ರಮಾಣವನ್ನೂ ಮಾಡಿದರು.

ಸಮಾರಂಭದಲ್ಲಿ ಜಿಲ್ಲಾ ಗವರ್ನರ್ ಆರ್. ಬದರಿ ಪ್ರಸಾದ್, ಹಿರಿಯ ಪತ್ರಕರ್ತ ಗೋಪಾಲಕೃಷ್ಣ ಹೆಗಡೆ, ಅಂತರರಾಷ್ಟ್ರೀಯ ರೂಪದರ್ಶಿ ಬಿಯಾ ಬೋರ್ಕರ್ ಉಪಸ್ಥಿತರಿದ್ದರು.

ರೋಟರಿ ರಾಮಮೂರ್ತಿನಗರ ಘಟಕದ ನೂತನ ಪದಾಧಿಕಾರಿಗಳು: ಡಾ. ರಾಜಕುಮಾರ್ ಶೇಠ್ (ಅಧ್ಯಕ್ಷ), ರಾಜ್ ಎ. ಬಾಲನ್ (ಕಾರ್ಯದರ್ಶಿ), ಡಾ. ಸಿ. ಗಿರೀಶ್ (ಉಪಾಧ್ಯಕ್ಷ), ಎನ್. ಕಿಶೋರ್ (ಕಾರ್ಯನಿರ್ವಾಹಕ ಕಾರ್ಯದರ್ಶಿ), ಜಿ. ಶ್ರೀನಿವಾಸ್ (ಖಜಾಂಚಿ); ಸಮಿತಿ ಸದಸ್ಯರು: ಮಂಜುನಾಥ್, ಆರ್. ಸುರೇಶ್, ಕೆ. ನಾರಾಯಣ್, ಕೆ. ಶ್ರೀನಿವಾಸನ್, ಎ. ರಾಮಚಂದ್ರ ರೆಡ್ಡಿ, ಪಿ. ನಾರಾಯಣಸ್ವಾಮಿ, ಡಾ. ವಿ.ಎಂ. ನಾರಾಯಣ್, ಎಚ್. ಮೋಹನಾಂಬ, ಆರ್. ಕೊದಂಡ ರೆಡ್ಡಿ, ಕೆ. ಮುರಳೀಧರ್, ಡಾ. ಸಿ.ಎಂ. ಬಾಸ್ಕರ್ ರೆಡ್ಡಿ, ಕೆ.ಸಿ. ಜಗನ್ನಾಥ್ ರೆಡ್ಡಿ.