3.19.2010

ನೀ...ಜಿಂಕೆ ಮರಿನಾ...!


ಹೊಯ್ಸಳ ವೈಲ್ಡ್ಲೈಫ್ ಕನ್ಸರ್ವೇಷನ್
ಸೊಸೈಟಿ (ಎಚ್.ಡಬ್ಲ್ಯು.ಸಿ.ಎಸ್.)
ಮುಖ್ಯಸ್ಥರಾದ ಕಿರಣ್ ಆಳ್ವಾ ಅವರ
ತೋಳಲ್ಲಿ ಪುಟಾಣಿ ಜಿಂಕೆ.



ನೋಡಿದ ತಕ್ಷಣ ಎಲ್ಲರ ಕಣ್ಮನವನ್ನು ಸೆಳೆಯುವ ಮುದ್ದು ಮುಖ. ಹತ್ತಿರ ಹೋದವರೆಲ್ಲರನ್ನು ನಾಲಿಗೆ ಚಾಚಿ ಮುಟ್ಟುವ ತವಕ. ಹತ್ತಿರ ತನ್ನವರಿಲ್ಲದ ಕಾರಣ ಅದಕ್ಕೆ ಬಾಟಲಿಯಲ್ಲಿ ಹಾಲುಣಿಸುವ `ಪ್ರಾಣಿ ಪಾಲಕ' ರಾಮ ಅವರೇ ಅಮ್ಮನಂತೆ. ಪಿಳಪಿಳ ಕಣ್ಣುಬಿಡುವ ಈ ಜಿಂಕೆ ಮರಿ ತನ್ನ ತಾಯಿಯಿಂದ ದೂರವಾಗಿ ಈಗ ಅನಾಥ. ಆದ್ದರಿಂದ ಅದಕ್ಕೀಗ ಬನ್ನೇರುಘಟ್ಟ ರಾಷ್ಟ್ರೀಯ ವನ್ಯಜೀವಿ ಉದ್ಯಾನವನವೇ ಆಶ್ರಯ ತಾಣ.

ತಾಯಿಯಿಂದ ದೂರವಾಗಿ ಖಾಸಗಿ ವ್ಯಕ್ತಿಯೊಬ್ಬರ ಕೈಸೇರಿದ್ದ ಈ ಜಿಂಕೆ ಮರಿಯನ್ನು ವನ್ಯಜೀವಿ ರಕ್ಷಣೆ ಕಾಯಿದೆಯ ಅಡಿಯಲ್ಲಿ ರೆಸ್ಕಿವ್ ಮಾಡಿ ತಂದು ಈ ಉದ್ಯಾನದಲ್ಲಿ ಪೋಷಿಸಲಾಗುತ್ತಿದೆ. ಇದರ ವಯಸ್ಸು ಸುಮಾರು ಒಂದೂವರೆ ತಿಂಗಳು ದಾಟಿರಬಹುದು ಎನ್ನುವ ಅಂದಾಜು. ಆದ್ದರಿಂದ ಅದಕ್ಕಿನ್ನೂ ಗಟ್ಟಿಯಾದ ಆಹಾರ ಸೇವಿಸಲು ಆಗುವುದಿಲ್ಲ. ಆದ್ದರಿಂದ ವನ್ಯಜೀವಿ ಉದ್ಯಾನವನದ ಸಿಬ್ಬಂದಿಯೇ ಮುದ್ದುಮಾಡಿ ಹಾಲು ಕುಡಿಸಬೇಕು.

ಈ ಹೊಸ ಅತಿಥಿಯನ್ನು ಇನ್ನೂ ಸ್ವಚ್ಛಂದವಾಗಿ ಓಡಾಡಲು ವನ್ಯಜೀವಿ ಉದ್ಯಾನಕ್ಕೆ ಬಿಡಲು ಸಾಧ್ಯವಿಲ್ಲ. ಆದ್ದರಿಂದ ಇನ್ನೂ ಕೆಲವು ತಿಂಗಳು ಅದಕ್ಕೆ ಪೋಷಣೆ ನೀಡಿ, ಎಲೆ-ಕಾಯಿ ತಿನ್ನುವಷ್ಟು ಬೆಳೆದ ನಂತರ ಹೊರಗೆ ಬಿಡಲಾಗುತ್ತದೆ. ಸದ್ಯಕ್ಕೆ ಸಹಾಯಕ ನಿದರ್ೇಶಕ(ಪಶುವೈದ್ಯ ಸೇವೆ)ರಾದ ಬಿ.ಸಿ.ಚಿಟ್ಟಿಯಪ್ಪ ಅವರ ಮಾರ್ಗದರ್ಶನದಲ್ಲಿ ಇದನ್ನು ಪೋಷಿಸುವ ಕೆಲಸ ನಡೆಯುತ್ತಿದೆ.

-ಕೃಪೆ: `ಪ್ರಜಾವಾಣಿ' ಕನ್ನಡ ದಿನಪತ್ರಿಕೆ