8.04.2009

ಶೋಭಾ ಲೋಲನಾಥ್ ಅವರಿಗೆ "ಒನಕೆ ಓಬವ್ವ" ಪ್ರಶಸ್ತಿ ಪ್ರದಾನ

ಶೋಭಾ ಲೋಲನಾಥ್ ಅವರಿಗೆ ಒನಕೆ ಓಬವ್ವ ಪ್ರಶಸ್ತಿ ಪ್ರದಾನ


ಶಕ್ತಿಯ ಸಂಕೇತ "ಒನಕೆ ಓಬವ್ವ": ಡಾ.ಹಂಪನ


"ತಿರುವಳ್ಳವರ ಪ್ರತಿಮೆ ಅನಾವರಣದ ವಿಷಯದಲ್ಲಿ ವಿರೋಧ ಬೇಡ. ಸಾಂಸ್ಕೃತಿಕ ಸೌಹಾರ್ದದ ಸಂಕೇತವಾಗಿ ಪ್ರತಿಮೆಯ ಅನಾವರಣ ನಡೆಯಬೇಕು" ಎಂದು ಖ್ಯಾತ ಮಹಿಳಾ ಸಾಹಿತಿ ಡಾ. ಕಮಲಾ ಹಂಪನ ಹೇಳಿದರು.
ಕನರ್ಾಟಕ ಸಹೃದಯರ ಸೇವಾ ಪ್ರತಿಷ್ಠಾನ ಆಯೋಜಿಸಿದ್ದ "ಒನಕೆ ಓಬವ್ವ ಪ್ರಶಸ್ತಿ" ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು "ತಮಿಳುನಾಡಿನೊಂದಿಗೆ ನಾವು ಅನೇಕ ವಿಷಯದಲ್ಲಿ ಸದಾ ಹೋರಾಟ ನಡೆಸುತ್ತಾ ಬಂದಿದ್ದೇವೆ. ನೆಲ ಹಾಗೂ ಜಲದ ವಿಷಯದಲ್ಲಿ ತಮಿಳರು ಕನ್ನಡಿಗರಿಗೆ ಬ್ರಿಟಿಷರ ಕಾಲದಿಂದಲೂ ತೊಂದರೆ ಕೊಡುತ್ತಾ ಬಂದಿದ್ದಾರೆ. ಈಗಲೂ ಅದೇ ರೀತಿ ಮಾಡುತ್ತಿದ್ದಾರೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಬಾರದೆಂದು ಕೂಡ ಅಡ್ಡಗಾಲು ಹಾಕಿದ್ದರು" ಎಂದು ಕಮಲಾ ಅವರು ನುಡಿದರು.


"ತಮಿಳುನಾಡು ಹಾಗೂ ತಮಿಳರ ಜೊತೆಗೆ ನಮ್ಮ ಹೋರಾಟ ಏನೇ ಇರಲಿ; ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಸೌಹಾರ್ದ ವಿಷಯ ಬಂದಾಗ ವಿರೋಧ ಬೇಡ. ತಮಿಳು ಕವಿ ತಿರುವಳ್ಳವರ ಪ್ರತಿಮೆಯನ್ನು ಬೆಂಗಳೂರಿನಲ್ಲಿ ಅನಾವರಣಗೊಳಿಸುವುದು ಕೂಡ ಅಂತಹದೊಂದು ಸೌಹಾರ್ದ ಸಂಬಂಧದ ಬೆಸುಗೆಯೇ ಆಗಿದೆ" ಎಂದು ಹಂಪನಾ ತಿಳಿಸಿದರು.


ನಟಿ ಶೋಭಾ ಎಂ. ಲೋಲನಾಥ್ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಹೋರಾಟದ ಹಾದಿಯಲ್ಲಿ ಸಾಗಿ ಸಾಧನೆ ಮಾಡಿದ ಮಹಿಳೆಯರಿಗೆ "ಒನಕೆ ಓಬವ್ವ ಪ್ರಶಸ್ತಿ" ಪ್ರದಾನ ಮಾಡಿದ ಡಾ. ಕಮಲಾ ಹಂಪನ ಅವರು "ಒನಕೆ ಓಬವ್ವ ಮಹಿಳೆಯ ಹೋರಾಟದ ಶಕ್ತಿಯ ಸಂಕೇತ" ಎಂದ ಅವರು "ಹೆಣ್ಣುಮಕ್ಕಳು ಈ ನವಯುಗದಲ್ಲಿ ಎಲ್ಲ ಕ್ಷೇತ್ರದಲ್ಲಿ ದಾಪುಗಾಲು ಇಡುತ್ತಿರುವುದು ಒಳ್ಳೆಯ ಬೆಳವಣಿಗೆ" ಎಂದು ಹೇಳಿದರು.


ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಾದ ಶೋಭಾ ಎಂ. ಲೋಲನಾಥ್, ಪ್ರೋ. ಬಿ. ನಾರಾಯಣಮ್ಮ, ಡಾ. ಎನ್. ನಂದಿನಿ, ಲಲಿತಾ ಮೇರಿ, ಪುಷ್ಪಾ ರಮೇಶ್, ಜಿ. ಪದ್ಮಾವತಿ, ಡಾ. ಇಸಬೆಲ್ಲಾ ಎಸ್. ಕ್ಸೇವಿಯರ್, ರಾಧಾ ಕುಲಕಣರ್ಿ, ಬ್ರಹ್ಮಕುಮಾರಿ ಭಾರತಿ, ಕೆ. ಪಲ್ಲವಿ, ರತ್ನ ಹಾಲಪ್ಪಗೌಡ, ಹೊನ್ನಮ್ಮ ಸೋಮಲಿಂಗಪ್ಪ ಚಂದಾಪುರ, ಸ್ವಾತಿ ಪಿ. ಭಾರದ್ವಾಜ್, ಎನ್. ಗೌರಮ್ಮ ಮೂತರ್ಿ, ವಿಜಯಾ, ಅಂಬುಜಾಕ್ಷಿ ರೆಡ್ಡಿ, ಲಕ್ಷ್ಮೀಕಾಂತಮ್ಮ, ಬಿ.ಆರ್. ಭಾಗ್ಯ ರಂಗನಾಥನ್, ರೇಖಾ ಜಿ. ಹೆಗ್ಗಡೆ ಹಾಗೂ ಟಿ.ಗಿರಿಜಾ ಅವರಿಗೆ ಈ ಸಮಾರಂಭದಲ್ಲಿ "ಒನಕೆ ಒಬವ್ವ ಪ್ರಶಸ್ತಿ" ನೀಡಿ ಗೌರವಿಸಲಾಯಿತು. ಬಿ.ಎಲ್. ಭಾಗ್ಯಲಕ್ಷ್ಮಿ ಮತ್ತು ನಾರಾಯಣ ಮೂತರ್ಿ ವೈ.ಜಿ. ಅವರಿಗೆ "ಆದರ್ಶ ದಂಪತಿಗಳು ಪ್ರಶಸ್ತಿ" ಪ್ರದಾನ ಮಾಡಲಾಯಿತು.


ವೇದಿಕೆಯ ಮೇಲೆ ಹಿರಿಯ ಸಾಹಿತಿ ಪ್ರೇಮಾ ಭಟ್, ಕನರ್ಾಟಕ ಸಹೃದಯರ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಗುಡಿಬಂಡೆ ಮಧುಸೂಧನ ಹಾಗೂ ಖಜಾಂಚಿಯಾದ ಅನ್ನಪೂರ್ಣ, ನಟಿ ಶೋಭಾ ಎಂ. ಲೋಲನಾಥ್, ಡಾ.ನಂದಿನಿ ಎನ್. ಅವರು ಉಪಸ್ಥಿತರಿದ್ದರು.