7.07.2009

PHOTO EXHIBITION "NANNA SUTTA"


"ನನ್ನ ಸುತ್ತ"ಛಾಯಾಚಿತ್ರಗಳ ಪ್ರದರ್ಶನ


ಚಿತ್ತ ಕದಿಯುವಂತಹ ಅನೇಕ ದೃಶ್ಯಾವಳಿಗಳು ನಮ್ಮ ಸುತ್ತಲೂ ಹರಡಿಕೊಂಡಿವೆ. ಅವುಗಳನ್ನು ವಿಶಿಷ್ಟವಾದ ರೀತಿಯಲ್ಲಿ ನೋಡುವುದು ಹಾಗೂ ಅವುಗಳನ್ನು ಒಂದು ಕಲಾಕೃತಿಯಾಗಿಸುವುದೇ ವಿಶೇಷ ಅನುಭೂತಿ. ಆದರೆ ಕಂಡಿದ್ದನ್ನು ಕಂಡಹಾಗೆ ಎನ್ನುವುದಕ್ಕಿಂತ ಅದಕ್ಕೊಂದು ಅರ್ಥ ನೀಡುವ ರೀತಿಯಲ್ಲಿ ಯಾವುದೇ ಒಂದು ಕಲಾ ರೂಪಕ್ಕೆ ಇಳಿಸುವುದು ಸುಲಭ ಸಾಧ್ಯವಲ್ಲ. ಅದಕ್ಕೆ ಕಲಾವಿದನ ಹೃದಯವೂ ಬೇಕು.

ಅಂತಹ ಕಲಾವಿದನ ಹೃದಯ ಹೊಂದಿರುವ ಡಿ.ಗರುಡ ಅವರು ಕ್ಯಾಮೆರಾ ಕಣ್ಣಿನಲ್ಲಿ ತಮ್ಮ ಸುತ್ತಲಿನ ಜಗತ್ತನ್ನು ವಿಭಿನ್ನವಾದ ರೀತಿಯಲ್ಲಿ ಕಂಡಿದ್ದಾರೆ. ತಾವು ಕಂಡಿದ್ದನ್ನು ಛಾಯಾಚಿತ್ರಗಳ ಮೂಲಕ ಕಲಾ ಪ್ರಿಯರಾದ ಸಹೃದಯರ ಮುಂದೆ ಇಡುತ್ತಿದ್ದಾರೆ. ಜೂನ್ 6, 2009 (ಶನಿವಾರ)ರಂದು "ನನ್ನ ಸುತ್ತ" ಛಾಯಾಚಿತ್ರಗಳ ಪ್ರದರ್ಶನವನ್ನು ಬೆಂಗಳೂರಿನ ಬಸವನಗುಡಿಯ ಬಿ.ಪಿ.ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವಲ್ಡರ್್ ಕಲ್ಚರ್ನಲ್ಲಿ ಏರ್ಪಡಿಸಿದ್ದಾರೆ.

ಪ್ರತಿ ದಿನವೂ ನಾವು ಹಲವಾರು ದೃಶ್ಯಗಳನ್ನು ಕಾಣುತ್ತೇವೆ. ಅವುಗಳಲ್ಲಿ ಅನೇಕ ಸೂಕ್ಷ್ಮಗಳು ಇರುತ್ತವೆ. ಆದರೆ ಸಹಜವಾಗಿ ನೋಡುವಾಗ ಅವು ವಿಶೇಷ ಎನಿಸುವುದೇ ಇಲ್ಲ. ಅಂತಹ ಸೂಕ್ಷ್ಮಗಳನ್ನು ಕೂಡ ಡಿ.ಗರುಡ ಅವರು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದಿದ್ದಾರೆ. ಗೋಡೆಯ ಮೇಲೆ ಬೆಳೆಯುವ ಅತಿ ಸೂಕ್ಷ್ಮವಾದ ಫಂಗಸ್ ನಮ್ಮ ಗಮನ ಸೆಳೆಯುತ್ತದೆಯೇ; ಖಂಡಿತ ಇಲ್ಲ. ಅದೊಂದು ಪ್ರಕೃತಿಯ ವಿಸ್ಮಯ ಎನ್ನುವುದನ್ನು ನಾವೆಂದೂ ಕಾಣುವುದೇ ಇಲ್ಲ. ಆದರೆ ಕ್ಯಾಮೆರಾ ಕಣ್ಣಿನಲ್ಲಿ ಅದೇ ಫಂಗಸ್ ಅನ್ನು ಡಿ.ಗರುಡ ಅವರು ಪ್ರಕೃತಿ ಸೃಷ್ಟಿಸಿದ "ನ್ಯಾನೊ ಕಾಡು" ಎನ್ನುವ ರೀತಿಯಲ್ಲಿ ಸೆರೆಹಿಡಿದು ಸುಂದರ ಕಲಾಕೃತಿಯಾಗಿಸಿದ್ದಾರೆ.

ನಲ್ಲಿಯ ನೀರು ನಿಂತು, ಕೊನೆಯಲ್ಲಿ ಹನಿಹನಿಯಾಗಿ ತೊಟ್ಟಿಕ್ಕಿ ಬೀಳುವಾಗ ಅದೊಂದು ಅದ್ಭುತ ದೃಶ್ಯವೇ ಆಗಿರುತ್ತದೆ ಎನ್ನುವುದು ಡಿ.ಗರುಡ ಅವರು ಸೆರೆಹಿಡಿದ ಚಿತ್ರದಿಂದ ಅರಿವಾಗುತ್ತದೆ. ಒಂದು ಹನಿ ತೊಟ್ಟಿಕ್ಕುವ ಕ್ಷಣವನ್ನು ಅತಿ ಸೂಕ್ಷ್ಮವಾಗಿ ಲೆನ್ಸ್ ಮೂಲಕ ನೋಡಿದಾಗ ಅದೊಂದು "ಡೀಪ್ ಇಂಪ್ಯಾಕ್ಟ್"ನಂತೆ ಕಾಣಿಸುತ್ತದೆ ಎನ್ನುವುದು ಖಂಡಿತ ಅಚ್ಚರಿಗೊಳಿಸುತ್ತದೆ.

ಕಾಡಿನಲ್ಲಿ ಬೆಳೆದೊಂದು ಮರವು ಸುಂದರಿಯು ಬಳುಕುತ್ತಾ ನಿಂತಂತೆ ಕಾಣುವ ಕಣ್ಣು ಬೇಕು! ಆ ರೀತಿಯ "ವನ ಸುಂದಿರಿ"ಯು ಖಂಡಿತ ಮನಕ್ಕೆ ಮುದ ನೀಡುತ್ತಾಳೆ. ಅದೇ ರೀತಿಯಲ್ಲಿ ಸೂಯರ್ಾಸ್ತ-ಸೂಯರ್ೋದಯದ ಹಲವಾರು ದೃಶ್ಯಗಳು ಕಣ್ಮನ ತಣಿಸುತ್ತವೆ. ನಮ್ಮ ಸುತ್ತಲಿರುವುದೆಲ್ಲವೂ ಸುಂದರ ಎನ್ನುವುದು ಡಿ.ಗರುಡ ಅವರ "ನನ್ನ ಸುತ್ತ" ಛಾಯಾಚಿತ್ರ ಪ್ರದರ್ಶನದಲ್ಲಿ ಅಡಗಿರುವ ತತ್ವ.

ಐಡಿಯಾ-ಜಿ ಹಾಗೂ ಗರುಡ ನಾಟ್ಯ ಸಂಘದ ಸಹಯೋಗದಲ್ಲಿ ನಡೆಯಲಿರುವ "ನನ್ನ ಸುತ್ತ" ಪ್ರದರ್ಶನದಲ್ಲಿ ಸುಮಾರು ನೂರೈವತ್ತು ಛಾಯಾಚಿತ್ರ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಇವುಗಳಲ್ಲಿ ವನ್ಯ ಜೀವಿಗಳ ಚಿತ್ರಗಳೂ ಸೇರಿವೆ. ಅಷ್ಟೇ ಅಲ್ಲ ಮಾಡೆಲಿಂಗ್, ಪೋರ್ಟರೇಟ್, ಪ್ರಕೃತಿ, ಮಾನವೀಯ ಸಂವೇದನೆ...ಹೀಗೆ ಹತ್ತು ಹಲವು ವಿಷಯಗಳನ್ನು ಸುತ್ತಿ ಬರುವ ಛಾಯಾಚಿತ್ರ ಕಲಾಕೃತಿಗಳಿವೆ.

ವೃತ್ತಿಯಿಂದ ಪತ್ರಕರ್ತರಾಗಿರುವ ಡಿ.ಗರುಡ ಅವರು ಪ್ರವೃತ್ತಿಯಿಂದ ಛಾಯಾಗ್ರಾಹಕರು. ದುಬಾರಿ ಎನ್ನಿಸುವ ಛಾಯಾಚಿತ್ರ ಹವ್ಯಾಸವನ್ನು ಕೇವಲ ತಮ್ಮ ಮನೆಯಲ್ಲಿನ ಅಲ್ಬಂಗೆ ಸೀಮಿತವಾಗಿ ಇಟ್ಟುಕೊಳ್ಳಲು ಬಯಸದ ಅವರು "ನನ್ನ ಸುತ್ತ" ಎನ್ನುವ ಪ್ರದರ್ಶನದ ಮೂಲಕ ಸೃಜನಾತ್ಮಕತೆಗೆ ಸ್ಪಂದಿಸುವಂತಹ ಕಲಾಪ್ರಿಯರ ಮುಂದಿಡುತ್ತಿದ್ದಾರೆ.
"ನನ್ನ ಸುತ್ತ" ಛಾಯಾಚಿತ್ರಗಳ ಪ್ರದರ್ಶನವನ್ನು ಅಂತರರಾಷ್ಟ್ರೀಯ ಮಾಜಿ ಕ್ರಿಕೆಟ್ ಆಟಗಾರರಾದ ದೊಡ್ಡ ಗಣೇಶ ಅವರು ಶನಿವಾರ ಬೆಳಿಗ್ಗೆ 11.00ಕ್ಕೆ ಉದ್ಘಾಟಿಸುವರು. ಸಮಾರಂಭದ ಅಧ್ಯಕ್ಷತೆಯನ್ನು ಹ್ಯೂಮರ್ ಕ್ಲಬ್ ಇಂಟರ್ನ್ಯಾಷನಲ್ನ ಸ್ಥಾಪಕ ಅಧ್ಯಕ್ಷರಾದ ವೈ.ಎಂ.ಎನ್.ಮೂತರ್ಿ ಅವರು ವಹಿಸುವರು. ಸಾಮಾಜಿಕ ಕಾರ್ಯಕರ್ತರಾದ ರತ್ನಾ ಎಂ.ಶ್ರೀನಿವಾಸ್ ಹಾಗೂ ಖ್ಯಾತ ಟೆಲಿವಿಷನ್ ನಟರಾದ ಅಂಬರೀಷ್ ಸಾರಂಗಿ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ.

ದಿನಾಂಕ: 6ನೇ ಜೂನ್ 2009 (ಶನಿವಾರ)

ಛಾಯಾಚಿತ್ರಗಳ ಪ್ರದರ್ಶನ ಸಮಯ: ಬೆಳಿಗ್ಗೆ 11.00ರಿಂದ ರಾತ್ರಿ 7ರವರೆಗೆ

(ಉದ್ಘಾಟನೆ: ಬೆಳಿಗ್ಗೆ 11.00ಕ್ಕೆ)

ಸ್ಥಳ: ಮನೋರಮಾ ಹಾಲ್,

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವಲ್ಡರ್್ ಕಲ್ಚರ್,

ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು-560 004