9.25.2009

Rangamanch Pravesh of Mitha Ramesh


ಮಿತಾ ರಂಗ ಪ್ರವೇಶ

ನಾಟಕಾಲಂಕಾರ ಗರುಡ ಸದಾಶಿವರಾಯರ ಮರಿಮಗಳಾದ ಮಿತಾ ರಮೇಶ್ ಅವರು ಕಥಕ್ ನೃತ್ಯದಲ್ಲಿ ಶಾಸ್ತ್ರೋಕ್ತವಾಗಿ ಅಭ್ಯಾಸ ಪೂರ್ಣಗೊಳಿಸಿದ್ದು ಅಕ್ಟೋಬರ್ 2 (ಶುಕ್ರವಾರ)ರಂದು ರಂಗ ಪ್ರವೇಶ ಮಾಡಲಿದ್ದಾರೆ.

ಸುದೀರ್ಘ ಎಂಟು ವರ್ಷಗಳ ಕಾಲ ನೃತ್ಯ ಗುರುಗಳಾದ ನಂದಿನಿ ಕೆ.ಮೆಹ್ತಾ ಹಾಗೂ ಕೆ.ಮುರಳಿ ಮೋಹನ್ ಅವರಿಂದ ಭಾವ-ಭಂಗಿ ಹಾಗೂ ರಾಗ, ತಾಳ, ಲಯಗಳ ಜ್ಞಾನ ಪಡೆದಿರುವ ಮಿತಾ ಈಗಾಗಲೇ ಅನೇಕ ಕಡೆಗಳಲ್ಲಿ ನಾಟ್ಯ ಪ್ರದರ್ಶನ ನೀಡಿದ್ದಾರೆ.

ನಾಟ್ಯ ಶಾಸ್ತ್ರದ ಸಂಪ್ರದಾಯದಂತೆ ಅವರೀಗ ರಂಗಮಂಚ ಪ್ರವೇಶ ಮಾಡುವ ಮೂಲಕ ಕಲಾ ಪ್ರಭೆಯನ್ನು ಹರಡಲು ಸಜ್ಜಾಗಿದ್ದಾರೆ.

ತಮ್ಮ ಅಜ್ಜ ಖ್ಯಾತ ತಬಲಾ ವಾದಕ ಪಂಡಿತ್ ದತ್ತಾತ್ರೇಯ ಗರುಡ ಅವರಂತೆಯೇ ಕಲಾ ಕ್ಷೇತ್ರದಲ್ಲಿ ಬೆಳೆಯುವ ಮಹತ್ವಾಕಾಂಕ್ಷೆ ಹೊಂದಿರುವ ಮಿತಾ ಸಾಧನೆಯ ಹಾದಿಗೆ ಈ ರಂಗ ಪ್ರವೇಶವೇ ಮುನ್ನುಡಿ.

ಲಲಿತಾ ಹಾಗೂ ಟಿ.ಎನ್.ರಮೇಶ್ ಅವರ ಪುತ್ರಿಯಾದ ಮಿತಾ ರಂಗ ಪ್ರವೇಶದ ನೃತ್ಯ ಕಾರ್ಯಕ್ರಮವು ಉದ್ಯಾನನಗರಿಯ ಎ.ಡಿ.ಎ.ರಂಗ ಮಂದಿರದಲ್ಲಿ ಅಕ್ಟೋಬರ್ 2ರಂದು ಸಂಜೆ 6.15ಕ್ಕೆ ಆರಂಭವಾಗಲಿದೆ.

ಪ್ರವೀಣ್ ಡಿ.ರಾವ್ (ತಬಲಾ), ಸಮನ್ವಿತಾ ಶರ್ಮ (ಗಾಯನ), ಫಿಯಾಜ್ ಖಾನ್ (ಸಾರಂಗಿ) ಹಾಗೂ ಪ್ರಕಾಶ್ ಪಿ.ಹೆಗ್ಡೆ (ಕೊಳಲು) ಅವರು ಸಂಗೀತ ಸಾಂಗತ್ಯ ನೀಡಲಿದ್ದಾರೆ.

ವಿಜಯಾ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಗುರುದಾಸ್ ಜಿ. ನರೆಕುಳಿ ಹಾಗೂ ಕಲಾ ವಿಮರ್ಶಕರಾದ ಡಾ.ಎಂ.ಸೂರ್ಯ ಪ್ರಸಾದ್ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ.



ಮಿತಾ ರಮೇಶ್ `ರಂಗ ಪ್ರವೇಶ'

ದಿನಾಂಕ: 2ನೇ ಅಕ್ಟೋಬರ್ 2009

ಸಮಯ: ಸಂಜೆ 6.15

ಸ್ಥಳ: ಎ.ಡಿ.ಎ. ರಂಗಮಂದಿರ, ನಂ.109,

ರವೀಂದ್ರ ಕಲಾಕ್ಷೇತ್ರ ಎದುರು,ಜೆ.ಸಿ.ರಸ್ತೆ,

ಬೆಂಗಳೂರು-560 002