7.07.2009

SAVE "BIRD"



ವಾಹನ ಡಿಕ್ಕಿ; ಅನಾಥ ಹಕ್ಕಿ


ದಿಕ್ಕು ತೋಚದಂತಾಗಿತ್ತು; ಅಮ್ಮ ಹಾಗೂ ಜೊತೆಗಿದ್ದ ಅಕ್ಕ-ತಂಗಿಯರೂ ವೇಗವಾಗಿ ಬಂದ ಆ ವಾಹನದಡಿ ಸಿಕ್ಕಿ ಇಹಲೋಕ ತ್ಯಜಿಸಿಯಾಗಿತ್ತು. ಅದರೂ ಆ ಪುಟ್ಟ ಹಕ್ಕಿ ತನ್ನ ತಾಯಿ ಹಾಗೂ ಒಡಹುಟ್ಟಿದವರು ಎದ್ದು ಬಂದಾರೂ ಎಂದು ಅಲ್ಲಿಯೇ ಕಾಯ್ದು ನಿಂತು, ಮುಖದ ತುಂಬಾ ಶೋಕ ಭಾವ ಹರಡಿಕೊಂಡಿತು. ಅದೆಷ್ಟೋ ಹೊತ್ತು ಕಾಯ್ದರೂ ಎದ್ದು ಬರಲಿಲ್ಲ...! ವಾಹನಗಳ ಅಬ್ಬರವಿದ್ದ ಆ ರಸ್ತೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಹಾಕಿ ನಡೆದಾಡಿಕೊಂಡು ತನ್ನ ಬಂಧುಗಳ ಕಳೆಬರವನ್ನು ನೋಡುತ್ತಲೇ ಅದೆಷ್ಟೋ ಹೊತ್ತು ಸವೆಸಿತ್ತು ಆ ಪುಟಾಣಿ ಹಕ್ಕಿ ಮರಿ.


ವಾಹನ ಡಿಕ್ಕಿ ಹೊಡೆದ ಪರಿಣಾಮ ತನ್ನವರನ್ನು ಕಳೆದುಕೊಂಡು ಅನಾಥವಾದ ಹಕ್ಕಿಗೆ ದಿಕ್ಕೇ ತೋಚದಂತಹ ಸ್ಥಿತಿ. ಹಾರುವುದನ್ನು ಕಲಿಸಿಕೊಡುವ ಮೊದಲೇ ಅಮ್ಮನ ಜೀವ ಹಾರಿ ಹೋಯಿತು. ಆದ್ದರಿಂದ ಹೆಜ್ಜೆ ಎಣಿಸಿದಂತೆ ನಡೆಯುತ್ತ ಅತ್ತ ಇತ್ತ ತಡಕಾಡಿತು. ವೇಗವಾಗಿ ಬರುತ್ತಿದ್ದ ವಾಹನಗಳು ಭಯ ಹುಟ್ಟಿಸುತ್ತಿದ್ದವು. ಜೊತೆಗೆ ಹಸಿವೆಯ ಕಾಟ. ಆದರೂ ಏನೂ ಮಾಡಲಾಗದ ಅಸಹಾಯಕತೆಯಲ್ಲಿ ನಿಂತಿತು ಹಕ್ಕಿ. ಇನ್ನಷ್ಟು ಹೊತ್ತು ಕಳೆದಿದ್ದರೆ; ತನ್ನ ತಾಯಿ ಹಾಗೂ ಒಡಹುಟ್ಟಿದವರಂತೆಯೇ ಅದೂ ಯಾವುದೋ ವಾಹನದ ಚಕ್ರಕ್ಕೆ ಆಹುತಿಯಾಗುವ ಅಪಾಯವಿತ್ತು.


ಅಗಲೇ ಬಂದರು ಆಪತ್ಬಾಂಧವರು. ಅವರೇ "ಹೊಯ್ಸಳ ಯೂತ್ಸ್ ಸ್ಪೋಟ್ಸರ್್ ಅಸೋಸಿಯೇಷನ್" ಯುವಕರು. ಅಸಹಾಯಕ ಸ್ಥಿತಿಯಲ್ಲಿ ಬಳಲಿದ್ದ ಇನ್ನೂ ರೆಕ್ಕೆ ಬಲಿಯದ ಹಕ್ಕಿಗೆ ತಮ್ಮ ಮಮತೆಯ ಆಸರೆ ನೀಡಿದರು. ಉದ್ಯಾನನಗರಿಯ ಕುಮಾರಸ್ವಾಮಿ ಬಡಾವಣೆಯ ಎರಡನೇ ಹಂತದ ಮುಖ್ಯ ರಸ್ತೆಯಲ್ಲಿ ಹಸಿವೆಯಿಂದಲೋ ಅಥವಾ ಇನ್ನಾವುದೋ ವಾಹನ ಡಿಕ್ಕಿ ಹೊಡೆಯುವ ಆತಂಕದ ಸುಳಿಯಲ್ಲಿ ಸಿಲುಕಿ ನಿಂತಿದ್ದ ಕೊಕ್ಕರೆ ಪ್ರಜಾತಿಯ "ಪಾಂಡ್ ಬ್ರೆಂಟ್" ಪುಟಾಣಿ ಹಕ್ಕಿಯು ಈ ಯುವಕರ ಸಹೃದಯತೆಯಿಂದ ಬದುಕುಳಿಯಿತು.


"ಪಾಂಡ್ ಬ್ರೆಂಟ್" ಎನ್ನಲಾಗುವ ಈ ಹಕ್ಕಿಯನ್ನು ರಕ್ಷಿಸಿದ "ಹೊಯ್ಸಳ ಯೂತ್ಸ್ ಸ್ಪೋಟ್ಸರ್್ ಅಸೋಸಿಯೇಷನ್" ಕಾರ್ಯದಶರ್ಿ ಕಿರಣ್ ಆಳ್ವ, ಸದಸ್ಯರಾದ ನಟರಾಜ್, ಶೋಭಾ ಲೋಲನಾಥ್, ಕಾಶಿ ಮಂಜುನಾಥ್ ಹಾಗೂ ಸುದರ್ಶನ ಬಾಬು ಅವರು ಹಸಿವೆಯಿಂದ ಬಳಲಿದ್ದ "ಪಾಂಡ್ ಬ್ರೆಂಟ್" ಹಕ್ಕಿಗೆ ವೈದ್ಯರಿಂದ ಚಿಕಿತ್ಸೆ ಕೂಡ ಕೊಡಿಸಿ, ಮೀನು ಹಾಗೂ ಹಾಲಿನ ಕೆನೆಯನ್ನು ತಿನ್ನಿಸಿ ಅಮೂಲ್ಯವಾದ ಈ ಜೀವವೊಂದನ್ನು ರಕ್ಷಿಸಿದರು.


ಕುಮಾರಸ್ವಾಮಿ ಬಡಾವಣೆಯ ಎರಡನೇ ಹಂತವು ಹಿಂದೆ ಗದ್ದೆ, ತೋಟಗಳು ಹಾಗೂ ಪುಟ್ಟ ಪುಟ್ಟ ಕೆರೆಗಳು ಇದ್ದಂತಹ ಪ್ರದೇಶ. ಆದ್ದರಿಂದ ಈಗಲೂ ಅಲ್ಲಿ ಇಂತಹ ವಿಶಿಷ್ಟವಾದ ಪ್ರಜಾತಿಯ ಹಕ್ಕಿಗಳು ಆಹಾರವನ್ನು ಅರಸಿಕೊಂಡು ಬರುತ್ತವೆ. ಆದರೆ ಕಾಂಕ್ರೀಟ್ ಕಟ್ಟಡಗಳು ದಟ್ಟೈಸಿರುವುದರಿಂದ ಅಲ್ಲಿ ಆಹಾರ ಸಿಗುವುದಿಲ್ಲ; ಬದಲಿಗೆ ಇಂತಹ ಹಕ್ಕಿಗಳ ಜೀವಕ್ಕೆ ವೇಗವಾಗಿ ಬರುವ ವಾಹನಗಳು ಎರವಾಗುತ್ತವೆ.


ಈ ಹಕ್ಕಿಯ ಕುಟುಂಬವೂ ಹೀಗೆ ಆಹಾರವನ್ನು ಅರಸಿಕೊಂಡು ಬಂದಿರಬಹುದು. ಆದರೆ ಆಹಾರ ಸಿಗಲಿಲ್ಲ; ಬದಲಿಗೆ ಅದು ಅನಾಥವಾಗಿ ಉಳಿಯಿತು. ತನ್ನವರನ್ನು ಕಳೆದುಕೊಂಡ ಈ ಹಕ್ಕಿಗೆ "ಹೊಯ್ಸಳ ಯೂತ್ಸ್ ಸ್ಪೋಟ್ಸರ್್ ಅಸೋಸಿಯೇಷನ್" ಯುವಕರು ಕೆಲವು ದಿನ ಆರೈಕೆ ನೀಡಿ, ಮತ್ತೆ ಅದನ್ನು ಸುರಕ್ಷಿತವಾದ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಬಿಡಲು ತೀಮರ್ಾನಿಸಿದ್ದಾರೆ. ಅದಕ್ಕೆ ಸಂಬಂದಿಸಿದಂತೆ ಹಕ್ಕಿಗಳ ವಿಷಯದಲ್ಲಿ ಪರಿಣತರಾದವರ ಮಾರ್ಗದರ್ಶನ ಕೂಡ ಪಡೆದಿದ್ದಾರೆ.


ಆದ್ದರಿಂದ "ಪಾಂಡ್ ಬ್ರೆಂಟ್" ತಳಿಯ ಈ ಪುಟ್ಟ ಹಕ್ಕಿಗೆ ಸುರಕ್ಷತೆಯ ಅನುಭವ. ವೈದ್ಯರು ಚಿಕಿತ್ಸೆ ನೀಡಿದ ನಂತರ ಇದೇ ಯುವಕರ ಜೊತೆಗೆ ಅದು ತನ್ನ ಗೆಳೆಯರೆನ್ನುವಂತೆ ಆಡುತ್ತಿದೆ. ಆದರೆ ಇದನ್ನು ಆದಷ್ಟು ಬೇಗ ಅದಕ್ಕೆ ಹಿತವೆನಿಸುವಂತಹ ವಾತಾವರಣದಲ್ಲಿ ಬಿಟ್ಟು ಬರುವುದು "ಹೊಯ್ಸಳ ಯೂತ್ಸ್ ಸ್ಪೋಟ್ಸರ್್ ಅಸೋಸಿಯೇಷನ್"ನ ಯುವಕರ ಆದ್ಯತೆ.