7.07.2009

"NOORU DINAGALU" TV SERIAL


ನೂರು ದಿನಗಳಿಗೆ ರೋಚಕ ತಿರುವು!


"ನೂರು ದಿನಗಳು" ಇದು ರೋಚಕ ಎಳೆಗಳ ಜಾಲದಲ್ಲಿ ಬಂಧಿಯಾಗಿರುವ ಕಥೆ. ಹನ್ರೆಡ್ ಡೇಸ್ನಲ್ಲಿ ಏನಾಗುತ್ತದೆ? ಎನ್ನುವ ಕುತೂಹಲ ಕಾಯ್ದುಕೊಂಡು ಹೋಗುವುದು ಸುಲಭವಲ್ಲ. ಇಂತಹ ಸಾಹಸಕ್ಕೆ ಬಲವುಳ್ಳ ಪಾತ್ರಗಳೂ ಮುಖ್ಯ. ಅಪರಾಧದ ಸಾಗರದಲ್ಲಿ ಇರುವ ಸಣ್ಣ ಮೀನುಗಳನ್ನು ಜಾಲಾಡುತ್ತಾ ದೊಡ್ಡ ತಿಮಿಂಗಿಲವನ್ನು ಬಲೆಗೆ ಬೀಳಿಸಬೇಕು. ಆದರೆ ಇಂತಹ ಸಾಹಸ ಮಾಡುವ ನಾಯಕಿಗೆ ಸವಾಲಾಗಿ ನಿಲ್ಲುವಂತಹ ವಿಲನ್ ಕೂಡ ಬೇಕಲ್ಲ! ನಾಯಕಿಗೆ ಸಮತೂಕದ "ಲೇಡಿ ವಿಲನ್" ಇದ್ದರೆ ಈಗಿನ ಟ್ರೆಂಡ್ಗೆ ಸರಿ ಹೋಗುತ್ತದೆ. ಅಂತಹ ಲೇಡಿ ವಿಲನ್ ಪಾತ್ರವನ್ನು 'ನೂರು ದಿನಗಳು' ಧಾರಾವಾಹಿಯನ್ನು "ಜೀ ಕನ್ನಡ" ವಾಹಿನಿಗಾಗಿ ಸಿದ್ಧಪಡಿಸಿರುವ "ಸೂತ್ರಧಾರ" ನಿಮರ್ಾಣ ಸಂಸ್ಥೆಯು ಸೃಷ್ಟಿಸಿದೆ.

"ನೂರು ದಿನಗಳು" ಧಾರಾವಾಹಿಗೆ ಪ್ರತಿಯೊಂದು ಕ್ಷಣವೂ ರೋಚಕ ತಿರುವು ನೀಡುವಂತಹ ಲೇಡಿ ಕಿಲ್ಲರ್ ಪಾತ್ರಕ್ಕೆ ಹೆಸರು ಮಾತ್ರ ಇಲ್ಲ. ಅನಾಮಿಕವಾದ ಇಂತಹದೊಂದು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಶೋಭಾ ಲೋಲನಾಥ್. ಕಥೆಯ ನಾಯಕಿ ವಿದ್ಯಾ ಶರ್ಮ (ಅನು ಪ್ರಭಾಕರ್) ಪಾತ್ರವು ತನ್ನ ಬಲವನ್ನು ಕಂಡುಕೊಳ್ಳುವುದೇ ಈ ಅನಾಮಿಕ ವಿಲನ್ ಪಾತ್ರದ ಪೋಷಣೆಯಿಂದ. ಪೊಲೀಸ್ ಅಧಿಕಾರಿ ವಿದ್ಯಾಗೆ "ನೂರು ದಿನಗಳಲ್ಲಿ ಏನಾಗುತ್ತದೆ?' ಎನ್ನುವ ಸವಾಲು ಕಾಡುತ್ತಿದ್ದರೆ; ಆ ಸವಾಲು ಇನ್ನಷ್ಟು ಜಟಿಲವಾಗುವಂತೆ ಮಾಡುವುದೇ ಲೇಡಿ ಸುಪಾರಿ ಕಿಲ್ಲರ್ ಉದ್ದೇಶ.

ಪ್ರತಿಯೊಂದು ಸಂದರ್ಭದಲ್ಲಿ ವಿಭಿನ್ನವಾದ ರೂಪದಲ್ಲಿ ಕಾಣಿಸಿಕೊಳ್ಳುವ ಖಳನಾಯಕಿ ಮಾಡುವ ಕೃತ್ಯಗಳೂ ಅಷ್ಟೇ ಭಯಾನಕ. ಕಸಗುಡಿಸುವವಳಾಗಿ ಬಂದು ತನ್ನ ಬೇಟೆಗಾಗಿ ಬಲೆ ಬೀಸುವುದು, ದೊಡ್ಡದೊಂದು ಅಪರಾಧಕ್ಕಾಗಿ ಸ್ಕೆಚ್ ಹಾಕಲು ವೇಷ ಮರೆಸುವುದು, ಇನ್ನೊಮ್ಮೆ ಡೆಡ್ಲಿ ಡೀಲ್ ಮಾಡುವ ಸೂತ್ರಧಾರಿ ಆಗುವುದು ಎಲ್ಲವೂ ವಿಶಿಷ್ಟ. ನಾಯಕಿ ಹಾಗೂ ಅವಳ ಬಾಲಂಗೋಚಿಗಳ ಹುಡುಕಾಟದ ಹಾದಿಯಲ್ಲಿ ಸದಾ ಕಲ್ಲು ಮುಳ್ಳು ಸುರಿಯುವ ಹಾಗೂ ಕಂದಕ ತೋಡುವ "ಲೇಡಿ ಕಿಲ್ಲರ್" ತನ್ನ ಗಟ್ಟಿತನದಿಂದಾಗಿ ನೂರಾರು ಪಾತ್ರಗಳ ನಡುವೆ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಂಡರೂ ನೆನಪಿನಲ್ಲಿ ಗಟ್ಟಿಯಾಗುವುದು ಮಾತ್ರ ಖಚಿತ.

ಇಂತಹದೊಂದು ಸವಾಲಿನ ಪಾತ್ರವನ್ನು ನಿಭಾಯಿಸಿರುವ ಶೋಭಾ ಲೋಲನಾಥ್ ಅವರು ತಮ್ಮ ಗಟ್ಟಿ ಅಭಿನಯದಿಂದ ಬಾಕಿ ಪಾತ್ರಗಳನ್ನು ಮೆಟ್ಟಿ ನಿಲ್ಲುತ್ತಾರೆ. ನಿದರ್ೇಶಕ ಕಣ್ಣನ್ ಪರಮೇಶ್ವರನ್ ಅವರ ಆಶಯವೂ ಅದೇ ಆಗಿದೆ. ವಿಲನ್ ಪಾತ್ರವನ್ನು ಬಲಗೊಳಿಸುವ ಮೂಲಕ ನಾಯಕಿಯ ಸಾಹಸಕ್ಕೆ ಬೆಲೆ ಬರುವಂತೆ ಮಾಡುವುದು. ಆ ನಿಟ್ಟಿನಲ್ಲಿ ಶೋಭಾ ಲೋಲನಾಥ್ ತಮಗೆ ನೀಡಿರುವ ಅನಾಮಿಕ ಪಾತ್ರವನ್ನು ಸಮರ್ಥವಾಗಿಯೇ ನಿಭಾಯಿಸಿದ್ದಾರೆ.

ಕನರ್ಾಟಕದ ರಾಜಧಾನಿ ಬೆಂಗಳೂರಿನಲ್ಲಿ ನೂರು ದಿನಗಳಲ್ಲಿ ಏನಾಗುತ್ತದೆ ಎನ್ನುವ ಆಸಕ್ತಿಯನ್ನು ಬಲವಾಗಿ ಉಳಿಸಿಕೊಂಡು ಹೋಗುವ ಪ್ರಯತ್ನ ನಡೆಸಿರುವ ನಿದರ್ೇಶಕ ಕಣ್ಣನ್ ಅವರು ಕೇವಲ ನಾಯಕಿ ವಿದ್ಯಾ ಪಾತ್ರದ ಸುತ್ತ ಅನೇಕ ಅಪರಾಧಿಗಳ ದಂಡಿನ ಹುತ್ತ ಬೆಳೆಸಿದ್ದಾರೆ. ಆದರೆ ಈ ಎಲ್ಲ ಪಾತ್ರಗಳ ಸೂತ್ರವನ್ನು ಕೊಟ್ಟಿರುವುದು ನಿಗೂಢವಾದ ಪಾತ್ರವೊಂದರ ಕೈಗೆ. ಆ ನಿಗೂಢ ವಿಲನ್ನಿನ ಪ್ರತಿನಿಧಿಯೇ ಶೋಭಾ ಲೋಲನಾಥ್ ಅವರು ನಿಭಾಯಿಸುತ್ತಿರುವ "ಲೇಡಿ ಕಿಲ್ಲರ್" ಪಾತ್ರ.

ಈಗಾಗಲೇ ಕೆಲವು ವಾರಗಳ ಪ್ರಸಾರ ಕಂಡಿರುವ "ನೂರು ದಿನಗಳು" ಧಾರಾವಾಹಿಯಲ್ಲಿ ಅನಾಮಿಕ ಲೇಡಿ ವಿಲನ್ (ಶೋಭಾ ಲೋಲನಾಥ್) ತನ್ನ ಗಟ್ಟಿತನದಿಂದ ವೀಕ್ಷಕರ ಮನದಲ್ಲಿ ಮನೆ ಮಾಡಿದೆ. ಈ ಥ್ರಿಲ್ಲರ್ ಕಥೆಯ ರೋಮಾಂಚನ ಹೆಚ್ಚಿಸುವ ಪಾತ್ರವನ್ನು ಮತ್ತೆ ಮತ್ತೆ ನೋಡಲು ಬಯಸುತ್ತಾರೆ. ನಾಯಕಿ ವಿದ್ಯಾ ಶರ್ಮ (ಅನು ಪ್ರಭಾಕರ್) ಹಾಗೂ ಅನಾಮಿಕ ಖಳನಾಯಕಿ (ಶೋಭಾ ಲೋಲನಾಥ್) ಮುಖಾಮುಖಿ ಯಾವಾಗ? ಎಂದು ಆಸಕ್ತಿಯಿಂದ ಕಾಯ್ದಿದ್ದಾರೆ. ಇಂತಹ ಕ್ಯೂರಾಸಿಟಿಯೇ "ನೂರು ದಿನಗಳು" ಜನಪ್ರಿಯವಾಗುವಂತೆ ಮಾಡಿದೆ.
"ನೂರು ದಿನಗಳು" ಧಾರಾವಾಹಿಯಲ್ಲಿ ಮುಂದೇನು....!?